spot_img
spot_img

ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಮಹಾತ್ಮರ ಚರಿತಾಮೃತ ಮತ್ತು ನಿಲುಗನ್ನಡಿ ಕೃತಿಗಳು ಆಯ್ಕೆ

Must Read

ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ೨೨ ವರ್ಷಗಳಿಂದ ನೀಡುತ್ತಾ ಬಂದಿರುವ ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಷ್ಟ್ರೀಯ ಗೌರವ ಪ್ರಶಸ್ತಿಗೆ, ಬೆಳಗಾವಿ ಜಿಲ್ಲೆಯ ಅಥಣಿಯ ಮೋಟಗಿ ಮಠದ ಪೂಜ್ಯಶ್ರೀ ಪ್ರಭು ಚನ್ನಬಸವ ಮಹಾಸ್ವಾಮೀಜಿಯವರ ವಿಶ್ವ ವಿಭೂತಿಗಳ ಜೀವನ ಕಥನಗಳ ಮಹಾತ್ಮರ ಚರಿತಾಮೃತ ಕೃತಿ ಮತ್ತು ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಮಸ್ಕಿ ಮೂಲದ ಬೆಂಗಳೂರು ನಿವಾಸಿ ಶ್ರೀಮತಿ ರೇಣುಕಾ ಕೋಡಗುಂಟಿ ಇವರ ನಿಲುಗನ್ನಡಿ ಕಥಾ ಸಂಕಲನ ಕೃತಿ ಆಯ್ಕೆಯಾಗಿವೆ.

ಈ ಪ್ರಶಸ್ತಿಗಳನ್ನು ದಿ. ೩೦ ಆಕ್ಟೊಬರ್ ೨೦೨೨ ರಂದು ದಾವಣಗೆರೆಯ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ, ರಾಜ್ಯ ಮಟ್ಟದ ೫ನೆಯ ಭಕ್ತಿ ಸಾಹಿತ್ಯ ಸಮ್ಮೇಳನವಾದ ಪಂ. ಪುಟ್ಟರಾಜ ಸಾಹಿತ್ಯೋತ್ಸವ-೨೦೨೨ ಸಮಾರಂಭದಲ್ಲಿ ಪ್ರದಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಸೊರಬದ ಡಾ. ಅಜೀತ್ ಹರೀಶಿ ಇವರ ಕನಸಿನ ದನಿ (ಕವನ ಸಂಕಲನ), ಶಿರಸಿಯ ಭಾಗೀರಥಿ ಹೆಗಡೆಯವರ ಕಾಲಾಂತರ (ಕಾದಂಬರಿ), ಸೇಡಂನ ಪ್ರೊ. ಶೋಭಾದೇವಿ ಚೆಕ್ಕಿ ಪುಟ್ಟ ಮತ್ತು ಪುಟ್ಟಿ (ಮಕ್ಕಳ ಕವನ ಸಂಕಲನ), ಮಡಿಕೇರಿಯ ಸಹನಾ ಕಾಂತಬೈಲು ಇವರ ಇದು ಬರಿ ಮಣ್ಣಲ್ಲ (ಲಲಿತ ಪ್ರಬಂಧಗಳು), ನಾಗರಹಳ್ಳಿಯ ನಾ. ಮ. ಮರುಳಾರಾಧ್ಯರು ಇವರ ಗಡಿನಾಡು ಶ್ರೀಬೆಳಕು (ಜೀವನ ಚರಿತ್ರೆ), ಚಿತ್ತಾಪೂರ ತಾಲೂಕಿನ ದಂಡಗುಂಡದ ಪಂಚಾಕ್ಷರಿ ಪೂಜಾರಿ ಇವರ ಎಂತಜ್ಞ (ವಚನ ತ್ರಿಪದಿ), ಧಾರವಾಡದ ಶ್ರೀದೇವಿ ಬಿರಾದಾರವರ ಪಯಣ (ಲೇಖನಗಳ ಸಂಗ್ರಹ), ಬೆಂಗಳೂರ ಮೂಲದ ಅಮೇರಿಕಾ ನಿವಾಸಿ ಜಯಶ್ರೀ ದೇಶಪಾಂಡೆಯವರ ಹಲವು ನಾಡು ಹೆಜ್ಜೆ ಹಾಡು (ಪ್ರವಾಸ ಕಥನ), ಚಿಕ್ಕಮಗಳೂರಿನ ನಳಿನಿ ಡಿ. ಇವರ ಕುವೆಂಪು ಮತ್ತು ರವೀಂದ್ರನಾಥ ಠಾಗೂರ (ತೌಲನಿಕ ಅಧ್ಯಯನ) ಹುಮನಾಬಾದದ ಡಾ. ಸಂಗೀತಾ ಪಾಟೀಲ್ ಇವರ ಜಾನಪದ ಝರಿ (ಜಾನಪದ ಲೇಖನಗಳ ಸಂಗ್ರಹ), ಚಿತ್ರದುರ್ಗ ಪ್ರೊ. ಎಚ್.ಲಿಂಗಪ್ಪ ಇವರ ಅರಿವಿನ ಸಿರಿ ಚನ್ನಬಸವಣ್ಣ (ಶರಣರ ಚರಿತ್ರೆ), ತುಮಕೂರು ಜಿಲ್ಲೆಯ ಶ್ರೀ ಮುದ್ದೇನಹಳ್ಳಿ ನಂಜಯ್ಯನವರ ಯೋಗಿಗಳ ಯೋಗಿ ಶಿವಯೋಗಿ ಸಿದ್ಧರಾಮ (ಷಟ್ಪದಿ ಕಾವ್ಯ) ಮತ್ತು ವಿಜಯಪುರ ಜಿಲ್ಲೆಯ ಆಲಮೇಲದ ಶ್ರೀಮತಿ ಶುಭಮಂಗಳ ಗಂ. ಜೋಗುರ ಇವರ ಚೊಚ್ಚಿಲ ಕೃತಿ, ನಾವಿದ್ದೇವೆ ಜಗದ ಕಣ್ಣಾಗಿ (ಕವನ ಸಂಕಲನ) ಈ ಪುಸ್ತಕಗಳು ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ವರ್ಷದ ಶೇಷ್ಠ ಕೃತಿ ರತ್ನ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪೂಜ್ಯಶ್ರಿ ಚನ್ನವೀರಸ್ವಾಮಿಗಳು ಹಿರೇಮಠ (ಕಡಣಿ) ಇವರ ನೇತೃತ್ವದಲ್ಲಿ ಡಾ. ಹೆಚ್. ಬಿ. ಪೂಜಾರ, ಡಾ. ರಾಜೇಂದ್ರ ಗಡಾದ ಮತ್ತು ಪ್ರೊ. ಕವಿತಾ ಕಾಶಪ್ಪನವರ್ ಇವರುಗಳು ನಿರ್ಣಾಯಕರಾಗಿ ಆಯ್ಕೆ ಮಾಡಿಕೊಟ್ಟು ಗುರುಗಳ ಸೇವೆ ಸಲ್ಲಿಸಿದ್ದಾರೆ ಎಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!