- Advertisement -
ಬೆಂಗಳೂರು ನಗರದ ಕೆಂಗೇರಿ ಉಪನಗರದ ರಾಯರ ಮಠದಲ್ಲಿ ವಿಶ್ವ ಮಧ್ವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಧ್ವಜಯಂತಿ ಅಂಗವಾಗಿ ಹಿರಿಯ ದಾಸ ಸಾಹಿತ್ಯ ಸಂಶೋಧಕಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ರವರಿಗೆ ‘ಮಧ್ವವಿಜಯ ಪ್ರಶಸ್ತಿ’ಮತ್ತು ಹರಿದಾಸ ಸಂಶೋಧಕ – ಡಾ.ಆರ್.ವಾದಿರಾಜು , ಡಾ.ಮಧುಸೂದನ್ ಮತ್ತು ಡಾ.ರಮಾ ಕಲ್ಲೂರ್ಕರ್ ರವರುಗಳಿಗೆ ‘ಗುರು ಸೇವಾ ಧುರೀಣ ‘ಪ್ರಶಸ್ತಿಯನ್ನು ತಂಬಿಹಳ್ಳಿ ಶ್ರೀ ಮಾಧವತೀರ್ಥ ಮಠದ ಕಿರಿಯ ಪೀಠಾಧೀಶರಾದ ಶ್ರೀವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಪಾದರು ನೀಡಿ ಆರ್ಶಿವದಿಸಿದರು, ವಿಎಂಡಬ್ಲುಎ ಸಂಸ್ಥಾಪಕ ವೆಂಕೋಬರಾವ್ , ಕೆಂಗೇರಿ ರಾಘವೇಂದ್ರ ಮಠದ ಅಧ್ಯಕ್ಷ ಡಾ.ಎಚ್.ಎಸ್.ಸುಧೀಂದ್ರ ಕುಮಾರ್ , ಕಾರ್ಯದರ್ಶಿ ವಿಜಯೀಂದ್ರ , ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಚಾಲಕರಾದ ಡಾ.ಎಸ್.ಆರ್.ರಾಘವೇಂದ್ರ ಮತ್ತು ಡಾ.ವಾಣಿಶ್ರೀ ಗಿರೀಶ್ ಉಪಸ್ಥಿತರಿದ್ದರು.