- Advertisement -
ಮೈಸೂರು – ನಗರದ ಶ್ರೀರಾಂಪುರದಲ್ಲಿರುವ (ಶ್ರೀ ಉತ್ತರಾದಿ ಮಠಕ್ಕೆ ಸೇರಿರುವ) ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಅ.೨೧ರಿಂದ ೨೭ರವರೆಗೆ ಸಂಜೆ ೬ರಿಂದ ೭ರವರೆಗೆ ನಾಡಿನ ಸುಪ್ರಸಿದ್ದ ಪ್ರವಚನಕಾರರಾದ ಪಂ.ಶ್ರೀ ಶ್ರೀನಿವಾಸತೀರ್ಥಾಚಾರ್ಯ ಹೆಬ್ಬೂರು ಇವರಿಂದ ಮಹಾಭಾರತ ಪ್ರವಚನ ಮಾಲಿಕೆ (ಆದಿಪರ್ವ) ಎಂಬ ವಿಷಯದ ಕುರಿತು ವಿಶೇಷ ಪ್ರವಚನವನ್ನು ಆಯೋಜಿಸಲಾಗಿದೆ.
ಅ.೨೭ರಂದು ಭಾನುವಾರ ಬೆಳಿಗ್ಗೆ ಮಂಗಳ ಮಹೋತ್ಸವದ ಪರ್ವಕಾಲದಲ್ಲಿ ಲೋಕಕ್ಷೇಮಕ್ಕಾಗಿ ‘ನವಗ್ರಹ ಹೋಮ’ವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ವ್ಯವಸ್ಥಾಪಕ ಪಂ.ಹೇಮಂತಾಚಾರ್ಯ ಗುಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ ೮೧೪೭೨೦೫೩೨೬ ಸಂಪರ್ಕಿಸಬಹುದು.