ಬ ಸವಣ್ಣನೇ ತಾಯಿ ಬಸವಣ್ಣನೇ ತಂದೆ ಬಸವಣ್ಣನೇ ಪರಮ ಬಂಧುವೆನಗೆ ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ.
“ಶ್ರೀ ಸಿದ್ದರಾಮೇಶ್ವರರು” ಲೋಕದ ಸತ್ಕಾರ್ಯಕ್ಕೆ ಜನಸಿದ ಮಹಾ ಶಿವಯೋಗಿ, ಸಿದ್ಧರಾಮ ಅನುಭವ ಮಂಟಪದ ಕಾಯಕ ರಾಮ , ನೆಲೆಯಿಲ್ಲದ ನೆತ್ತಿಗೆ , ತನ್ನ ಕಾಯಕದಿಂದ ಸರ್ವರಿಗೂ ನೆರಳಾಗಿ ಜಗದ ಕಲ್ಯಾಣಕ್ಕೆ ನಾಂದಿ ಹಾಡಿದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರು, ಲಿಂಗದೊಡನೆ ಶಿವನ ಧ್ಯಾನಿಸಿ , ಅಂಗದೊಡನೆ ಕಾಯಕವನ್ನು ಪೂಜಿಸಿ , ಬಡ ಜನತೆಯ ಬದುಕಿಗೆ ಆಸರೆಯಾದ ಲೋಕಜ್ಞಾನಿ ಶ್ರೀ ಸಿದ್ದರಾಮೇಶ್ವರರು, ಶರಣರ ಜೊತೆಗಿದ್ದು ಶ್ರೀ ಬಸವಣ್ಣನವರ ತತ್ವಗಳನ್ನು ಸ್ವೀಕರಿಸಿ, ಬಸವಣ್ಣನೇ ಎನಗೆ ತಂದೆ ತಾಯಿ , ಎನಗೆ ಬಂಧು ಬಳಗ, ಎನಗೆ ಸರ್ವವೂ ಶ್ರೀ ಬಸವಣ್ಣನವರೇ ಎಂದು ಕಪಿಲ ಮಲ್ಲಿಕಾರ್ಜುನ ದೇವರೊಡನೆ ಬೇಡಿ , ಕಾಯಕದ ಕರ್ಮಯೋಗಿಯಾದ ಶ್ರೀ ಸಿದ್ದರಾಮೇಶ್ವರರು.
ಹನ್ನೆರಡನೆಯ ಶತಮಾನದ ಪುಣ್ಯ ಪುರುಷರಲ್ಲಿ ಶ್ರೀ ಸಿದ್ದರಾಮೇಶ್ವರರು ಕೂಡ ಒಬ್ಬರು , ವಚನ , ಸಾಹಿತ್ಯ,ಕಾವ್ಯ ,ಶಾಸನಗಳಲ್ಲಿ ನಾವು ಅವರ ಬರಹಗಳನ್ನು ನೋಡಬಹುದು. ಶ್ರೀ ಸಿದ್ದರಾಮೇಶ್ವರರು ಮಹಾರಾಷ್ಟ್ರದ ಪ್ರಸ್ತುತ ಸೊಲ್ಲಾಪುರದಲ್ಲಿ , ಮುದ್ದೆ ಗೌಡ ಮತ್ತು ಸುಗ್ಗಲ್ವ ಎನ್ನುವ ದಂಪತಿಗಳಿಗೆ ಜನಸಿದರು , ಚಿಕ್ಕ ವಯಸ್ಸಿನಲ್ಲೇ ಅವರು ಆಧ್ಯಾತ್ಮಿಕವಾಗಿ ಶಿವ ಭಕ್ತಿಯಲ್ಲಿ ತೊಡಗಿದ್ದರು , ಇವರ ಮೊದಲ ನಾಮಧೇಯ ಧೂಳಿಮಾಕಾಳ ಎನ್ನುವ ಹೆಸರು , ಆಧ್ಯಾತ್ಮಿಕವಾಗಿ ಮೈಗೂಡಿಸಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರರು , ಶ್ರೀ ಮಲ್ಲಿಕಾರ್ಜುನ ಸನ್ನಿಧಿಗೆ ಹೋಗಿ ಸೊನ್ನಲಿಗೆಗೆ ಬಂದು ದೇವಾಲಯವನ್ನು ಕಟ್ಟಿಸಿದರು ,ನಂತರ ಆ ಕ್ಷೇತ್ರಕ್ಕೆ ಯೋಗ ರಮಣೀಯ ಕ್ಷೇತ್ರವೆಂದು ಹೆಸರಿಟ್ಟರು ಎಂದು ನಾನು ಓದುವ ಮೂಲಕ ತಿಳಿದುಕೊಂಡೆ, ಸಾವಿರಾರು ಸಂಖ್ಯೆಯಲ್ಲಿ ಕಾಯಕಯೋಗಿಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ಕೊಡಿಸಿರುವರು ಶ್ರೀ ಸಿದ್ದರಾಮೇಶ್ವರರು, ಪ್ರಸ್ತುತ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡ ವಂಶಸ್ಥರು ಕೂಡ ನಮ್ಮ ನಾಡಿನಲ್ಲಿ ಬದುಕುತ್ತಿರುವುದು ನಮಗೆಲ್ಲಾ ಗೊತ್ತಿರುವ ವಿಚಾರ.
