ಮೇ ತಿಂಗಳು ಮೇಘಾಲಯದ ತೂರಾದಲ್ಲಿ ನಡೆದ ಅಖಿಲ ಭಾರತ ಕವಯಿತ್ರಿಯರ 21ನೇ ಸಮ್ಮೇಳನದಲ್ಲಿ ಬೆಳಗಾವಿಯ ಖ್ಯಾತ ಸಾಹಿತಿಗಳಾದ ಜ್ಯೋತಿ ಬದಾಮಿ ಅವರಿಗೆ ಪ್ರತಿಷ್ಠಿತ ಮಹಾದೇವಿ ವರ್ಮಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜ್ಯೋತಿ ಬದಾಮಿ ಯವರು ರಚಿಸಿದ ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು ಕೃತಿ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಆ ಕೃತಿಗೆ ಪ್ರಶಸ್ತಿ ದೊರೆತಿದ್ದು ಕರ್ನಾಟಕ ದ ಬೆಳಗಾವಿಗರಿಗೆ ಹೆಮ್ಮೆಯ ಸಂತಸದ ವಿಷಯ.
ಮೇಘಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಎಐಪಿಸಿ ಸಂಸ್ಥಾಪಕರಾದ ಲಾರಿ ಆಜಾದ್, ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ರಾಷ್ಟ್ರೀಯ ಅಧ್ಯಕ್ಷೆ ಸ್ಟ್ರೀಮಲೇಟ್ ಢಾಕಾ,ಮನೂಮತಿ ಕುರ್ಮಿ, ಸುಲಭ ಶೌಚಾಲಯ ಸಂಸ್ಥೆ ಯ ಕಾರ್ಯದರ್ಶಿ ಜ್ಯೋತಿ ಅಶೋಕ್, ಕೇರಳದ ಶ್ರೇಷ್ಠ ಲೇಖಕಿ ಕೆ.ಪಿ.ಸುಧೀರ, ಸಮ್ಮೇಳನದ ನಿರ್ವಾಹಕಿ ಶ್ರೀಮತಿ ಢಕೋಚಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ,ಚುಟುಕು ಸಾಹಿತ್ಯ ಪರಿಷತ್, ಲಿಂಗಾಯತ ಮಹಿಳಾ ಸಮಾಜ, ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು,ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ- ಧಾರವಾಡ ಈ ಎಲ್ಲಾ ಸಂಘ ಸಂಸ್ಥೆಗಳು ಸಾಹಿತ್ಯ ಬಳಗ ಜ್ಯೋತಿ ಬದಾಮಿ ಯವರಿಗೆ ಶುಭಾಶಯಗಳೊಂದಿಗೆ ಹಾರೈಸಿದ್ದಾರೆ.