spot_img
spot_img

ಸಾಹಿತಿ ರಂಜನಾ ನಾಯಿಕ ರವರ ಕೃತಿಗಳ ಲೋಕಾರ್ಪಣೆ ಸಮಾರಂಭ

Must Read

- Advertisement -

ಬೆಳಗಾವಿ – ಇದೇ ದಿ. 28 ರಂದು ಶುಕ್ರವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ‘ಜಿಲ್ಲಾ ಲೇಖಕಿಯರ ಸಂಘ’ ಮತ್ತು ‘ಸಾಹಿತ್ಯ ಕಲಾ ವೇದಿಕೆ ಕನ್ನಡ ಮಹಿಳಾ ಸಂಘ’ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ರಂಜನಾ ನಾಯಿಕ ಅವರು ಬರೆದ ‘ಕಾರಂತ್ ನೆನಪಿನ ಕಾರವಾನ್’ ಮತ್ತು ‘ಇಪ್ಪತ್ತೊಂದು ಬೆಳಕು ನೆರಳಿನಾಟ ‘ನಾಟಕಗಳ ಸಂಗ್ರಹದ ಕೃತಿ ಲೋಕಾರ್ಪಣೆ ಸಮಾರಂಭ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾವತಿ ಸೊನೋಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಮಹಿಳೆಯರು ತಮ್ಮದೇ ಆದ ಛಾಪು ಒತ್ತಿದ್ದಾರೆ. ಕೇವಲ ಕವನ ಸಂಕಲನ,ಕಥೆ, ಕಾದಂಬರಿ ಎನ್ನದೇ ನಾಟಕಗಳ ಸಂಗ್ರಹಕ್ಕೂ ಸಹಿತ ಪುಸ್ತಕ ರೂಪ ಕೊಡುತ್ತಿರುವುದು ನಿಜವಾಗಲೂ ಮಹಿಳಾ ಸಾಹಿತಿಗಳು ಎಲ್ಲಾ ರಂಗಗಳಲ್ಲೂ ಮಿಂಚುತ್ತಿದ್ದಾರೆ ಇದು ಮುಂದುವರೆಯಲಿ ಎಂದರು.

ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ವಿಶೇಷವಾಗಿ ನಾಟಕರಚನೆ ಸಾಹಿತ್ಯದಲ್ಲಿ ಬಹಳ ಕಷ್ಟಕರವಾದ ಕೆಲಸ ಸಾಹಿತಿಯಾದವನಿಗೆ ಸಾಹಿತ್ಯದ ಘನತ್ವ ಮತ್ತು ಲಘುತ್ವ ದ ಎರಡು ಕಲ್ಪನೆಗಳು ಇರಬೇಕು. ಅಂದಾಗ ಮಾತ್ರ ಸಾಹಿತ್ಯ ರಸಯುಕ್ತ ವಾಗುವುದು ಎಂದರು.

- Advertisement -

ನಾಟಕ ಸಂಗ್ರಹದ ಪರಿಚಯ ಮಾಡುತ್ತಾ ಮಾತನಾಡಿದ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ, ನಾಟಕಗಳಲ್ಲಿ ಸ್ವಾಮಿ ಅಯ್ಯಪ್ಪನ ಜನ್ಮವೃತ್ತಾಂತ, ಸೀತಾಪರಿತ್ಯಾಗ, ಶ್ರೀ ಕೃಷ್ಣನ ಮಹಿಮೆ ಇವುಗಳ ಕುರಿತು ವೈಜ್ಞಾನಿಕ ಕಾರಣಗಳನ್ನು ಕೊಡುತ್ತಾ ಕೃತಿಯಲ್ಲಿ ಅಡಗಿರುವ ಮಾಹಿತಿಯನ್ನು ವಿಶ್ಲೇಷಿಸಿದರು.

