- Advertisement -
ಲೋಧ್ರಾ ನಮ್ಮಲ್ಲಿ ಬೆಳೆಯುವ ಔಷಧೀಯ ಗಿಡ ಅಲ್ಲ. ತುಂಬಾ ಔಷಧೀಯ ಗುಣ ಹೊಂದಿರುವ ಗಿಡ ಇದರ ಚಕ್ಕೆ ಹೆಚ್ಚು ಉಪಯುಕ್ತ. ದಶಮೂಲಾರಿಷ್ಠ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಲೋಧ್ರಾ ದೇಹದ ಯಾವುದೇ ಭಾಗವನ್ನು ಬಲಪಡಿಸುತ್ತದೆ.
- ಪಿತ್ತ ಗಾದೆಯಲ್ಲಿ ಕಷಾಯ ಮಾಡಿ ಕುಡಿಯುವುದರಿಂದ ಗುಣವಾಗುತ್ತದೆ.
- ಚಕ್ಕೆಯನ್ನು ಬೇವಿನ ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
- ಹದವರಿತು ಮಾಡಿದ ಔಷಧಿ ಕುಷ್ಠರೋಗ ದಂತಹ ಘನವಾದ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ.
- ಮೂಳೆಮುರಿತದಲ್ಲಿ ಪಟ್ಟು ಹಾಕಲು ಮತ್ತು ಹೊಟ್ಟೆಗೆ ತೆಗೆದುಕೊಳ್ಳಲು ಉಪಯೋಗಿಸುತ್ತಾರೆ.
- ಕಾಳು ಮೆಣಸು ಏಲಕ್ಕಿ ಜೊತೆಯಲ್ಲಿ ಚಕ್ಕೆಯನ್ನು ಸೇರಿಸಿ ಮಾಡುವ ಕಷಾಯ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
- ಶುಂಠಿಯೊಂದಿಗೆ ಸೇರಿಸಿ ತಯಾರಿಸಿದ ಕಷಾಯ ಕಫ ಕೆಮ್ಮು ನಿವಾರಕ.
- ಅತಿಯಾದ ಮುತ್ತು ಕಡಿಮೆ ಮಾಡಿ ಗರ್ಭಾಶಯ ಸಹಜ ಸ್ಥಿತಿಗೆ ತರಲು ಇದು ಒಳ್ಳೆಯ ಔಷಧೀಯ ಸಸ್ಯ.
- ಬೆಣ್ಣೆಯೊಂದಿಗೆ ಸೇವಿಸಿದರೆ ಬಿಳಿ ಮುಟ್ಟು ಗುಣವಾಗುತ್ತದೆ.
- ಹೆರಿಗೆಯ ನಂತರದ ಗರ್ಭಾಶಯ ವು ಸಹಜ ಸ್ಥಿತಿಗೆ ಬರಲು ನಾನು ತಯಾರಿಸುವ ಲೇಹ್ಯದಲ್ಲಿ ಇದು ಒಳಗೊಂಡಿದೆ ಹೆಣ್ಣು ಮಕ್ಕಳ ಸಮಸ್ಯೆಗಂತೂ ತುಂಬಾ ಉಪಯುಕ್ತವಾದ ಲೇಹ್ಯ ಇದಾಗಿದೆ.
- ಹೆಚ್ಚಾಗಿ ಸೇವಿಸಿದರೆ ದೇಹದ ರಕ್ತ ಹೆಪ್ಪುಗಟ್ಟಿ ರಕ್ತ ಸಂಚಾರ ಕ್ಕೆ ತೊಂದರೆ ಆಗುತ್ತದೆ.
ಸುಮನಾ ಮಳಲಗದ್ದೆ.9980182883.