spot_img
spot_img

ಶ್ರೀ ಯೋಗಾನರಸಿಂಹ ದೇವಸ್ಥಾನದಲ್ಲಿ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗ

Must Read

spot_img
- Advertisement -

ಮೈಸೂರು-  ಇದೇ ಮೇ 25 ರಿಂದ ಮೈಸೂರು ವಿಜಯನಗರ 1ನೇ ಹಂತದ ಶ್ರೀಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗವನ್ನು ಹಮ್ಮಿಕೊಳ್ಳಲಾಗಿದೆ .

ದೇಗುಲದ ಸ್ಥಾಪಕ ಆಗಮ ಪ್ರವೀಣ ಡಾ.ಬಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಪ್ರತಿನಿತ್ಯ ಸ್ವಾಮಿಯವರಿಗೆ ವಿವಿಧ ಬಗೆಯ ಅಲಂಕಾರಗಳು ಮೇ 25 ಶನಿವಾರದಂದು ಲಕ್ಷಾರ್ಚನೆ ಮತ್ತು ಮಾತೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ , ಮೇ 26 ಭಾನುವಾರದಂದು ಸಹಸ್ರಕಳಶಾಭಿಷೇಕ – ಸೌಂದರ್ಯ ಲಹರಿ ಪಾರಾಯಣ , ಮೇ 27 ರಂದು ಕುಂಭಾಭಿಷೇಕ ಅಖಂಡ ಮಹಾ ಸುದರ್ಶನ ಹೋಮ , ವಿಷ್ಣು ಸಹಸ್ರ ನಾಮ ಪಾರಾಯಣದೊಂದಿಗೆ ಸಂಪನ್ನವಾಗಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ತಿಳಿಸಿರುತ್ತಾರೆ . ವಿವರಗಳಿಗೆ : 9900400000 .

ಭಾಷ್ಯಂ ಸ್ವಾಮೀಜಿ ಕಿರುಪರಿಚಯ
ಚಿಂತನೆಗಳು ಇಲ್ಲದ ಮನುಷ್ಯನ ಮನಸ್ಸುಗಳೇ ಇಲ್ಲ. ಎಲ್ಲೋ ಒಂದು ಕಡೆ ಪ್ರತಿಯೊಂದು ಮನಸ್ಸು ಸಹ ಚಿಂತೆಯ ಅಂಗಳದಲ್ಲಿ ತಣ್ಣನೆ ಕುಳಿತಿರುತ್ತದೆ. ಕೆಲವು ಬಾರಿ ಅದಕ್ಕೆ ಪರಿಹಾರ ಸಿಗದೆ ಸಮಸ್ಯೆಗಳ ಸಿಲುಕಿನಲ್ಲಿ ಸಿಕ್ಕಿಹಾಕಿಕೊಂಡು ಆ ಮೂಲಕ ಇಡೀ ಸಮಾಜದ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಬೇಕೆಂಬ ಮನೋಸ್ಥಿತಿ ನಿರ್ಮಾಣವಾಗುತ್ತದೆ.

- Advertisement -

ಆದರೆ ಪ್ರತಿಯೊಂದು ಚಿಂತೆಗೂ ಎಲ್ಲೋ ಒಂದು ಕಡೆ ಪರಿಹಾರವಿದೆ. ಅದನ್ನು ಕಂಡು ಕೊಳ್ಳುವ ಪ್ರಯತ್ನದಲ್ಲಿ ನಾವು ವಿಫಲರಾಗಿದ್ದೇವೆ. ಅಂತಹ ಸಾಧನೆಯನ್ನು ಮಾಡಿಕೊಂಡು ಹೋಗುತ್ತಿರುವವರು ಖ್ಯಾತ ಸಂಸ್ಕೃತ ತಜ್ಞರೂ, ವಿಜಯನಗರ ಯೋಗನರಸಿಂಹ ಸ್ವಾಮಿ ದೇವಾಸ್ಥಾನದ ಸಂಸ್ಥಾಪಕರು ಆದ ಭಾಷ್ಯಂ ಸ್ವಾಮೀಜಿಯವರು.

