spot_img
spot_img

‘ಸಾಹಿತ್ಯಕ್ಕೆ ಸ್ವಂತಿಕೆ ಇರಲಿ ನಕಲು ಸಾಹಿತ್ಯ ಬೇಡ’- ಕುಲಪತಿ ಪ್ರೊ. ಎಂ ರಾಮಚಂದ್ರಗೌಡ

Must Read

- Advertisement -

ಬೆಳಗಾವಿ – ಸೋಮವಾರ ದಿ. 31ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ ಉಪನ್ಯಾಸಕಿ ಲೇಖಕಿ ಡಾ. ಕವಿತಾ ಕುಸುಗಲ್ಲ ರವರು ರಚಿಸಿದ ‘ ‘ಬೆಳಕಿನ ಬಿತ್ತನೆ’ ಕವನ ಸಂಕಲನ ಮತ್ತು’ ಚಾರ್ಲ್ಸ್ ಸೋಭರಾಜ್ ಮತ್ತು ಇತರ ಕಥೆಗಳು’ ಇಂಗ್ಲಿಷ್ ಕಥಾಸಂಕಲನಗಳ ಲೋಕಾರ್ಪಣೆ ಸಮಾರಂಭ ಜರುಗಿತು.

ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಮ್. ರಾಮಚಂದ್ರಗೌಡ ಮಾತನಾಡುತ್ತಾ, ಸಾಹಿತ್ಯದ ಯಾವುದೇ ಪ್ರಕಾರ ವಾಗಿರಲಿ ಯಾವುದೇ ಭಾಷೆಯಾಗಿರಲಿ ಅಲ್ಲಿ ಸ್ವಂತಿಕೆ ಇರಬೇಕು. ನಕಲು ಸಂಸ್ಕೃತಿ ಸಾಹಿತ್ಯವನ್ನು ಕಳಾಹೀನ ಗೊಳಿಸುವುದು. ಸಾಹಿತಿಗಳಿಂದ ಒಳ್ಳೆಯ ಸಾಹಿತ್ಯ ಸಿಕ್ಕರೆ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸುವುದರ ಜೊತೆಗೆ ವಿವಿಧ ಪದವಿಗಳ ಪಠ್ಯ ವಸ್ತುಗಳಲ್ಲೂ ಅದನ್ನು ಅಳವಡಿಸಲು ಶ್ರಮಿಸುತ್ತೇವೆ. ಬೆಂಗಳೂರು ಹೋಲಿಸಿದರೆ ಬೆಳಗಾವಿ ಸಾಹಿತ್ಯದಲ್ಲಿ ನಿಜಕ್ಕೂ ಮುಂಚೂಣಿಯಲ್ಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಾಧ್ಯಾಪಕ ಏನಾದರೂ ಕಾಣಿಕೆ ಕೊಡಬೇಕು ಎನ್ನುವ ಮನಸ್ಥಿತಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಕುಸುಗಲ್ ರವರ ಸೇವೆ ಶ್ಲಾಘನೀಯ. ಇಂತಹ ಸಾಹಿತ್ಯ ಸೇವೆ ಮುಂದುವರೆಯಲಿ ಕನ್ನಡನಾಡಿನ ಮಹಿಳೆಯೊಬ್ಬಳಿಗೆ ಜ್ಞಾನಪೀಠ ಪ್ರಶಸ್ತಿ ಸಿಗುವ ನಿಟ್ಟಿನಲ್ಲಿ ಲೇಖಕಿಯರ ಸಾಹಿತ್ಯ ಬೆಳೆಯಲಿ ಎಂದರು.

