ಪ್ರತಿ ತಿಂಗಳು ಜನ ಸಂಪರ್ಕ ಸಭೆ -ಲೋಕಾಯುಕ್ತ ಡಿಎಸ್ ಪಿ ಪುಷ್ಪಲತಾ

Must Read

ಮೂಡಲಗಿ: ಇನ್ನು ಮುಂದೆ ಪ್ರತಿ ತಾಲೂಕಿನಲ್ಲಿ,ಪ್ರತಿ ತಿಂಗಳು ಲೋಕಾಯುಕ್ತರು ಜನ ಸಂಪರ್ಕ ಮಾಡುತ್ತೇವೆ. ಅಧಿಕಾರಿಗಳು ಲಂಚ ಕೇಳಿದರೆ ಸರಿಯಾಗಿ ಕೆಲಸ ಮಾಡಿಕೊಡದೆ ಇದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಿ. ಸಾರ್ವಜನಿಕರು ಬರೀ ಆರೋಪಮಾಡಿದರೆ ಪ್ರಯೋಜನವಿಲ್ಲ, ದೂರುಗಳನ್ನು ಸಲ್ಲಿಬೇಕಾದರೆ ಸೂಕ್ತ ದಾಖಲೆ ಇರಬೇಕೆಂದು ಲೋಕಾಯುಕ್ತ ಡಿಎಸ ಪಿ ಪುಷ್ಪಲತಾ ಹೇಳಿದರು.

ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಬುಧವಾರ ನಡೆದ ಲೋಕಾಯುಕ್ತರ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ,ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೇಳಿ, ಸರಿ ಮಾಡಿ ಕೊಡಿ ಅಂತ ಹೇಳಿದರು.

ಲೋಕಾಯುಕ್ತ ಡಿಎಸ್ ಪಿ ಭರತ ರೆಡ್ಡಿ ಮಾತನಾಡಿ,    ಕಛೇರಿಗೆ ಬರುವ ಸಾರ್ವಜನಿಕರು ನೀಡುವ ಮನವಿಗಳಿಗೆ
ವ್ಯಾಪ್ತಿಯಲ್ಲಿ ಆದಷ್ಟು ಬೇಗ ಪರಿಹಾರ ಸಿಗುವಂತೆ ಕಾರ್ಯ ನಿರ್ವಹಿಸುವುದು ಅಧಿಕಾರಿಗಳ ಕರ್ತವ್ಯ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ,ನೀವು ತಪ್ಪು ಮಾಡಿ ಕಾನೂನು ಮುಂದೆ ಕೈ ಕಟ್ಟಿ ನಿಲ್ಲಬೇಡಿ. ಸಾರ್ವಜನಿಕರ ಸೇವೆಯನ್ನು ಆ ದೇವರು ನಿಮಗೆ ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಎಂದು ಹೇಳಿ, ಜನರು ಜಿಲ್ಲಾ ಕಛೇರಿಗೆ ಬಂದು ದೂರು ನೀಡಬಹುದು ಮತ್ತು ಜನ ಸಂಪರ್ಕ ಕಛೇರಿಯಲ್ಲೂ ದೂರ ನೀಡಬಹುದು ಎಂದರು

ಲೋಕಾಯುಕ್ತ ಸಿಪಿಐಗಳಾದ ಅನ್ನಪೂರ್ಣ ಹುಲಗೂರು ಮತ್ತು ವೆಂಕಟೇಶ ಯಡಹಳ್ಳಿ ಸಾರ್ವಜನಿಕರು ತಂದಿದ್ದ ದೂರುಗಳನ್ನು ಆಲಿಸಿದರು.ಮೂಡಲಗಿ ಪುರಸಭೆ, ಅರಭಾವಿ ಪಟ್ಟಣ ಪಂಚಾಯತ, ಕಂದಾಯ ಇಲಾಖೆ, ಉಪನೊಂದಣಿ ಕಛೇರಿ, ತಾಲೂಕಾ ಪಂಚಾಯತ ಕಛೇರಿಗಳ ಸಂಬಂಧ ಪಟ್ಟ ದೂರುಗಳು ದಾಖಲಾಗಿದ್ದು ಅವುಗಳ ಬಗ್ಗೆ ವಿಚಾರಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.

ಜನ ಸಂಪರ್ಕ ಸಭೆಯಲ್ಲಿ ತಾಲೂಕಾ ದಂಡಾಧಿಕಾರಗಳಾದ ಶ್ರೀಶೈಲ ಗುಡಮೆ, ತಾಲೂಕಾ ಪಂಚಾಯತ ಇಒ ಎಫ್.ಜಿ.ಚಿನ್ನನವರ, ಸಿಡಿಪಿಓ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ,ಹೆಸ್ಕಾಂ ಅಧಿಕಾರಿ ಎಮ್.ಎಸ್.ನಾಗನ್ನವರ,ಪ್ರಭಾರಿ ಬಿಇಒ ರೇಣುಕಾ ಆನಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಂ ಮಾದರ,ಶಿರಸ್ತೇದಾರ ಪರಶುರಾಮ ನಾಯಕ ಮತ್ತು ತಾಲೂಕಿನ ಬಹುತೇಕ ಅಧಿಕಾರಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group