ಶ್ರೀ ಸಿದ್ದರಾಮೇಶ್ವರರ ಒಂದು ವಚನ ಸಾಹಿತ್ಯವನ್ನು ನಾವು ನೋಡಿದಾಗ ಅವರು ಕಪಿಲಸಿದ್ಧಮಲ್ಲಿಕಾರ್ಜುನ ಎನ್ನುವ ನಾಮಾಂಕಿತದಿಂತ ಅರವತ್ತೊಂದು ಸಾವಿರ ವಚನಗಳು ಬರೆದು ಹಾಡಿದ್ದಾರೆ ಎನ್ನುವ ದಾಖಲೆ ಇದೆ ,ಆದರೆ ಪ್ರಸ್ತುತ ೧೬೦೦ ವಚನಗಳು ಮಾತ್ರ ಲಿಖಿತವಾಗಿ ನಮಗೆ ದೊರಕಿದೆ ಅಂತ ತಿಳಿಯಬಹುದು, ಸಿದ್ದರಾಮೇಶ್ವರರು ಲಿಂಗಕಾಯಕವಲ್ಲದೇ , ಗುಡಿ , ಗೋಪುರ, ಬಾವಿ ಕಟ್ಟೆ, ಕೆರೆಗಳನ್ನು ಕೂಡ ಕಟ್ಟಿಸುವಂತಹ ಕಾರ್ಯವನ್ನು ಮಾಡಿದರು , ಅವರು ಕಟ್ಟಿದ ಎಷ್ಟೋ ಬಾವಿ , ಕೆರೆಗಳು ಇನ್ನು ಕೂಡ ಜೀವಿಸುತ್ತಿವೆ , ಒಮ್ಮೆ ಅಲ್ಲಮ ಪ್ರಭುಗಳು ಕೆರೆಯನ್ನು ಕಟ್ಟುವಾಗ ಬಂದು ನಿಂತು , ಅಲ್ಲಿನ ಜನರಿಗೆ ಎಲ್ಲೋ ನಿಮ್ಮ ಒಡ್ಡರಾಮ ಎಂದು ಜೋರಾಗಿ ಕೂಗಿದರಂತೆ ಆಗ ಅಲ್ಲೇ ಇದ್ದ ಜನರಿಗೆ ನಮ್ಮ ಸಿದ್ದರಾಮೇಶ್ವರಿಗೆ ಹೀಗೆ ಕರೆಯುತ್ತೀರಾ ಅಂದು ಕಲ್ಲುಗಳನ್ನು ತೂರಿದರು ಅಲ್ಲಮ ಪ್ರಭುಗಳ ಮೇಲೆ ನಂತರ ಆದೇ ಕಲ್ಲುಗಳು ತಿರುಗಿ ಜನರ ಮೇಲೆ ಬಿದ್ದು ರಕ್ತ ಬರುತ್ತಿರುವಾಗ , ಸಿದ್ಧರಾಮೇಶ್ವರರು ಬಂದು ಅವರ ವಿನಯದಿಂದ ಅಲ್ಲಮ ಪ್ರಭುಗಳ ಮನಗೆದ್ದರು ಈ ರೀತಿ ಮೌನದ ಆಧ್ಯಾತ್ಮಿಕದಲ್ಲಿ ಸಿದ್ಧರಾಮೇಶ್ವರರು ಮುಳುಗಿ ಹೋಗಿದ್ದರು .
