spot_img
spot_img

ಆರೋಗ್ಯ ಇಲಾಖೆಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ – ನಾಗಪ್ಪ ಶೇಖರಗೋಳ

Must Read

- Advertisement -

ಮೂಡಲಗಿ: ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾದ್ಯವಾಗುವದು. ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಸರಕಾರವು ಆರೋಗ್ಯ ಇಲಾಖೆಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳ ಬೇಕು ಎಂದು ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.

ಅವರು ಪಟ್ಟಣದ ಮೇಲ್ದರ್ಜೆಗೆರಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಸೊನೋಗ್ರಾಫಿ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಾಧುನಿಕ ರೋಗ ಪರೀಶೋಧಕ ಯಂತ್ರದಿಂದಾಗಿ ಸ್ತ್ರೀಯರ ಪ್ರಸವ ಪೂರ್ವ ನಂತರದ ದಿನಗಳಲ್ಲಿ ಮಗುವಿನ ಚಲನ ವಲನಗಳನ್ನು ಪರೀಕ್ಷಿಸಲು, ಹೃದಯ ಸಂಬಂಧಿ ಖಾಯಿಲೆಗಳನ್ನು ಗುರುತಿಸಲು ಸಹಾಯಕವಾಗುವದು. ಸೊನೋಗ್ರಾಪಿ ಯಂತ್ರವು 9.15 ಲಕ್ಷ ರೂ. ಗಳಾಗಿದ್ದು ಮೂಡಲಗಿ ಹಾಗೂ ಸುತ್ತಮುತ್ತಲಿನ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಪ್ರಯತ್ನದಿಂದಾಗಿ ಹಲವಾರು ಇಲಾಖೆಗಳಿಗೆ ಸರಕಾರದಿಂದ ದೊರೆಯುವ ಯೋಜನೆಗಳನ್ನು ತರಲು ಅವಿರತ ಪ್ರಯತ್ನ ಮಾಡುತ್ತಾರೆ. ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ಸಿಗುವ ಸವಲತ್ತುಗಳು ಕ್ಷೇತ್ರದ ಜನತೆಗೆ ಸಿಗುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆರೋಗ್ಯದ ಕುರಿತಾಗಿ ಆಲಸ್ಯ ತೋರದೆ ವೈದ್ಯರ ಸೂಕ್ತ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳ ಬೇಕು ಎಂದು ನುಡಿದರು.

- Advertisement -

ಈ ಸಂದರ್ಭದಲ್ಲಿ ತಹಶೀಲ್ದಾರ ಡಿ.ಜಿ ಮಹಾತ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಜ್ಞ ವೈದ್ಯಾಧಿಕಾರಿ ಡಾ. ಆರ್ ಎಸ್ ಬೆನಚನಮರಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಎಮ್.ಎಸ್ ಕೊಪ್ಪದ, ಗೋಕಾಕ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಆಂಟಿನ್, ಡಾ. ಭಾರತಿ ಕೋಣಿ, ಸ್ತ್ರೀ ರೋಗ ತಜ್ಞ ಡಾ. ಬಿಲ್ಕೀಸ್ ಕಾಜಿ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ವಾಯ್. ಎಮ್ ಗುಜನಟ್ಟಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಎಚ್ ವಾಯ್ ಬಾಲದಂಡಿ, ಸಲಹಾ ಸಮಿತಿಯ ಆರ್.ಪಿ ಸೋನವಾಲಕರ, ಪುರಸಭೆ ಸದಸ್ಯರಾದ ಈರಣ್ಣಾ ಕೊಣ್ಣೂರ, ಗಫಾರ ಡಾಂಗೆ, ಮುಖಂಡರಾದ ಅನ್ವರ ನದಾಫ್, ಹಾಜಿಸಾಬ ಶೇಖ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group