spot_img
spot_img

ಇಂದು ಕನ್ನಡದ ಖ್ಯಾತ ಬರಹಗಾರ್ತಿ ಶ್ರೀಮತಿ ಎಮ್ ಆರ್ ಕಮಲಾ ಅವರು ಜನಿಸಿದ ದಿನ

Must Read

ಎಂ.ಆರ್.ಕಮಲಾ ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯಲ್ಲಿ ೧೯೫೯ರಲ್ಲಿ ಜನಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್.ಏ. ಹಾಗೂ ಎಲ್‍ಎಲ್.ಬಿ.ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ’ಪಾಶ್ಚಿಮಾತ್ಯ ಸಾಹಿತ್ಯ’ ಅಧ್ಯಯನಕ್ಕಾಗಿ ’ಬಿ.ಎಮ್.ಶ್ರೀ’ ಸ್ವರ್ಣಪದಕ ಪಡೆದಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಮೈಸೂರು ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.

ಸಾಹಿತ್ಯ

ಕವನ ಸಂಕಲನಗಳು

  • ಶಕುಂತಳೋಪಾಖ್ಯಾನ
  • ಜಾಣೆ ಮತ್ತು ಇತರ ಕವಿತೆಗಳು
  • ಹೂವು ಚೆಲ್ಲಿದ ಹಾದಿ
  • ಮಾರಿಬಿಡಿ
  • ನೆತ್ತರಲಿ‌ ನೆಂದ ಚಂದ್ರ

ಅನುವಾದ

‘ಕತ್ತಲ ಹೂವಿನ ಹಾಡು'(ನಿಗ್ರೋ ಹಾಗು ಆಫ್ರಿಕನ್ ಮಹಿಳೆಯರ ಒಂದುನೂರಾ ಎರಡು ಕವನಗಳ ಸಂಪಾದನೆ ಹಾಗು ಅನುವಾದ)
ಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯದ ಮಾಲಿಕೆ

೧. ಕಪ್ಪು ಹಕ್ಕಿಯ ಬೆಳಕಿನ ಹಾಡು ೨. ಉತ್ತರ ನಕ್ಷತ್ರ ೩. ರೋಸಾ ಪಾರ್ಕ್ಸ್ ಆತ್ಮಕಥೆ- ನನ್ನ ಕಥೆ ೪. ಸೆರೆ ಹಕ್ಕಿ ಹಾಡುವುದು ಏಕೆಂದು ನಾ ಬಲ್ಲೆ (ಮಾಯಾ ಏಜೆಂಲೋ ಆತ್ಮಕಥೆ)

ಪ್ರಶಸ್ತಿ

  • “ಶಕುಂತಳೋಪಾಖ್ಯಾನ” ಕವನಸಂಕಲನಕ್ಕೆ ೧೯೮೮ರ ಸಾಲಿನಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘ ನೀಡುವ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ.
  • “ಜಾಣೆ ಮತ್ತು ಇತರ ಕವಿತೆಗಳು” ಕವನ ಸಂಕಲನಕ್ಕೆ ೧೯೯೨ನೆಯ ಸಾಲಿನ ಮುದ್ದಣ ಪ್ರಶಸ್ತಿ ದೊರಕಿದೆ.ಇವರು ಅನುವಾದಿಸಿದ ಉತ್ತರ ನಕ್ಷತ್ರ ಕೃತಿಗೆ ೨೦೦೪ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರಕಿದೆ

ಮಾಹಿತಿ ಕೃಪೆ: ಅಂತರ್ಜಾಲ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!