ಶ್ರೀ ಸಿದ್ದರಾಮೇಶ್ವರರು ನನಗೆ ಸ್ಪೂರ್ತಿ ಚಿಲುಮೆಯ ಬೆಳಕು , ನನಗೆ ಶ್ರೀ ಶಿವಕುಮಾರ ಸ್ವಾಮಿಗಳು ಹೇಗೆ ಆರಾಧ್ಯ ದೇವರೋ ಹಾಗೆ ಶ್ರೀ ಸಿದ್ದರಾಮೇಶ್ವರರು ಕೂಡ ನನಗೆ ಆರಾಧ್ಯ ದೇವರು, ಶ್ರೀ ಸಿದ್ದರಾಮೇಶ್ವರರ ವಚನಗಳನ್ನು ಓದಿ ನನ್ನ ಜೀವನಕ್ಕೆ ತುಂಬಾ ಸ್ಪೂರ್ತಿಯನ್ನು ತೆಗೆದುಕೊಂಡಿರುವೆ, ಆಧ್ಯಾತ್ಮಿಕವಾಗಿ ನನಗೆ ಇರಲು ಸಹಾಯವಾಗುತ್ತಿರುವುದು ಸಿದ್ಧರಾಮೇಶ್ವರರ ವಚನಗಳೇ ಕಾರಣ , ನಾನು ಸಿದ್ಧಗಂಗಾ ಮಠದಲ್ಲಿ ಓದುವಾಗ , ಪ್ರಾರ್ಥನೆಯ ಸಮಯದಲ್ಲಿ ನನಗೆ ಅಲ್ಲಿನ ಗುರುಗಳು ಎಷ್ಟೋ ಶರಣರ ವಚನಗಳನ್ನು ಓದಿಸುವ ಮೂಲಕ ವಚನ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದರು , ಇನ್ನು ನನ್ನ ಆರಾಧ್ಯ ದೈವ ಶ್ರೀ ಶಿವಕುಮಾರ ಸ್ವಾಮೀಜಿಯನ್ನು ನೋಡುತ್ತಿದ್ದರೆ ಬಸವಣ್ಣ ಮತ್ತು ಸಿದ್ದರಾಮೇಶ್ವರರನ್ನು ನೋಡಿದಂತೆ ಆಗುತ್ತಿತ್ತು , ಪ್ರಸ್ತುತ “ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ನನ್ನ ಬದುಕಿನ ಮೇಲೆ ಹೆಚ್ಚಿನ ರೀತಿಯಲ್ಲಿ ಮಹತ್ವವನ್ನು ಬೀರಿದ್ದಾರೆ , ಅವರ ಜ್ಞಾನ, ವಚನಗಳು , ಅವರ ಆಧ್ಯಾತ್ಮಿಕ ಬೆಳಕು ನನಗೆ ಇನ್ನು ಹೆಚ್ಚಿನ ರೀತಿಯಲ್ಲಿ ಬದುಕಿಗೆ ಪ್ರೇರಣೆ ಆಗುತ್ತಿದೆ , ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಸಿದ್ಧಲಿಂಗ ಸ್ವಾಮೀಜಿ ಮತ್ತು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ನನಗೆ ಅತಿ ಹೆಚ್ಚಿನ ರೀತಿಯಲ್ಲಿ ನನಗೆ ಪ್ರೇರಣೆ ನೀಡುವ ಮೂಲಕ ಶೈಕ್ಷಣಿಕವಾಗಿ , ಆಧ್ಯಾತ್ಮಿಕವಾಗಿ, ಅವರ ಜೀವನವೇ ನನಗೆ ಸ್ಪೂರ್ತಿಯಾಗಿದೆ.
