spot_img
spot_img

ದತ್ತಿನಿಧಿಯನ್ನು ಮುಮ್ಮಿಗಟ್ಟಿಯ ಕರ್ಲಾನಿ ಸರ್ಕಾರಿ ಶಾಲೆಗೆ ನೀಡಿದ ಅಕ್ಷರತಾಯಿ ಲೂಸಿ ಸಾಲ್ಡಾನ

Must Read

- Advertisement -

ಇವರು ಲಕ್ಷ ಲಕ್ಷ ರೂಪಾಯಿಗಳನ್ನು ಸರಕಾರಿ ಶಾಲೆಗೆ ದತ್ತಿ ನೀಡಿದ್ದಾರೆ. ಹಾಗಂತ ಇವರು ಕೋಟ್ಯಾಧೀಶರಲ್ಲ. ಇವರು ಸಾವಿರಾರು ಮಕ್ಕಳ ತಾಯಿ. ಒಬ್ಬರು ಸ್ವಂತ ಮಗುವಲ್ಲ. ಮನೆಗೆ ಬಂದರೆ ಹತ್ತಾರು ಮಂದಿ ಕೂಡದ ವಾಸದ ಮನೆ ಇವರದು. ಆದರೆ ಸಾವಿರಾರು ಜನದ ಮನದಲ್ಲಿ ಶಾಶ್ವತ ಸ್ಥಾನ ಪಡೆದವರಿವರು. ಹುಟ್ಟಿದ್ದು ಕೃಷ್ಣನ ನಾಡು ಉಡುಪಿ ಜಿಲ್ಲೆಯಾದರೂ ಸಾಧನಗೈದದ್ದು ಬೇಂದ್ರೆಯವರ ಧಾರವಾಡದಲ್ಲಿ. ಜನಿಸಿದ್ದು ಕ್ರೈಸ್ತ ಧರ್ಮದಲ್ಲಾದರೂ ಸಾಧಿಸಿದ್ದು ಎಲ್ಲಾ ಧರ್ಮದವರ ಜೊತೆಗೂಡಿ. ದಿಕ್ಕಿಲ್ಲದೇ ಬದುಕುತ್ತಿದ್ದ ಇವರು. ಇಂದು ಸಾವಿರಾರು ಜನರಿಗೆ ದಿಕ್ಕಾಗಿದ್ದಾರೆ. ಬೇಕು ಬೇಕು ಎನ್ನುವರ ನಡುವೆ ಇವರು ಸಾಕು ಸಾಕು ಎನ್ನುತಾ ಶ್ರೀಮಂತೆ ಎನಿಸಿದ್ದಾರೆ.

ಇವರದು ಹೃದಯ ಶ್ರೀಮಂತಿಕೆ.. ಅಂದು ಸಾವಿತ್ರಿ ಬಾಪುಲೆ ಅನೇಕ ಕಷ್ಟ ಎದುರಿಸಿ ಶಿಕ್ಷಣಕ್ಕಾಗಿ ಶ್ರಮಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಂತೆ, ಇಂದು ಈ ಮಾತೆ ನಿಸ್ವಾರ್ಥ ಸೇವೆಯಿಂದ ಜನರ ಪ್ರೀತಿ ಪಡೆದಿದ್ದಾರೆ. ಇವರ ಬದುಕಿನ ತಿರುವುಗಳು ಯಾವ ಸಿನಿಮಾ ಗಳಿಗಿಂತ ಕಡಿಮೆ ಏನಿಲ್ಲ. ಆ ಕಷ್ಟಗಳ ಸುಳಿಯಲ್ಲಿ ಸಿಲುಕಿ ಗೆದ್ದು ಬಂದ ಇವರ ಜೀವನ ಸಾಧನೆ ನಮಗೆಲ್ಲಾ ಮಾದರಿಇ ವರ ಹೆಸರೇ ಲೂಸಿ ಸಾಲ್ಡಾನ್ ಎಂದು ಸಿ ಆರ್ ಪಿ ಆರ್ ಎಂ ಕುರ್ಲಿ ಹೇಳಿದರು.

ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಮಾತನಾಡಿ,ಉಡುಪಿ ಜಿಲ್ಲೆಯ ಬೈಲೂರಿನಲ್ಲಿ ಕ್ಯಾಥೋಲಿಕ್ ಮನೆತನದಲ್ಲಿ ಜನಿಸಿದವರು.ಆರಂಭದಲ್ಲಿ ಎಲ್ಲಾ ಚೆನ್ನಾಗಿತ್ತು.. ಸಾಧಾರಣ ಮನೆತನ. ಅಮ್ಮ ಗೃಹಿಣಿ. ಅಪ್ಪ ಸಣ್ಣ ಉದ್ಯೋಗದಲ್ಲಿ ಇದ್ದವರು. ಅಲ್ಪ ಸ್ವಲ್ಪ ಆಸ್ತಿ ಇತ್ತು. ಹೀಗಿರಲು ಒಂದನೆಯ ತರಗತಿ ಓದುತ್ತಿದ್ದಾಗ ಸಂಬಂಧಿಕರನ್ನು ಭೇಟಿಯಾಗಲು ಎಳೆಯ ಕಂದಮ್ಮ ಮನೆ ಮಂದಿ ಜೊತೆ ರೈಲು ಏರಿ ಮುಂಬೈಗೆ ಹೊರಟಳು. ನಡು ರಾತ್ರಿ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಾಗ ಎಲ್ಲರೂ ನಿದ್ರೆಗೆ ಶರಣಾಗಿದ್ದಾಗ ಏನೂ ಅರಿಯದ ಈ ಬಾಲೆ ಬಾಗಿಲಿನಿಂದ ಇಳಿದು ನೀರು ಕುಡಿಯಲು ನಳದ ಬಳಿ ಹೋಯಿತು. ಅಷ್ಟರಲ್ಲಿ ರೈಲು ಹೋಗಿಯೇ ಬಿಟ್ಟಿತು. ಅಲ್ಲಿಯೇ ಇದ್ದ ರೈಲು ನೌಕರರಾದ ಮಹದೇವ ಹಾಗೂ ಅವರ ಇಬ್ಬರೂ ಗೆಳೆಯರು ಬಂದು ಈ ಮಗುವನ್ನು ವಿಚಾರಿಸಿದರು. ಈ ಮಗುವಿಗೆ ಕನ್ನಡ ಬಾರದು. ಆ ರೈಲು ನೌಕರರಿಗೆ ಕೊಂಕಣಿ ಬಾರದು. ಮಹದೇವನಿಗೆ ದಾರಿ ತೋಚದೇ ಈ ಮಗುವಿನ ತಂದೆ ತಾಯಿ ಸಿಗುವರೆಗೆ ತಮ್ಮ ಬಳಿ ಇರಲೆಂದು ತಮ್ಮ ಕೊಠಡಿಯಲ್ಲಿ ಉಳಿಸಿಕೊಂಡು ಮುನ್ನಡೆದರು. ಗೆಳೆಯರ ಸಹಕಾರ ದೊರೆಯಿತು. ಹೀಗಿರಲು ಹಲವು ವರ್ಷದ ನಂತರ ಇವಳ ಬಗ್ಗೆ ತಂದೆ ತಾಯಿಗೆ ತಿಳಿದು ಕರೆಯಲು ಬಂದರು ಮಗಳು ಹೋಗಲಿಲ್ಲ. ಹೀಗೆ ಮಗು ಬೆಳೆಯುತ್ತಾ ಹೋಯಿತು. ಜೊತೆಗೆ ಶಾಲೆ ಕಲಿಯುತ್ತಾ ಹೋಯಿತು. ಹೀಗಿರಲು ಮಹದೇವ ಈ ಹುಡುಗಿಯನ್ನೇ ವಿವಾಹವಾಗಲು ಬಯಸಿದರು.. ಹಲವರ ವಿರೋಧದ ನಡುವೆ ಮದುವೆ ಆದರೂ ಕೂಡಾ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮಹದೇವಪ್ಪ ತೀರಿಹೋದರು
ಲೂಸಿ ಬಾಲ ವಿಧವೆಯಾದಳು. ಜೀವನದ ಪ್ರತಿಕ್ಷಣ ಸಂಕಷ್ಟ ಪಟ್ಟಳು. ಹೀಗಿರಲು ಮಾವನ ಮನೆಯಲ್ಲಿ ಇದ್ದು ನೆರೆ ಹೊರೆಯವರ ಸಹಕಾರ ಪಡೆದು ಓದು ಮುಂದುವರೆಸಿದಳು. ಗುರುಗಳ ಮಾರ್ಗದರ್ಶನದಲ್ಲಿ ಓದಿ ಉನ್ನತ ದರ್ಜೆಯಲ್ಲಿ ಪಾಸಾದಳು. ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದಲ್ಲಿ ಕಲಿತಳು. ನಿಷ್ಟೆಯಿಂದ ಓದಿ ಗುರುಗಳ ಪ್ರೀತಿಗೆ ಪಾತ್ರಳಾಗಿ ಕುಮಟಾದಲ್ಲಿ ಬಿ.ಇಡಿ ಓದಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕವಾದರು. ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಇವರು. ತದನಂತರ ಧಾರವಾಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಘಟಗಿಯಲ್ಲಿ ಸರಕಾರಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಮಕ್ಕಳೇ ನನ್ನ ಸರ್ವಸ್ವ. ಶಾಲೆಗಳೇ ತನ್ನ ಉಸಿರು ಎಂಬಂತೆ ಸೇವೆ ಸಲ್ಲಿಸಿದರು. ತದನಂತರ ಬಿ ಆರ್ ಪಿ ರಾಘವೇಂದ್ರ ಬಡಿಗೇರ ಮಾತನಾಡಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ , ಲೋಕೂರ , ಮುಗದ , ಅಳ್ನಾವರ ಇತರೆಡೆ ಶಿಕ್ಷಕಿಯಾಗಿ ಮಕ್ಕಳಿಗೆ ಪ್ರೀತಿ ಪಾತ್ರರಾಗಿದ್ದಾರೆ, ಇವರ ೧೦೬ ನೆಯ ದತ್ತಿಯನ್ನು ಈ ಒಂದು ಚಿಕ್ಕ ಶಾಲೆಗೆ ದತ್ತಿ ನೀಡಿರುವುದು ಸಂತಸ ತಂದಿದೆ, ಇಲಾಖೆಯ ಪರವಾಗಿ ಲೂಸಿ ಸಾಲ್ಡಾನರವರಿಗೆ ಧನ್ಯವಾದಗಳನ್ನು ತಿಳಿಸಿದರು.

