- Advertisement -
ಬೀದರ – ಗಡಿ ಜಿಲ್ಲೆ ಬೀದರನಲ್ಲಿ ಬೆಳಿಗ್ಗೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ರವೀಂದ್ರ ಮೇತ್ರೆಯವರಿಗೆ ಸೇರಿದ ಬೀದರಿನ ಚಿಕ್ಕ ಪೇಟೆಯಲ್ಲಿರುವ ನಿವಾಸ, ಭಾಲ್ಕಿಯ ಡೋಣಗಾಪೂರ ನಿವಾಸ ಹಾಗೂ ಬಸವಕಲ್ಯಾಣದ ಕಚೇರಿಯ ಮೇಲೆ ಲೋಕಾಯುಕ್ತರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ಅಭಿಯಂತರರು ಅಕ್ರಮ ಆಸ್ತಿ ಗಳಿಸಿರುವ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಲೋಕಾ ಪೊಲೀಸರು ಮೇತ್ರೆಯವರ ಮೂರು ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