spot_img
spot_img

‘ಮಾರಿಗಡ’ ಚಲನಚಿತ್ರ ಶೀಘದಲ್ಲೇ ಬಿಡುಗಡೆ

Must Read

ಹುಬ್ಬಳ್ಳಿ: ‘ಮಾರಿಗಡ’ ಚಲನಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವದು ಎಂದು ಚಿತ್ರದ ನಿರ್ದೇಶಕ ವಿಶ್ವನಾಥ ಎಂ ಹೇಳಿದರು.

ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಯುವ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ‘ಮಾರಿಗಡ’ ಚಲನಚಿತ್ರದಲ್ಲಿ ಮಾರೇಶ, ಅನನ್ಯ,ರೂಪಾ, ಶಶಿಕುಮಾರ್, ಮಹೇಶ್, ಅಂಬಿಕಾ ಸೇರಿದಂತೆ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

ವಿಶೇಷವಾಗಿ ಇದರಲ್ಲಿ ನಾಯಕನಾಗಿ ಅಭಿನಯಿಸಿರುವ ಮಾರೇಶ್ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದ ಬಹುರೂಪಿ ಕಲಾವಿದರ (ವೇಷಗಾರ) ಕುಟುಂಬದವರಾಗಿದ್ದು ಭಿಕ್ಷಾಟನೆ ಮೂಲಕ ಕಲಾಪ್ರದರ್ಶನ ಮಾಡಿ ಜೀವನ ನಡೆಸುತ್ತಿದ್ದಾರೆ. ರಾಮಾಯಣ, ಮಹಾಭಾರತದಲ್ಲಿನ ಪಾತ್ರಗಳ ವೇಷಧರಿಸಿ ಊರೂರು ಅಲೆದು ಕಲಾಪ್ರದರ್ಶನ ನೀಡುತ್ತಿದ್ದ ಮಾರೇಶ್ ಈ ಚಿತ್ರದ ಮೂಲಕ ಮೊದಲಸಲ ನಾಯಕನಟರಾಗಿ ಅದ್ಭುತ ಅಭಿನಯ ನೀಡಿದ್ದಾರೆ.

ಚಿತ್ರವು ಯುವಜನರ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳಿಗೆ ಯಾವರೀತಿಯಾಗಿ ಸ್ಪಂದಿಸುತ್ತಾರೆಂದು ತೋರಿಸಲಾಗಿದೆ. ದಾಂಡೇಲಿ, ಉಳುವಿ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ , ‘ಮಾರಿಗಡ’ ಚಿತ್ರದಲ್ಲಿ ಐದು ಹಾಡುಗಳಿವೆ. ಸಂಗೀತ ಸಂಯೋಜನೆ ವಿನಯ ವಿವೇಕ ಮಾಡಿದ್ದಾರೆ.

ವಿಜಯಪ್ರಕಾಶ, ಅನುರಾಧಭಟ್ ,ಸಂಚಿತ ಹೆಗಡೆ ಹಾಡುಗಳನ್ನು ಹಾಡಿದ್ದಾರೆ. ಹಾಡುಗಳನ್ನು ಈ ತಿಂಗಳದೊಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ರಘು ರೂಗಿ, ಸಾಹಿತ್ಯ ವಿಶ್ವನಾಥ ಎಂ, ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ, ಸಂಕಲನ ದರ್ಶನ ಕುಲಕರ್ಣಿ, ಕೊರಿಯೋಗ್ರಫಿ ವಿ.ನಾಗೇಶ್, ಡಿಆಯ್ ದರ್ಶನ ಕುಲಕರ್ಣಿ, ಸಹ ನಿರ್ದೇಶನ ರಾಕೇಶ್ ಅವರಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಟ ಮಾರೇಶ ದುಪಮ್, ನಾಟಿ ರೂಪಾ, ಶಶಿಕುಮಾರ್, ಡಾ.ವೀರೇಶ್ ಹಂಡಗಿ, ಸಂಕಲನಕಾರ ದರ್ಶನ ಕುಲಕರ್ಣಿ ಸೇರಿದಂತೆ ಮುಂತಾದವರು ಇದ್ದರು.


ವರದಿ: ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!