ವಿಶ್ವಶಾಂತಿ ಎಂಬುವುದು ಇಂದು ಅನಿವಾರ್ಯತೆಯಾಗಿದೆ, ಅಶಾಂತಿಯ ಜಗತ್ತಿನಲ್ಲಿ ದೇವರ ಕಲ್ಪನೆಯನ್ನು ಮುಂದಿಟ್ಟುಕೊಂಡು ಆ ಮೂಲಕ ನಾವೆಲ್ಲರೂ ತೊಡಗಿದ್ದೇವೆ. ಭಾಷ್ಯಂ ಸ್ವಾಮೀಜಿಯವರು ಈ ಹುಡುಕಾಟದಲ್ಲಿ ತೊಡಗಿರುವವರೆಗೆ ದಾರಿದೀಪವಾಗಿದ್ದಾರೆ. ಅಶಾಂತಿಯ ಕಗ್ಗತ್ತಲಲ್ಲಿ ಹುಡುಕಾಟ ಮಾಡುತ್ತಿರುವವರಿಗೆ ಶಾಂತಿಯ ದೀಪವನ್ನು ತೋರಿಸಿ ಆ ಮೂಲಕ ಮನುಷ್ಯತ್ವದ ಮೂಲಭೂತ ತತ್ವವನ್ನು ಜೀವಂತವಾಗಿ ಇಡುತ್ತಿದ್ದಾರೆ.
ಇಂದು ಸಮಾಜದಲ್ಲಿ ಡಾಂಭಿಕತನ ಹೆಚ್ಚಾಗಿ ಕಾಡುತ್ತಿದೆ. ಆದರೆ ಇಂತಹ ಒಂದು ಪರಿಸ್ಥಿತಿಯಲ್ಲಿ ತಮ್ಮ ಅಪಾರವಾದಂತಹ ಜ್ಞಾನದ ಮೂಲಕ ಜನತೆಯ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ತೊಡಗಿರುವ ಭಾಷ್ಯಂ ಸ್ವಾಮೀಯವರನ್ನು ನಿಜಕ್ಕೂ ಅದ್ವಿತೀಯ ವ್ಯಕ್ತಿತ್ವದವರು ಎಂದು ವಿಶ್ಲೇಷಿಸಬೇಕಾಗಿದೆ.

ತಮ್ಮ ಅಸ್ತಿತ್ವದ ಬಗ್ಗೆ ಎಂದೂ ಘಂಟಾಘೋಷವಾಗಿ ಮಾತನಾಡದೆ ತಮ್ಮ ಬಳಿ ಬಂದವರನ್ನು ಸಂತೈಸಿ ಅವರ ಸಮಸ್ಯೆಗಳಿಗೆ ನಿಖರ ಉತ್ತರಗಳನ್ನೂ ತಮ್ಮ ಜ್ಞಾನದೇಗುಲದಿಂದ ನೀಡಿ ಆ ಮೂಲಕ ಸಂತೋಷದ ಒಂದಷ್ಟು ಹನಿಯನ್ನು ಉಣಿಸುವ ಇವರ ಆ ವ್ಯಕ್ತಿತ್ವವನ್ನು ಕಂಡರೆ ಯಾರು ಬೇಕಾದರೂ ಮಾರುಹೋಗಬಹುದು. ಆದರೆ ಅಲ್ಲಿ ಯಾವುದೇ ಸ್ವಾರ್ಥವಿಲ್ಲ, ಭಯ ಮೂಡಿಸುವಂತಹ ಮಾಂತ್ರಿಕತೆ ಇಲ್ಲ. ಎಲ್ಲವೂ ಸರಳ ಮನುಷ್ಯನ ಮನಸ್ಸಿನ ಒಳಗೆ ಸುಪ್ತಾವಸ್ಥೆಯಲ್ಲಿರುವ ವಿಚಾರಗಳನ್ನು ಹಾಗೆಯೇ ಅರಿತುಕೊಳ್ಳುವ ಮೂಲಕ ಅದಕ್ಕೆ ಸರಿಯುತ್ತರವನ್ನು ನೀಡುವ ಭಾಷ್ಯಂ ಸ್ವಾಮೀಜಿಯವರ ಕಾರ್ಯರೂಪ ಮಾಯೆ ಮಂತ್ರ ತಂತ್ರಗಳ ಮುಖವಾಡಗಳಿಲ್ಲದ ನಗ್ನಸತ್ಯದ ಶ್ವೇತವರ್ಣವಾಗಿದೆ.
ಭಾಷ್ಯಂ ಸ್ವಾಮೀಜಿಯವರು ದೇವರನ್ನು ಮುಂದಿಟ್ಟುಕೊಂಡು ಎಂದೂ ತಮ್ಮ ಕಾರ್ಯವನ್ನು ಮಾಡಲ್ಲ. ದೇವರು ಎಂಬ ಶಕ್ತಿ ಕೇವಲ ಕಾಲ್ಪನಿಕವಾದರೂ ಆ ಕಾಲ್ಪನಿಕತೆಯ ಮೂಲಕ ಮನುಷ್ಯನಲ್ಲಿ ಶಾಂತಿ ಮೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

- Advertisement -

ಶ್ರೀ ಭಾಷ್ಯಂ ಸ್ವಾಮೀಜಿಯವರು ಅವಧೂತರಲ್ಲ. ಆದರೆ ಚಿಂತೆಗಳ ಮನಸ್ಸುಗಳನ್ನು ಗುಡಿಸಿ ಅದರೊಳಗಿರುವ ಕಲ್ಮಶಗಳನ್ನು ದೂರ ಮಾಡುವಂತಹ ಜ್ಞಾನಿ. ಇಂತಹ ಭಾಷ್ಯಂ ಸ್ವಾಮೀಜಿ ಅವರ ಬಗ್ಗೆ ಇಡೀ ರಾಷ್ಟ್ರವೇ ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು.

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group