ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಬದುಕಿನಲ್ಲಿ ಉನ್ನತಿಯನ್ನು ಕಾಣಬಹುದು – ಅಭಿನವ ನಾಗಲಿಂಗ ಮಹಾಸ್ವಾಮಿಗಳು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸವದತ್ತಿ: ಬದುಕಿನಲ್ಲಿ ನಮ್ಮ ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಉನ್ನತಿಯನ್ನು ಕಾಣಬಹುದು. ದುರಿತ ಕರ್ಮವನು ಮಾಡಬಾರದು.ಸತ್ಕರ್ಮದಿಂದ ಬದುಕನ್ನು ನಡೆಸಬೇಕು ಕೆಟ್ಟ ಕೆಲಸ ಮಾಡಿದರೆ ಪಾಪಕ್ಕೆ ಗುರಿಯಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ನಾನೇನು ಬಹಳ ಕೆಟ್ಟದ್ದನ್ನು ಮಾಡಿಲ್ಲ ಬೇರೆಯವರು ನನಗಿಂತ ಹೆಚ್ಚು ಕೆಟ್ಟದ್ದನ್ನು ಮಾಡಿರುವರು ಎಂದು ಭಾವಿಸಿದವರು ಸ್ವಲ್ಪವಾದರೂ ಕೆಟ್ಟ ಕರ್ಮ ಮಾಡಿದ್ದೇನೆಂದು ತಿಳಿದರೆ ಅಲ್ಪವೂ ಕೂಡ ಕೆಟ್ಟದ್ದೇ.ತಿಳಿಯದೇ ಮಾಡಿದ ಕೆಟ್ಟ ಕರ್ಮಕ್ಕೂ ಕೂಡ ಕೆಟ್ಟ ಫಲವುಂಟು. ಅದಕ್ಕಾಗಿ ದುರಿತ ಕರ್ಮವನ್ನೂ ಮಾಡದೇ ಸತ್ಕರ್ಮದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದರಿಂದ ಬದುಕು ಪಾವನಮಯವಾಗುವುದುಎಂದು ಚಿಕ್ಕುಂಬಿಯ ಶ್ರೋ.ಬ್ರಹ್ಮನಿಷ್ಟ.ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ನುಡಿದರು.

ಅವರು ಚಿಕ್ಕುಂಬಿಯ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದಲ್ಲಿ ಬುಧವಾರ ಜರುಗಿದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳವರ 140 ನೆಯ ಪುಣ್ಯಾರಾಧನೆಯ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ ದುರಿತವೆಚ್ಚನಿತನಾದರು ವಿಷಯ ಕುರಿತಂತೆ ಮಾತನಾಡಿದರು.

- Advertisement -

ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಗದಗ ಜಿಲ್ಲೆಯ ