ಪ್ರಶಸ್ತಿಯನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಡಾ.ಹೆಚ್.ಎಸ್.ಎಂ. ಪ್ರಕಾಶ್ ಅವರ ಅನುವಾದಿತ ‘ನಮ್ಮಂಥ ಬಲ್ಲಿದರು’, ಪ್ರೊ.ಎಚ್.ಟಿ. ಪೋತೆ ಅವರ ಪ್ರವಾಸ ಕಥನ ‘ಬಾಬಾ ಸಾಹೇಬರ ಲಂಡನ್’, ಪಾತಿಮಾ ರಲಿಯಾ ಅವರ ಕಥಾ ಸಂಕಲನ ‘ಒಡೆಯಲಾರದ ಒಡಪು’, ಸಂತೋಷ ನಾಯಕ ಅವರ ಕವನ ಸಂಕಲನ ‘ಹೊಸ ವಿಳಾಸದ ಹೆಜ್ಜೆಗಳು’ ಕೃತಿಗಳಿಗೆ ಪ್ರದಾನಿಸಿದರು.
ಡಾ.ಸಿ. ಸೋಮಶೇಖರ್/ಶ್ರೀಮತಿ ಸರ್ವಮಂಗಳ ದತ್ತಿ ಪ್ರಶಸ್ತಿಯು ಇಂದಿರಾ ಕೃಷ್ಣಪ್ಪ ಅವರ ವ್ಯಕ್ತಿ ಚಿತ್ರಣ ‘ಸಾವಿತ್ರಿ ಬಾ ಪುಲೆ’, ಡಾ.ಎಂ.ಎಸ್. ಮಣಿ ಅವರ ಲೇಖನ ಸಂಕಲನ ‘ಗವಿಮಾರ್ಗ’ ಕೃತಿಗೆ ಲಭಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಮಾತನಾಡಿ, “ಸ್ವಾಭಿಮಾನಿ ವೇದಿಕೆ ಹಲವಾರು ವರ್ಷಗಳಿಂದ ಬಹಳಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಕನ್ನಡ ನಾಡು-ನುಡಿ, ಚಳವಳಿಯನ್ನು ಒಳಗೊಂಡ ಹಾಗೆಯೇ, ಕೃತಿಗಳಿಗೆ ಕೂಡ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಇವರ ಕೆಲಸ ನಿಜಕ್ಕೂ ಶ್ಲಾಘನೀಯ” ಎಂದು ತಿಳಿಸಿದರು.ಇನ್ನೋರ್ವ ತೀರ್ಪುಗಾರರಾಗಿ ಕವಿ ಡಾ. ಸತ್ಯಮಂಗಲ ಮಹಾದೇವ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಹೆಚ್ ಜಯದೇವ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.