spot_img
spot_img

ಮಡಿವಾಳ ಮಾಚಿದೇವ ಶರಣರು ನುಡಿದಂತೆ ನಡೆದವರು; ಡಾ. ಪಡಶೆಟ್ಟಿ

Must Read

spot_img
- Advertisement -

ಸಿಂದಗಿ: ಮಡಿವಾಳ ಮಾಚಿದೇವ ಹಾಗೂ ಬಸವಾದಿ ಶರಣರು ನುಡಿದಂತೆ ನಡೆದವರು .ನಡೆದದನ್ನೇ ನುಡಿದವರು ಅವರ ನಂಬಿಕೆ ಮತ್ತು ಆಚರಣೆಯಲ್ಲಿ ಯಾವುದೇ ಅಂತರವಿರಲಿಲ್ಲ ಬಸವಾದಿ ಶರಣರು ಸತ್ಯ ಶುದ್ಧ ಕಾಯಕಕ್ಕೆ ಎಷ್ಟು ಮಹತ್ವವನ್ನು ನೀಡಿದರೋ ಅಷ್ಟೆ ಮಹತ್ವವನ್ನು ದಾಸೋಹಕ್ಕೆ ನೀಡಿದರು ಎಂದು ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರವಲಯದ ಶರಣೆ ಶ್ರೀಮತಿ ಗುರುಬಾಯಿ ಡಾ. ರಾಮಲಿಂಗಪ್ಪ ಮಡಿವಾಳರ ತೋಟದ ಮನೆಯಲ್ಲಿ ತಾಲೂಕು ವಚನೋತ್ಸವ ಸಮಿತಿ ೨೪೮ ನೇ ವಚನೋತ್ಸವದಲ್ಲಿ ಅವರು ಮಾತನಾಡಿ, ೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪೃಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಡಿವಾಳ ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು ಎಂದರು .

ವಚನೋತ್ಸವ ಸಮಿತಿಯ ಹಿರಿಯರಾದ ಚನ್ನಪ್ಪ ಕತ್ತಿ. ಶಿವಪ್ಪ ಗವಸಾನೆ. ಪ್ರೊ. ಬಸವರಾಜ ಹನಮಶೆಟ್ಟಿ. ಸಿದ್ದಬಸವ ಕುಂಬಾರ. ವೈದ್ಯ ರಾಮಲಿಂಗಪ್ಪ ಮಡಿವಾಳರ ಮಾತನಾಡಿ, ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.

- Advertisement -

ಸಾಹಿತಿ ಅಶೋಕ ಬಿರಾದಾರ ಮಾತನಾಡಿ, ಮಡಿವಾಳರ ಮನೆಯಲ್ಲಿ ಮಡಿವಾಳ ಮಾಚಿದೇವ ಶರಣರ ವಚನೋತ್ಸವ ಮಾಡುವ ಬದಲು ನಾವು ಶರಣರಿಗೆ ಜಾತಿಗೆ ಹೋಲಿಸದೆ ಅವರನ್ನು ಪ್ರತಿ ಜನಾಂಗದವರು ಸರ್ವ ಶರಣರ ವಚನಗಳು ಓದುವಂತಾಗಬೇಕು ಎಂದರು .

ಸಾಹಿತಿ ಶಿವಕುಮಾರ ಶಿವಶಿಂಪಿ, ಶಿಕ್ಷಣ ಸಂಯೋಜಕ ಎಸ್.ಎಸ್.ಅಂಬಲಿ, ಆನಂದ ಶಾಬಾದಿ, ಸಾಹಿತಿ ನಾಗೇಶ, ಮಲ್ಲು ಪಟ್ಟಣಶೆಟ್ಟಿ, ರಾಜಶೇಖರ ಶೆಟ್ಟಿ, ಅಶೋಕ ಅಲ್ಲಾಪೂರ, ಶ್ರೀಶೈಲ ಯಳಮೇಲಿ ಶರಣ ಮಡಿವಾಳ ಮಾಚಿದೇವ ವಚನ ಪಠಣ ಮಾಡಿದರು. ಸಂಗಣ್ಣ ಕತ್ತಿ, ಶರಣಗೌಡ ಪಾಟೀಲ, ಸಂಗಮೇಶ ಕುಂಬಾರ,ನಿಂಗನಗೌಡ ಪಾಟೀಲ, ಮಲ್ಲು ಶ ಅಗಸರ ಬಂದಾಳ, ಗುರಪ್ಪ ಅಗಸರ, ಮಹೇಶ ಅರಳಗುಂಡಗಿ, ಬಸವರಾಜ ಅಗಸರ, ಶಂಕರ ಅಗಸರ, ಶಿಕ್ಷಕ ಸಾಹಿತಿ ಗುಂಡಣ್ಣ ಮೋರಟಗಿ, ಈರಣ್ಣ ಅಗಸರ, ಡಾ.ವಿಜಯಕುಮಾರ ಸಗರ, ವಿನಯಕುಮಾರ ಅಗಸರ, ಗುಂಡು ಅಗಸರ ಬೂದಿಹಾಳ ಇದ್ದರು. ಶಿಕ್ಷಕ ಶಂಕರ ಕಟ್ಟಿಮನಿ ನಿರೂಪಿಸಿದರು. ಶಿಕ್ಷಕರಾದ ಚಂದ್ರಶೇಖರ ಬುಯ್ಯಾರ. ಪಿ.ವ್ಹಿ.ಕುಲಕರ್ಣಿ ವಚನಗಾಯನ ಮಾಡಿದರು. ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿದರು. ಡಾ ಸಂಗಮೇಶ ವಂದಿಸಿದರು.

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group