- Advertisement -

ಇಷ್ಟೇ ಆಗಿದ್ದರೆ ಇವರದು ಇತರರಂತೆ ಸಾಮಾನ್ಯ ಸಾಧನೆ ಎನಿಸುತ್ರಿತ್ತು. ಆದರೆ ಈ ಮಹಿಳೆ ತನಗೋಸ್ಕರ ಏನನ್ನು ಗಳಿಸಲಿಲ್ಲ. ಮರು ಮದುವೆ ಮಾಡಿಕೊಳ್ಳಲಿಲ್ಲ ಎಂದರು,
ಸದ್ಯ ನಿವೃತ್ತಿ ಆಗಿ 16 ವಷ ಕಳೆದರು, ಹಣದಲ್ಲಿ ಉಳಿಸಿ ಶಾಲೆಗಳಿಗೆ ದತ್ತಿ ನೀಡುತ್ತಾ, ಕೆಲಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ, ಇವರೇ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ತಿಳಿಸಿದರು

ಬೆಂಗಳೂರಿನ ತಾವರೆಕೆರೆಯ ಸಾಧಕ ಶಿಕ್ಷಕಿ ವೀಣಾ ಟಿ ಬಿಜಿವಿಎಸ್ ಸದಸ್ಯ ಮಲ್ಲಪ್ಪ ಹೊಸಕೇರಿ
ಶಾಲಾ ಪ್ರಧಾನಗುರುಗಳಾದ ಶಿಲ್ಪಾ ಬನ್ನಿಮಟ್ಟಿ, ಸಹಶಿಕ್ಷಕರಾದ ಶ್ವೇತಾ ಕೋರಿ ಮತ್ತು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ರಮೇಶ ಬಡಿಗೇರ ಉಪಾಧ್ಯಕ್ಷರು
ಶೋಭಾ ಭೂಷಣ್ಣವರ ರಮೇಶ ಭಜಂತ್ರಿ (ಸದಸ್ಯರು)
ಅಜಿತ ಸಾತಣ್ಣವರ, ಕಲ್ಮೇಶ ಕೊಟಬಾಗಿ, ಪರಶುರಾಮ ಕಲಘಟಗಿ, ಮಂಜುನಾಥ ಡಂಬಳ, ನಿಂಗಪ್ಪ ಭೂಷಣ್ಣವರ, ಅದೃಶ ಕೋಲಕರ, ಶಿಲ್ಪಾ ಅತ್ತಿಮರದ, ದೀಪಾ ಮೊರಬದ, ನಾಗರತ್ನ ಪಾಟೀಲ, ಸಂಗೀತಾ ಗುಂಡಣ್ಣವರ, ನಿವೇದಿತಾ ಯರಗುಪ್ಪಿ, ಪವಿತ್ರಾ ಅಂಗಡಿ, ಶೇಖವ್ವ ಶಿವಳ್ಳಿ, ರೂಪಾ ಓಮಣ್ಣವರ, ಸವಿತಾ ಕಡ್ಲಿ, ಮುಂತಾದವರು ಹಾಜರಿದ್ದರು.

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group