ಬೈಲಹೊಂಗಲ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯ ಭರದಿಂದ ಸಾಗಿದ್ದು, ಜಿಲ್ಲೆಯಲ್ಲೇ ಹೆಚ್ಚು ಸದಸ್ಯತ್ವ ಆಗುವ ನಿರೀಕ್ಷೆ ಇದೆ ಎಂದು ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಭರವಸೆ ವ್ಯಕ್ತಪಡಿಸಿದರು.
ಪಟ್ಟಣದ ವಿಜಯ ಸೋಶಿಯಲ್ ಕ್ಲಬ್ ನಲ್ಲಿ ಸೋಮವಾರ ಜರುಗಿದ ಬೈಲಹೊಂಗಲ ಮತಕ್ಷೇತ್ರದ ಬೂತ್ ಮಟ್ಟದ ಬಿಜೆಪಿ ಪ್ರಮುಖರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಬಿಜೆಪಿ ಭದ್ರಕೋಟೆ ಯಾಗಿದ್ದ ಬೈಲಹೊಂಗಲ ಮತಕ್ಷೇತ್ರವನ್ನು ಪುನಃ ಪಡೆದುಕೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, “ದೇಶದಲ್ಲಿ ಬಿಜೆಪಿ ಜನಪರವಾಗಿದೆ. ಬೈಲಹೊಂಗಲ ನಾಡಿನಲ್ಲೂ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ಪಡೆದು ಅಭಿಯಾನ ಯಶಸ್ವಿಗೊಳಿಸಬೇಕು”, ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಗುರುಪಾದ ಕಳ್ಳಿ, ಎಫ್.ಎಸ್. ಸಿದ್ದನಗೌಡರ, ಪುರಸಭೆ ಸದಸ್ಯ ಶಿವಾನಂದ ಕೋಲಕಾರ, ಜಗದೀಶ ಜಂಬಗಿ, ವೀಣಾ ಪತ್ತಾರ, ಶ್ರೀದೇವಿ ದೇವಲಾಪುರ ,ಮುಖಂಡರಾದ ಸುನೀಲ ಮರಕುಂಬಿ,ದಾದಾಗೌಡ ಬಿರಾದಾರ, ಸಚೀನ ಕಡಿ,ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ವೇದಿಕೆಯಲ್ಲಿದ್ದರು. ಜಗದೀಶ ಬೂದಿಹಾಳ ಸ್ವಾಗತಿಸಿದರು. ಸಂತೋಷ ಹಡಪದ ನಿರೂಪಿಸಿದರು. ಮಂಜು ಜೋರಾಪೂರ ವಂದಿಸಿದರು.