ಬಣಜಿಗ ಸಮಾಜ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಿ: ಬಸವರಾಜ ಬಡ್ಡಿ

Must Read

ಹುನಗುಂದ – ಸಮಾಜ ಬಾಂಧವರು ಸದ್ಯ ರಾಜ್ಯಾದ್ಯಂತ ನಡೆಯುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಂಡು ಸಮಾಜ ಸಂಘಟನೆ ಮತ್ತು ಸರ್ಕಾರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಬಡ್ಡಿ ಹೇಳಿದರು.

ಗುರುವಾರ ಪಟ್ಟಣದ ಖಾಸಗಿ ನಿವಾಸ ಒಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಕೆಲವೊಂದು ಗೊಂದಲಗಳು ಇರುವುದು ಸತ್ಯ. ಬಣಜಿಗೆ ಕ್ಷೇಮಾಭಿವೃದ್ಧಿ ಸಂಘದಿಂದ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಕೂಡ ಕೆಲವೊಂದು ಗ್ರಾಮಗಳಲ್ಲಿ ಕೇಳಿಬಂದಿತ್ತು. . ಸರ್ಕಾರದ 2ಎ. ಮತ್ತು ಸಿಎ ಪ್ರಮಾಣ ಪತ್ರ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಸಂಘದ ಐಡಿ ಕಾರ್ಡ್ ಅವಶ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಿ ಅನುಕೂಲತೆಯನ್ನು ಪಡೆದುಕೊಳ್ಳಿ, ಸಾಮಾನ್ಯ ಸದಸ್ಯತ್ವ 500, ಪೋಷಕ, 10 ಸಾವಿರ ಮಹಾಪೋಷಕ, 25 ಸಾವಿರ ರೂ. ವಿಶ್ವಾಸ ಫೀ ಇದ್ದು, ಇದರಲ್ಲಿ ಯಾವುದಾದರೂ ಒಂದು ಪಡೆದುಕೊಳ್ಳಬೇಕು ಎಂದರು.

ಚನ್ನಪ್ಪಗೌಡ ಪಾಟೀಲ, ಚಿನ್ನಪ್ಪ ಹೊನವಾಡ, ರಾಜು ಸಂಗಣ್ಣ ಚಿನಿವಾಲರ, ಈರಣ್ಣ ಬಳೂಟಗಿ, ಶಿವಪುತ್ರಪ್ಪ ಹೊನವಾಡ, ಬಸವರಾಜ ಕೆಂದೂರ, ಬಿ.ಎಸ್. ಅಂಗಡಿ,ಅಮರಾವತಿ, ಪರಪ್ಪ ಅವಳಸರ, ನಾಗಪ್ಪ ಸೀಮಿಕೇರಿ ಉಪಸ್ಥಿತರಿದ್ದರು

       ಬಣಜಿಗ ಸಮಾಜದ ನಾನೇ ಅಧ್ಯಕ್ಷನೆಂದು ಹೇಳಿಕೊಂಡು ಸಮಾಜದ ಜನರಲ್ಲಿ ತಪ್ಪು ಸಂದೇಶ ನೀಡುತ್ತಾ ತಿರುಗುತ್ತಿದ್ದಾರೆ. ಅವರು ಹೇಳಿದ ಸ್ಥಳಕ್ಕೆ ನಾವು ಹೋಗಿ ಅವರಂತೆ ನಾವು ಸಮಾಜಕ್ಕೆ ತಪ್ಪು ಸಂದೇಶ ಎಲ್ಲೂ ನೀಡಿಲ್ಲ. ನಾವು 2022 ಡಿಸೆಂಬರನಲ್ಲಿ ತಾಲೂಕಿನ ಸಮಾಜದ ಮುಖಂಡರ ಸಭೆ ಕರೆದು ಸಭೆಯಲ್ಲಿ ಸರ್ವಾನುಮತದಿಂದ ಬಸವರಾಜ ಬಡ್ಡಿ ಅಧ್ಯಕ್ಷರನ್ನಾಗಿ, ಅರುಣೋದಯ ಮುದ್ದಿ ಪ್ರಧಾನ ಕಾರ್ಯದರ್ಶಿಯನ್ನಾಗಿ, ಚೆನ್ನಪ್ಪ ಹೊನವಾಡ ಖಜಾಂಚಿಯಾಗಿ ಸಮಾಜದವರೇ ಆಯ್ಕೆ ಮಾಡಿದ್ದಾರೆ. ನಾವು ಸ್ವಯಂ ಘೋಷಿಸ ಅಧ್ಯಕ್ಷರಾಗಿಲ್ಲ ತಾಲೂಕಿನ ಸಭೆ ಕರೆದೇ ಆಯ್ಕೆ ಮಾಡಿ ಇವರಿಗೆ ಅಧಿಕಾರ ಕೊಟ್ಟಿದ್ದೇವೆ. ಇನ್ನು 2027ರವರೆಗೆ ಅವರ ಅವಧಿ ಇದೆ. ತಾಲೂಕಿನ ಎಲ್ಲ ಸಮಾಜ ಬಾಂಧವರಿಗೆ ಯಾರು ಸ್ವಯಂಘೋಷಿತ ಅಧ್ಯಕ್ಷರು ಅಂತ ಗೊತ್ತಾಗಿದೆ.

– ಬಣಜಿಗ ಸಮಾಜ ಮುಖಂಡರು ಹುನಗುಂದ

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group