- Advertisement -

ಬೆಳಕಿನ ಬಿತ್ತನೆ ಕವನ ಸಂಕಲನ ಪರಿಚಯಿಸುತ್ತಾ ಸಾಹಿತಿ ಡಾ. ಗುರುಪಾದ ಮರಿಗುದ್ದಿ ಮಾತನಾಡಿ, ಕವನಸಂಕಲನದಲ್ಲಿ ಲೋಕ ಮತ್ತು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕವಿತೆಗಳಿವೆ. ಸಾಮಾಜಿಕ ಪರಿವರ್ತನೆಯ ಆಶಯ ಅಡಗಿದೆ. ಕಾವ್ಯ ನಿತ್ಯವೂ ಹೊಸದು ಮತ್ತು ಗಂಭೀರವಾದದ್ದು ಓದಿ ಆಸ್ವಾದಿಸಬೇಕು ಎಂದರು. ಮೂಲ ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರಗೊಂಡ ‘ಚಾರ್ಲ್ಸ್ ಶೋಭರಾಜ್ ಮತ್ತು ಇತರ ಕಥೆಗಳು’ ಕಥಾಸಂಕಲನವನ್ನು ಪರಿಚಯಿಸುತ್ತಾ ಮಾತನಾಡಿದ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಭಾಷಾಂತರ ಮಾಡುವ ಕೆಲಸ ಕಷ್ಟಕರವಾದದ್ದು. ಭಾವನೆಗಳನ್ನು ತರ್ಜುಮೆ ಮಾಡುವುದು ಅತಿ ಕಷ್ಟ. ಆ ನಿಟ್ಟಿನಲ್ಲಿ ಕವಿತಾ ಕುಸುಗಲ್ಲ ರವರ ಅನುವಾದ ನಿಜಕ್ಕೂ ಮೂಲ ಸಾಹಿತ್ಯವನ್ನು ಮೀರಿಸುವಂತಿದೆ. ಕಥಾಸಂಕಲನ ದಲಿತ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಸೈಬರ್ ಕ್ರೈಮ್, ಅಧಿಕಾರಶಾಹಿತ್ವ, ತತ್ವರಹಿತ ರಾಜಕಾರಣ, ಅಂದಶ್ರದ್ದೆ ಮುಂತಾದವುಗಳನ್ನು ಕಣ್ಣಿಗೆ ಕಟ್ಟಿಕೊಡುವಂತೆ ಮಾನವತೆಯ ಮಾನವನ್ನು ಕಳೆಯುವ ಕಥೆಗಳು ಚೆನ್ನಾಗಿ ಮೂಡಿಬಂದಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಪತ್ರಕರ್ತ ಡಾ. ಸರಜೂ ಕಾಟ್ಕರ್ ರ ವರು ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಅನುವಾದಕರಿಂದ ಮನ್ನಣೆ ಪಡೆದಿರುವ ಕುಸುಗಲ್ಲ ರವರ ಕಥಾಸಂಕಲನ ಮೂಲ ಕನ್ನಡದ ಕಥೆಗಳನ್ನು ಮೀರಿಸುವಂತೆ ಮೂಡಿಬಂದಿವೆ. ಸಾಹಿತ್ಯಕವಾಗಿ ಇನ್ನಷ್ಟು ಬೆಳೆಯಲಿ ಎಂದರು. ಕೃತಿಗಳ ಕರ್ತೃ ಡಾ. ಕವಿತಾ ಕುಸುಗಲ್ ಎಲ್ಲ ಅತಿಥಿ ಮಾನ್ಯ ರನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿ ಹಿರಿಯರ ಆಶೀರ್ವಾದ, ಪ್ರೋತ್ಸಾಹ, ಮತ್ತು ಲೇಖಕಿಯರ ಸಂಘದ ಪ್ರೇರಣೆಯಿಂದ ನನಗೆ ಇಂತಹ ಕೃತಿಗಳನ್ನು ಹೊರತರಲು ಸಾಧ್ಯವಾಯಿತು ಎಂದು ಕೃತಜ್ಞತೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಬಿ.ಎಫ್ ಸೋಮಣ್ಣವರ ರವರು ತಾವೇ ರಚಿಸಿದ ಅನುಭವ ಮಂಟಪದ ಚಿತ್ರ ಕಲಾಕೃತಿಗಳನ್ನು ವೇದಿಕೆಯ ಮೇಲಿನ ಗಣ್ಯರಿಗೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಚಂದ್ರಕಾಂತ ಪೋಕಳೆ, ರಾಮಕೃಷ್ಣ ಮರಾಠೆ, ಶ್ರೀರಂಗ ಜೋಶಿ, ಡಾ. ಜಯವಂತ ಧನವಂತ, ಎ. ಬಿ. ಇಟಗಿ, ಬಸವರಾಜ ಸುಣಗಾರ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ಲೇಖಕಿಯರ ಸಂಘದ ಸದಸ್ಯರಾದ ಲಲಿತಾ ಪರ್ವತ ರಾವ್, ಸುನಿತಾ ದೇಸಾಯಿ, ಸುನಂದಾ ಹಾಲಬಾವಿ, ರೇಣುಕಾ ಜಾಧವ, ಜ್ಯೋತಿ ಮಾಳಿ, ವಿದ್ಯಾ ಹುಂಡೇಕಾರ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಶಿವು ರಾಥೋಡ, ವಿನಾಯಕ ನಂದಿ, ಸಂಜು ಗದ್ದನಕೇರಿ, ಪುಷ್ಪಾ ವಡ್ಡರ, ಗೋಪಾಲ ದಳವಾಯಿ ಸೇರಿದಂತೆ ಸಾಹಿತ್ಯಾಸಕ್ತರು ಹಾಜರಿದ್ದರು.

- Advertisement -

ಕಾರ್ಯಕ್ರಮದ ಆರಂಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ ಆಶಾ ಕಾಂಬ್ಳೆ ಮತ್ತು ಶ್ರುತಿ ಬದೊಡೆ ಪ್ರಾರ್ಥಿಸಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೊಳ್ಳಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಆಶಾ ಯಮಕನಮರಡಿ ಕುಸುಗಲ್ ರವರ ಕವನ ಹಾಡಿದರು . ಕಾರ್ಯದರ್ಶಿ ರಾಜನಂದಾ ಘಾರ್ಗಿ ನಿರೂಪಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group