ಪ್ರೀತಿ ಇರಬೇಕು ವ್ಯಾಮೋಹ ಅತಿಯಾಗಬಾರದು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸ್ತ್ರೀ ಪುರುಷನನ್ನು ಸಾಕೋದಕ್ಕೂ, ಪುರುಷ ಸ್ತ್ರೀಯನ್ನು ಆಳೋದಕ್ಕೂ ವ್ಯತ್ಯಾಸವಿದೆಯೆ? ಸಾಕೋದು ಧರ್ಮ. ಆಳೋದು ಕರ್ಮ. ಇಲ್ಲಿ ತಾಯಿಯ ಅತಿಯಾದ ವ್ಯಾಮೋಹದಿಂದ ಮಕ್ಕಳು ಅಧರ್ಮದ ಹಾದಿ ಹಿಡಿದು ತಾಯಿಯನ್ನೇ ಆಳಲು ಹೊರಟರೆ ಅದು ತಾಯಿಯ ಕರ್ಮಫಲವಾಗುತ್ತದೆ.

ಪುರುಷ ಭೂಮಿಯ ಋಣ ತೀರಿಸಲು ಸತ್ಕರ್ಮದಿಂದ ಮಾತ್ರ ಸಾಧ್ಯ. ಸತ್ಕರ್ಮದ ಕಡೆ ನಡೆಸೋದು ಸ್ತ್ರೀ ಧರ್ಮ. ಸ್ತ್ರೀ ಗೆ ಇದರಜ್ಞಾನ ಇದ್ದರೆ ಮಾತ್ರ ಗುರುವಾಗಿ ನಿಂತು ಜೀವಕ್ಕೆ ಗುರಿ ಕಡೆಗೆ ನಡೆಸಬಹುದು. ಭೂಮಿ ನಡೆದಿರೋದೆ ಸ್ತ್ರೀ ಶಕ್ತಿಯ ಜೀವಿಗಳಿಂದ. ಸೃಷ್ಟಿಯೆ ಸರಿಯಿಲ್ಲವಾದರೆ ಸ್ಥಿತಿ ಲಯಗಳೂ ಸರಿಯಾಗಿರೋದಿಲ್ಲ.

ಹಿಂದಿನ ಯುಗಯುಗದಿಂದಲೂ ಭೂಮಿ ಆಳೋದನ್ನು ದೊಡ್ಡ ಸಾಧನೆ ಎಂದು ಕರೆದಿರೋದಕ್ಕೆ ಕಾರಣ ಸ್ತ್ರೀ ಯನ್ನು ಆಳೋದು ಸುಲಭವಲ್ಲವೆನ್ನುವುದಾಗಿತ್ತು. ಅದರಲ್ಲಿಯೂ ಧರ್ಮಜ್ಞಾನದ ಮೂಲಕ ಬೌತಿಕ ಜಗತ್ತು ಆಳೋದು ಕಷ್ಟ.

- Advertisement -

ಶ್ರೀರಾಮಚಂದ್ರನಂತೆ ಶ್ರೀ ಕೃಷ್ಣನಿರಲಾಗಲಿಲ್ಲ. ಅಂದೂ ಸ್ತ್ರೀ ರಾಜಕೀಯಕ್ಕೆ ಅವಕಾಶವಿತ್ತು. ಆದರೆ ಕ್ಷತ್ರಿಯ ಧರ್ಮವಿತ್ತು. ಇಂದು ನಾವು ಪ್ರಚಾರಕ್ಕೆ ತಕ್ಕಂತೆ ನಡೆಯಲಾಗುತ್ತಿಲ್ಲ ಕಾರಣ ಇಂದಿನ ಭಾರತ  ಪ್ರಜಾಪ್ರಭುತ್ವ ದಲ್ಲಿದೆ.