ನನಗೆ ಆಗ ೭ ವರ್ಷದ ವಯಸ್ಸಿನ ಚಿಕ್ಕ ಹುಡುಗ , ನಮ್ಮೂರಿನಲ್ಲಿ ಊರಿನ ಜಾತ್ರೆ ಮಾಡಿದ್ರು , ನಮ್ಮ ಊರಿನ ಆರಾಧ್ಯ ದೈವ ಶ್ರೀ ರೇವಣಸಿದ್ಧೇಶ್ವರು , ಊರಿಗೆಲ್ಲಾ ಬ್ಯಾನರ್ ಹಾಕಿಸಿ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಹಾಕಿಕೊಂಡಿದ್ರು , ನಮ್ಮ ಮನೆಯಲ್ಲಿ ಕೂಡ ಬ್ಯಾನರ್ ಹಾಕಿಸಿಕೊಂಡಾಗ , ನಮ್ಮ ತಾತ ಆ ಬ್ಯಾನರ್ ನೋಡಿ , ಶ್ರೀ ಸಿದ್ದರಾಮೇಶ್ವರರು ಕೂಡ ರೇವಣಸಿದ್ಧೇಶ್ವರಂತೆ ಇರುತ್ತಾರೆ ಅಂತ ಹೇಳಿದ್ದು ಈಗಲೂ ನೆನಪಿದೆ, ನಂತರ ದಾವಣಗೆರೆಗೆ ಶ್ರೀ ಸಿದ್ದರಾಮೇಶ್ವರರ ರಥೋತ್ಸವಕ್ಕೆ ಹೋದಾಗ ಅಲ್ಲಿನ ದೇವಸ್ಥಾನದಲ್ಲಿ ಶ್ರೀ ಸಿದ್ದರಾಮೇಶ್ವರರು, ರೇವಣ್ಣ ಸಿದ್ದೇಶ್ವರಂತೆ ಇರುವರು ಅಂತ ತಿಳಿತು ಅಂದೇ ನಾನು ಮೊದಲು ಇಮ್ಮಡಿ ಶ್ರೀಗಳನ್ನ ಹತ್ತಿರದಿಂದ ನೋಡಿದ್ದು , ಪ್ರಸ್ತುತ ನನಗೆ ಆರಾಧ್ಯ ದೈವ ಕೂಡ ಹೌದು , ಮನುಷ್ಯರನ್ನು ನಾವು ದೇವರಾಗಿಸುವುದು ಮೂರು ಸಲ , ಒಂದು ತಾಯಿ ಹೆತ್ತು ಸಾಕಿದಾಗ , ತಂದೆ ಪೋಷಣೆ ಮಾಡಿದಾಗ , ಮತ್ತೊಂದು ಜೀವನಕ್ಕೆ ಯಾವುದಾದರೂ ಒಬ್ಬ ವ್ಯಕ್ತಿ ಪ್ರೇರಣೆಯಾದಾಗ , ಇಂದು ಕೂಡ ನಾವು ಶ್ರೀ ಸಿದ್ದರಾಮೇಶ್ವರರ ವಚನಗಳನ್ನು ಓದುತ್ತಾ , ಅವರ ವಚನಗಳ ತತ್ವಗಳನ್ನು ಪಾಲಿಸುತ್ತಾ ಬದುಕುತ್ತಿದ್ದೇವೆ , ಪ್ರತಿ ವರ್ಷವೂ ಕೂಡ ಜನವರಿ ೧೪ ರಂದು ನಾವೆಲ್ಲರೂ ಶ್ರೀ ಸಿದ್ದರಾಮೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸಾನ್ನಿಧ್ಯದಲ್ಲಿ , ಪ್ರಸ್ತುತ ಸಾಧಕರಿಗೆ ಶ್ರೀ ಸಿದ್ದರಾಮೇಶ್ವರರ ಪ್ರಶಸ್ತಿಯನ್ನು ಕೊಡುತ್ತಿರುವುದು ತುಂಬಾ ಸಂತೋಷದ ವಿಚಾರ , ಈ ಒಂದು ಪ್ರಶಸ್ತಿಯಿಂದ ಆರ್ಥಿಕವಾಗಿ ಸಹಾಯ ಕೂಡ ಆಗುತ್ತಿದೆ , ಈ ಪ್ರಶಸ್ತಿಯನ್ನು ಪ್ರಾರಂಭಿಸಿದ ಕರ್ನಾಟಕ ಸರ್ಕಾರಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಹಾಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡುತ್ತಿರುವ ಆಯ್ಕೆ ಸಮಿತಿಗೆ ಹೃದಯ ಪೂರ್ವಕ ಧನ್ಯವಾದಗಳು, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳಿಗೆ ಶರಣು ಶರಣಾರ್ಥಿ, ಮತ್ತೊಮ್ಮೆ ಶ್ರೀ ಸಿದ್ದರಾಮೇಶ್ವರ ಜಯಂತಿಯ ಶುಭಾಶಯಗಳನ್ನು ಎಲ್ಲರಿಗೂ ಶುಭ ಕೋರುವೆ .
ಭೋವಿ ರಾಮಚಂದ್ರ
ಹರಪನಹಳ್ಳಿ
8861588118.