ಆಗಸ್ಟ್ 14 ಕ್ಕೆ ಲೋಕ ಅದಾಲತ್ : ಕೋರ್ಟ್ ಕೇಸ್ ರಾಜಿ ಸಂಧಾನಕ್ಕೆ ಬೃಹತ್ ವೇದಿಕೆ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...
  • 2110 ಪ್ರಕರಣಗಳ ಇತ್ಯರ್ಥ ಸಾಧ್ಯತೆ ಸಿವಿಲ್ ನ್ಯಾಯಾಧೀಶರು
  • ರಾಜಿ ಸಂಧಾನ ಆದರೆ ಪ್ರಕರಣದ ಶುಲ್ಕ ಮರಪಾವತಿ
  • ಸಿವಿಲ್ ಮತ್ತು ಇನ್ನಿತರ ವ್ಯಾಜ್ಯಗಳ ಕೇಸ್ ಗಳ ಸಾರ್ಟೌಟ್ ಗೆ ಒಳ್ಳೆಯ ಅವಕಾಶ
  • ಜನ ಹಿತಾಸಕ್ತಿಗಾಗಿ ಉತ್ತಮ ಅವಕಾಶ ಕಲ್ಪಿಸಿದ ರಾಜ್ಯ ಸೇವಾ ಸಮಿತಿ ಪ್ರಾಧಿಕಾರ

ಸಿಂದಗಿ: ಆಗಸ್ಟ್ 14 ಕ್ಕೆ ಸಿಂದಗಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ನ್ಯಾಯಾಲಯದ ವ್ಯಾಪ್ತಿಯಲ್ಲಿನ ವಿವಿಧ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಉತ್ತಮ  ಅವಕಾಶ ಕಲ್ಪಿಸಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ  ನ್ಯಾಯಾಧೀಶ ಎ.ಈರಣ್ಣ ಕರೆ ನೀಡಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದ ಸಭಾಭವನದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜನತೆಯ ಹಿತಾಸಕ್ತಿಗಾಗಿ ದೇಶಾದ್ಯಂತ ಲೋಕ್ ಅದಾಲತ್ ಆಯೋಜನೆ ಮಾಡಿದ್ದು ಸಣ್ಣ ಪುಟ್ಟ ವಿಷಯಗಳಿಗೆ ವೈ ಮನಸ್ಸು ಮಾಡಿಕೊಂಡು ಕೋರ್ಟ್ ನಲ್ಲಿ ದಾವೆ ಹೂಡಿದ ಕಕ್ಷಿದಾರರು ರಾಜಿ ಸಂಧಾನ ಮಾಡಿಕೊಳ್ಳಬೇಕು ಈ ಲೋಕ ಅದಾಲತ್ ನಲ್ಲಿ ಅಪಘಾತ, ಚೆಕ್ ಬೌನ್ಸ್ ಕೇಸ್, ಜೀವನಾಂಶ ಪ್ರಕರಣ,  ಭೂ ಪರಿಹಾರ ದಾವೆ ಮತ್ತು ಇನ್ನಿತರೇ ಪ್ರಕರಣಗಳ ರಾಜಿ ಸಂಧಾನ ಮಾಡಲಾಗುವದು ಮತ್ತು ಲೋಕ ಅದಾಲತ್ ನಲ್ಲಿ ರಾಜಿ ಸಂಧಾನ ವಾದ ಪ್ರಕರಣಗಳ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿದರು.

ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರಮೇಶ್ ಗಾಣಗೇರ ಮಾತನಾಡಿ, ಕರ್ನಾಟಕ ರಾಜ್ಯ ಸೇವಾ ಸಮಿತಿ ಆಯೋಜಿಸಿದ ಈ ಅವಕಾಶವನ್ನು ಕಕ್ಷಿದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಸಿಂದಗಿ  ತಾಳಿಕೋಟೆ, ದೇವರ ಹಿಪ್ಪರಗಿ, ಆಲಮೇಲ ವಿಭಾಗದಲ್ಲಿನ ಸುಮಾರು 2110 ಕ್ಕು ಅಧಿಕ ಪ್ರಕರಣಗಳನ್ನು ಗುರುತಿಸಲಾಗಿದೆ . ರಾಜಿ ಸಂಧಾನವಾದರೆ ಇಲ್ಲಿ ಒಬ್ಬರ ಗೆಲುವುವಲ್ಲ ಇಬ್ಬರ ಗೆಲುವು ಎಂದು ಮನವರಿಕೆ ಮಾಡಿದರು.

- Advertisement -

ಹೆಚ್ಚುವರಿ ನ್ಯಾಯಾಧೀಶ ಕೆ.ಬಿ.ಪ್ರಸಾದ, ಆಶಪ್ಪ ಸಣ್ಣಮನಿ ಮಾತನಾಡಿ, ತಾಲೂಕಿನ ನ್ಯಾಯಾಲಯದ ವ್ಯಾಪ್ತಿಯಲ್ಲಿನ ವಿವಿಧ ವ್ಯಾಜ್ಯಗಳನ್ನು  ಬಗೆಹರಿಸಿ  ಕಕ್ಷಿದಾರರಿಗೆ ನೆಮ್ಮದಿಯ ನಿಟ್ಟುಸಿರು ತರಬೇಕೆನ್ನುವ ನಿಟ್ಟಿನಲ್ಲಿ ಘನವೆತ್ತ ನ್ಯಾಯಾಲವು ಆಗಸ್ಟ್ 14 ರಂದು   ಸಿಂದಗಿ ನ್ಯಾಯಾಲಯದಲ್ಲಿ  “ಲೋಕ ಅದಾಲತ್ “* ಹಮ್ಮಿಕೊಳ್ಳಲು  ನಿರ್ಧರಿಸಿದ್ದು ಈ ಪ್ರಕ್ರಿಯೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ವ್ಯಾಪಕ ಪ್ರಚಾರದ ಅವಶ್ಯಕತೆಯಿದ್ದು ಈ ಕಾರ್ಯವನ್ನು ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ವಕೀಲ ಸಂಘದ ಅಧ್ಯಕ್ಷ ಎಸ್.ಬಿ.ದೊಡ್ಡಮನಿ ಮಾತನಾಡಿ, ಮನುಷ್ಯ ಜಿದ್ದನ್ನು ತೊಡೆದು ಹಾಕಿ ಭಾತೃತ್ವದಿಂದ ಬಾಳ್ವೆ ನಡೆಸಬೇಕು ಸಣ್ಣ ಪುಟ್ಟ ವಿಷಯಗಳಿಗೆ ದಾವೆ ಹೂಡಿ ಸಮಯ, ಹಣ ವ್ಯರ್ಥ ಮಾಡಿಕೊಂಡು ಮನಸ್ಸಿನ ನೆಮ್ಮದಿಯನ್ನು ಕೂಡಾ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಈ ಗೋಷ್ಠಿಯಲ್ಲಿ ವಕೀಲರಾದ  ಡಿ.ಜಿ.ಕಕ್ಕಳಮೇಲಿ, ದಾನಪ್ಪಾಗೌಡ ಚೆನ್ನಗೊಂಡ, ಐ.ಎಸ್.ಹಿರೇಮಠ, ಬಿ.ಸಿ.ಪಾಟೀಲ್, ಬಿ.ಜಿ.ನೆಲ್ಲಗಿ, ಎಸ್.ಎಂ.ಹಿರೇಮಠ, ಎಸ್.ಬಿ.ಖಾನಾಪುರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಪಂಡಿತ್ ಯಂಪೂರೆ, ಸಿಂದಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!