spot_img
spot_img

ಕಲ್ಲೋಳಿಯನ್ನು ಮಾದರಿ ಪಟ್ಟಣವಾಗಿಸಲು ಶ್ರಮಿಸಿ – ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಮೂಡಲಗಿ: ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪಪಂ ನೂತನ ಆಧ್ಯಕ್ಷ- ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

ಕಲ್ಲೊಳ್ಳಿ ಪಟ್ಟಣ ಪಂಚಾಯತಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಂಚಾಯತಿ ಕಮೀಟಿಯವರು ಶ್ರಮಿಸುವಂತೆ ಒತ್ತಿ ಹೇಳಿದರು.

ಕಲ್ಲೊಳ್ಳಿ ಪಟ್ಟಣದ ಅಭಿವೃದ್ಧಿಗಾಗಿ ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ನಾನಾ ಯೋಜನೆಗಳನ್ನು ರೂಪಿಸುವ ಮೂಲಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಈ ಮೂಲಕ ಜನರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದಿಂದ ಸಿಗುವ ಬಹುತೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಅಭಿವೃದ್ಧಿಗಾಗಿ ಹಣದ ಹೊಳೆಯೇ ಹರಿಸಿದ್ದೇನೆ. ಆದರೀಗ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನವನ್ನೇ ನೀಡುತ್ತಿಲ್ಲ. ಈ ಕಾರಣದಿಂದ ಹೊಸ ಹೊಸ ಕಾಮಗಾರಿಗಳಿಗೆ ಅನುದಾನದ ಕೊರತೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷೆ ಮೇಘಾ ಖಾನಾಪೂರ ಅವರು ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಈರಪ್ಪ ಹೆಬ್ಬಾಳ, ಪರಪ್ಪ ಕಡಾಡಿ, ಮಲ್ಲಪ್ಪ ಖಾನಾಪೂರ, ಬಸವಂತ ದಾಸನವರ, ಬಸವರಾಜ ಯಾದಗೂಡ, ಭೀಮಶೆಪ್ಪ ಗೋರೋಶಿ, ಮಹಾಂತೇಶ ಕಪ್ಪಲಗುದ್ದಿ, ರಾಮಣ್ಣ ದಾಸನಾಳ, ಪರಸಪ್ಪ ಮಕ್ಕಳಗೇರಿ, ರಾಮಣ್ಣ ಕಂಕಣವಾಡಿ, ದತ್ತು ಕಲಾಲ, ಕಲ್ಲಪ್ಪ ಇಟ್ನಾಳ, ಬಸು ಜಗದಾಳ, ಪಟ್ಟಣ ಪಂಚಾಯತಿ ಸದಸ್ಯರು, ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

 ದಿ. 9 ರಂದು ಕಪ್ಪತಗುಡ್ಡದಲ್ಲಿ 9 ನೇ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ”

ಗದಗ - ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ,...
- Advertisement -

More Articles Like This

- Advertisement -
close
error: Content is protected !!
Join WhatsApp Group