ಕೃತಿ ಪರಿಚಯ ಮಾಡಿದ ಸಾಹಿತಿ ಡಾ. ನಿರ್ಮಲಾ ಬಟ್ಟಲ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಾಟಕ ಅಭಿನಯದಲ್ಲಿ ಬಹುಮುಖ್ಯವಾದದ್ದು. ಬೆಳಕಿನಲ್ಲಿ ನೆರಳಿನ ಮೂಲಕ ಸನ್ನಿವೇಶಗಳನ್ನು ಸೃಷ್ಟಿಸುವುದರಿಂದ ಪ್ರೇಕ್ಷಕರಿಗೆ ಹೆಚ್ಚಿನ ವಿಷಯ ಜ್ಞಾನ ಅತ್ಯಂತ ಕಡಿಮೆ ಅವಧಿಯಲ್ಲಿ ತಿಳಿಸಬಹುದು ಎಂದು ಅಭಿಪ್ರಾಯಪಟ್ಟರು.ನಾಟಕಗಳಿಂದ ಪ್ರೇಕ್ಷಕರ ಆಸಕ್ತಿಯನ್ನು ಅರಳಿಸುವ ಕಲೆಗಾರಿಕೆ ಸಾಹಿತಿ ಯಾದವರಲ್ಲಿ ಇರಬೇಕು ಎಂದರು.

- Advertisement -

‘ಕಾರಂತ್ ನೆನಪಿನ ಕಾರವನ್’ ಕೃತಿ ಪರಿಚಯಿಸಿದ ಡಾ. ಶೋಭಾ ನಾಯಿಕ ಅವರು ಮಾತನಾಡುತ್ತಾ, ಕಡಲ ತೀರ ಭಾರ್ಗವ ಡಾ. ಕಾರಂತರ ಆತ್ಮಚರಿತ್ರೆಯ ಜೀವನದ ಪಯಣವನ್ನು ಅದ್ಭುತವಾಗಿ ವರ್ಣಿಸಲಾಗಿದೆ . ಹಿರಿಯ ಮತ್ತು ಕಿರಿಯ ಸಾಹಿತಿಗಳ ಒಡನಾಟದಲ್ಲಿ ಕೃತಿ ರಚನೆಕಾರರು ರಚಿಸಿದ ಲೇಖನಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದರು. ಕೃತಿಕಾರರಾದ ರಂಜನಾ ನಾಯಿಕ ಮಾತನಾಡಿ, ಸಾಹಿತ್ಯವನ್ನು ರಂಜನೀಯಗೊಳಿಸುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ರಚಿಸಲಾಗಿರುವ ನನ್ನ ಕೃತಿಗಳು ಓದುಗರನ್ನು ನಿಶ್ಚಿತವಾಗಿಯೂ ಸೆಳೆಯುವನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಕೃತಿಕಾರರು ಸೇರಿದಂತೆ ಹಿರಿಯ ಸಾಹಿತಿಗಳನ್ನು ಸಂಘಗಳ ವತಿಯಿಂದ ಸನ್ಮಾನಿಸಲಾಯಿತು. ಲೇಖಕಿಯರ ಸಂಘದ ಸದಸ್ಯೆ ರೋಹಿಣಿ ಯಾದವಾಡ ಅವರು ತಮ್ಮ ತಂದೆ ಶಿವಪುತ್ರ ಮತ್ತು ತಾಯಿ ಶಶಿಕಲಾ ಯಾದವಾಡ ಅವರ ಹೆಸರಿನಲ್ಲಿ 25 ಸಾವಿರ ರೂಪಾಯಿಗಳ ದತ್ತಿನಿಧಿಯನ್ನು ಸಂಘಕ್ಕೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಕೆ.ಆರ್ ಸಿದ್ದಗಂಗಮ್ಮ,ಪಾರ್ವತಿ ಪಿಟಗಿ, ಜ್ಯೋತಿ ಮಾಳಿ, ಸುಧಾ ಪಾಟೀಲ, ಸುನಿತಾ ಸೊಲ್ಲಾಪುರ, ಪ್ರೇಮಾ ಪಾನಶೆಟ್ಟಿ, ಉಮಾ ಅಂಗಡಿ,ಆಶಾ ಯಮಕನಮರಡಿ, ವೀರಭದ್ರ ಅಂಗಡಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಾಹಿತ್ಯ ಕಲಾ ವೇದಿಕೆಯ ಸದಸ್ಯರು ಪ್ರಾರ್ಥಿಸಿದರು. ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು.ಇಂದಿರಾ ಮೋಟೆಬೆನ್ನೂರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಜನಂದಾ ಘಾರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವಿದ್ಯಾ ಹುಂಡೆಕಾರ ವಂದಿಸಿದರು.

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group