ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಐದು ವರ್ಷಗಳ ಆಡಳಿತ ಅವಧಿಗೆ ನೂತನ ಅದ್ಯಕ್ಷರಾಗಿ ಮಹಾವೀರ ಛಬ್ಬಿ, ಉಪಾಧ್ಯಕ್ಷರಾಗಿ ಸುವರ್ಣಾ ಪಾಲಬಾಂವಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ ಅಧಿಕಾರಿ ಪಿ ವಾಯ್ ಕೌಜಲಗಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ಗೌರವ್ವಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಯಾವುದೆ ಗದ್ದಲ ಉಂಟಾಗದಂತೆ ಜಾಗೃತೆ ಕ್ರಮವಹಿಸಿದ ಪೊಲೀಸ ಅಧಿಕಾರಿಗಳಾದ ಸಿಪಿಐ ಶ್ರೀಶೈಲ ಬ್ಯಾಕೋಡ, ಪಿಎಸ್ಐ ರಾಜು ಪೂಜೇರಿ ತಮ್ಮ ಕಾರ್ಯವನ್ನು ನಿರ್ವಹಿಸಿದರು.
ಹಣಾಹಣಿಯಲ್ಲಿ ಅಚ್ಚರಿ ಮೂಡಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ ಛಬ್ಬಿ ಅವರ ಬೆಂಬಿಲಿತರಾದ ಭೀಮಶಿ ಮಗದುಮ್. ಮುಪ್ಪಯ್ಯ ಹಿಪ್ಪರಗಿ, ಶ್ರೀಶೈಲ ಬಾಗೋಡಿ, ಅಡಿವೆಪ್ಪ ಪಾಲಬಾಂವಿ, ಮಾದೇವ ಹೊಸಟ್ಟಿ, ಮಲ್ಲಪ್ಪ ಛಬ್ಬಿ, ಗುರು ಹಿಪ್ಪರಗಿ, ಲಕ್ಷ್ಮಣ ಛಬ್ಬಿ, ಯಮನಪ್ಪ ನಿಡೋಣಿ, ಹನಮಂತ ಬದನಿಕಾಯಿ, ರಾಜು ತಳವಾರ, ರೇವಪ್ಪ ಸಿಂಪಿಗೆರ, ತುಕಾರಾಮ ಸನದಿ, ಬಾಳೇಶ ನೇಸುರ, ಯಾದಪ್ಪ ನಿಡೋಣಿ, ಹನಮಂತ ಪಾಲಬಾಂವಿ, ಭೀಮಶೇಪ್ಪ ತೇರದಾಳ, ಅಯ್ಯಪ್ಪ ಹೀರೆಮಠ, ಬಾಳೇಶ ಶಿವಾಪೂರ, ಈಶ್ವರ ಪಾಲಬಾಂವಿ, ಸಿದ್ಧಪ್ಪ ಕುಲಿಗೋಡ, ಶಿವು ಶೆಡಬಾಳ್ಕರ, ಮಾದೇವ ಪಾಲಬಾಂವಿ, ಶಿದರಾಯ ಮರಿಚಂಡಿ, ಮುಂತಾದ ನೂರಾರು ಜನರು ಗುಲಾಲ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.