ಪುರಾಣ ಇತಿಹಾಸದ ಪ್ರಚಾರವಿದೆ ಆದರೆ ಅಂದಿನ ಧರ್ಮ, ಸತ್ಯಜ್ಞಾನದ ಶಿಕ್ಷಣ ನೀಡದೆ ಭಾರತವನ್ನು ವಿದೇಶಿಗರಂತೆ ಆಳೋದಕ್ಕೆ ವಿಜ್ಞಾನ ಬಳಕೆಯಾಗಿದೆ. ಹೀಗಾಗಿ ಇದಕ್ಕೆ ಸಹಕರಿಸಿದ ಸ್ತ್ರೀ ಶಕ್ತಿಯ ಜ್ಞಾನ ಕುಸಿದು ಬೌತಿಕಾಸಕ್ತಿ ಹೆಚ್ಚಾಗಿ ರಾಜಕೀಯದಿಂದ ಬೆಳೆದಿರುವ ಅಧರ್ಮವನ್ನು ವಿರೋಧಿಸೋ ಸ್ವಾತಂತ್ರ್ಯವಿಲ್ಲ ಭೂಮಿಯ ಸತ್ಯ, ಸತ್ವವನ್ನು ರಾಜಯೋಗದಿಂದ ಬೆಳೆಸುತ್ತಿದ್ದ ಮಹಾತ್ಮರುಗಳು ಪ್ರತಿಮೆ ರೂಪದಲ್ಲಿ ಇದ್ದರೂ, ಅವರ ಜ್ಞಾನ ಅಳವಡಿಸಿಕೊಳ್ಳದೆ ವ್ಯವಹಾರಕ್ಕೆ ಬಳಸಿದರೆ,” ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲ ” ಎನ್ನುವ ಮಧ್ಯವರ್ತಿಗಳು ಬೆಳೆಯುತ್ತಾರೆ.

ಮಾನವ ಮಧ್ಯವರ್ತಿ ಯಾಗಿದ್ದು ಭೂಮಿಯನ್ನೇ ತನ್ನ ಸ್ವಾರ್ಥ ಸುಖಕ್ಕೆ ಬಳಸಿ ಮನರಂಜನೆಗಿಳಿದರೆ ಆತ್ಮವಂಚಕರೆ ಹೆಚ್ಚಾಗಿ ಸ್ತ್ರೀ ಶಕ್ತಿ ಕುಸಿಯುತ್ತದೆ. ಬೌತಿಕದಲ್ಲಿ ಎಷ್ಟೇ ಹೋರಾಟ ನಡೆಸಿದರೂ ತಾತ್ಕಾಲಿಕ ಪರಿಹಾರ ಸಿಗುತ್ತದೆ.

ಆಧ್ಯಾತ್ಮದ ಪ್ರಕಾರ ಸತ್ಯ ತಿಳಿದಾಗಲೆ ಪರಿಹಾರ ನಮ್ಮೊಳಗೆ ಇರುತ್ತದೆ. ಮಕ್ಕಳು ನಡೆಯುವ ತನಕ ಎತ್ತಿಕೊಂಡು ಹೋಗಬಹುದು. ನಡೆದ ಮೇಲೆಯೂ ಎತ್ತಿಕೊಂಡಿದ್ದರೆ? ಪ್ರೀತಿ ಇರಬೇಕು.ವ್ಯಾಮೋಹ ಅತಿಯಾಗಬಾರದು. ಇದು ಸ್ತ್ರೀ ಪುರುಷರಿಬ್ಬರಿಗೂ ಅನ್ವಯಿಸುತ್ತದೆ.

ನುಡಿ ಮುತ್ತುಗಳು

ಸ್ತ್ರೀ ಯನ್ನು ಹಿಡಿತದಲ್ಲಿಟ್ಟುಕೊಂಡು ಭೂಮಿ ಆಳೋದನ್ನು ರಾಜಕೀಯವೆಂದರು, ಸ್ತ್ರೀಯೇ ಪುರುಷನನ್ನು ರಾಜಕೀಯಕ್ಕೆಳೆದಾಗ. ಬಲಿಪಶುವಾಗೋದು ಸ್ತ್ರೀಯೆ ಎನ್ನುವ ಸತ್ಯ ಅರ್ಥವಾಗದೆ ಭೂಮಿ ಅಧರ್ಮದಿಂದ ತುಂಬಿಹೋಗುತ್ತಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!