spot_img
spot_img

ಮಹಾತ್ಮರು ಹುಟ್ಟುತ್ತಾರೆ.ಅವರ ಜೀವನ ಆದರ್ಶಗಳಿಂದ ಅಜರಾಮರಾಗಿರುತ್ತಾರೆ – ಮೋಹನ ದಂಡಿನ

Must Read

spot_img
- Advertisement -

ಸವದತ್ತಿ; ಮಹಾತ್ಮರು ಹುಟ್ಟುತ್ತಾರೆ ಅವರ ಬದುಕಿನೊಂದಿಗೆ ಸದಾ ಆದರ್ಶಗಳನ್ನು ಜಗತ್ತಿಗೆ ನೀಡುತ್ತಾರೆ. ಈ ದಿನ  ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಬದುಕಿನ ಆದರ್ಶಗಳನ್ನು ಸ್ಮರಿಸುವ ನಾವು ದಿನನಿತ್ಯದ ಜೀವನದಲ್ಲಿ ಕೂಡ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಸ್ಮರಣೆ ಅಜರಾಮರವಾಗಿಸೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ತಿಳಿಸಿದರು.

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿ ಉತ್ಸವ ದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ವಿಶಾಲವಾದ ಮನಸ್ಸುಳ್ಳವರೇ ಮಹಾತ್ಮರು. ಮಹಾತ್ಮರಂತೆ ನಮ್ಮ ಮನಸ್ಸು ವಿಶಾಲವಾದಾಗ ಜೀವನದಲ್ಲಿ ಶಾಂತಿ-ಸಮಾಧಾನ ಸಹಜವಾಗಿ ನೆಲೆಸುತ್ತದೆ. ನಮ್ಮ ಬದುಕು ಭವ್ಯ, ದಿವ್ಯವಾಗುತ್ತದೆ ಈ ದಿಸೆಯಲ್ಲಿ ಮಹಾತ್ಮರ ಸ್ಮರಣೆ ಸದಾ ಅಮರ ಎಂದು ಹೇಳಿದರು. 

- Advertisement -

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾದ ಮೈತ್ರಾದೇವಿ ವಸ್ತ್ರದ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಾರ್ಯಾಲಯದ ಸಿಬ್ಬಂದಿ ಯವರಾದ ಆಯ್. ಎಂ. ಮಕಾನದಾರ, ಎಲ್. ಎಸ್. ಹಿರೇಮಠ, ಎಂ. ಡಿ. ಹುದ್ದಾರ, ಜಿ. ಎಂ. ಕರಾಳೆ, ಎನ್.ಎಸ್.ವಗೆನ್ನವರ, ಎಸ್.ಎನ್.ಹಂಪಿಹೊಳಿ, ಎನ್.ಎಂ.ಮುಜಾವರ, ವಿದ್ಯಾ ಗಾಣಗಿ, ಎಫ್.ಎಚ್.ಮಾವುತ, ಬಿ.ಎಚ್.ಮಾಳಗಿ, ವಿನಾಯಕ ಕುರುಬಗಟ್ಟಿ, ರಾಜು. ಹನಸಿ, ರಮೇಶ ತಳವಾರ, ಆಯೇಶಾ ಜಹಗೀರದಾರ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಎಸ್. ಬಿ. ಬೆಟ್ಟದ,  ಸಿ. ವ್ಹಿ. ಬಾರ್ಕಿ, ವೈ.ಬಿ.ಕಡಕೋಳ, ರತ್ನಾ.ಸೇತಸನದಿ, ವ್ಹಿ.ಸಿ.ಹಿರೇಮಠ, ರಾಜು ಭಜಂತ್ರಿ, ಡಿ.ಎಲ್.ಭಜಂತ್ರಿ,  ಶಬ್ಬೀರ್,  ಮುನವಳ್ಳಿ,ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ಜಗನ್ನಾಥ ಸಿದ್ಲಿಂಗನ್ನವರ, ಈರಪ್ಪ ಅವರಾದಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯ ಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಪ್ರಾರ್ಥನೆ ಸಲ್ಲಿಸಿದರು. ಎಂ. ಡಿ. ಹುದ್ದಾರ ನಿರೂಪಿಸಿದರು. ಜಿ. ಎಂ. ಕರಾಳೆ ಸ್ವಾಗತಿಸಿದರು. ವಿದ್ಯಾ ಗಾಣಗಿ ವಂದಿಸಿದರು

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group