ಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶ್ರೀ ಮಾಧವಾನಂದ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿ ಉದ್ಘಾಟನೆ;
ಮೂಡಲಗಿ – ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನೂತನವಾಗಿ ಪ್ರಾರಂಭ ವಾಗಿರುವ ಶ್ರೀ ಮಾಧವಾನಂದ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿಯ ಉದ್ಘಾಟನೆಯನ್ನು ಸುಕ್ಷೇತ್ರ ಇಂಚಗೇರಿ ಮಠದ ಮುಕುಂದ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿದರು .
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಸರ್ವೋತ್ತಮ ಜಾರಕಿಹೊಳಿ ಅವರು ಆಗಮಿಸಿದ್ದರು,ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಎಂ ಎಂ ಪಾಟೀಲ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಇಂಚಗೇರಿಯ ಶಂಕರಪ್ಪ ಮಹಾರಾಜರು, ರಾಮಣ್ಣ ಮಹಾರಾಜರು, ಸುಭಾಷ ಮಹಾರಾಜರು, ವಸಂತ ಮಹಾರಾಜರು ಗ್ರಾಮದ ಮುಖಂಡರಾದ ಎಸ್.ಎಸ್ ಪಾಟೀಲ,ಕೆ.ಬಿ ಮುಧೋಳ, ಎಸ್.ವಾಯ ಜುಂಜರವಾಡ, ಬಿ.ಆರ್ ಸಾಯನ್ನವರ, ಎ.ಎಂ ಕಿತ್ತೂರು, ಸಿ.ಎಂ ಕುಡಚಿ, ಕೆ.ಜಿ ಮುಧೋಳ , ಎಂ.ಎಂ ಜುಂಜರವಾಡ, ಹಣಮಂತ ತೆರದಾಳ , ಎಸ್. ಬಿ ರಡ್ಡೇರಟ್ಟಿ, ಉದಯವಾಣಿ ಬೆಳಗಾವಿ ಜಿಲ್ಲಾ ಎಕ್ಷಿಕ್ಯುಟಿವ ಅಧಿಕಾರಿ ಮಾರುತಿ ಕೊಲೆಕರ , ಮಲ್ಲಪ್ಪ ಕಂಕಣವಾಡಿ ನಿವೃತ್ತ ಸೈನಿಕರು ಕಲ್ಲೋಳಿ ,ಹಾಗೂ ಸೊಸೈಟಿಯ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ,ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು,
ನಿರೂಪಣೆಯನ್ನು ಸಂಗಪ್ಪ ಹಡಪದ, ವಂದನಾರ್ಪನೆಯನ್ನು ಬಸವರಾಜ ಕೌಜಲಗಿ ಮಾಡಿದರು.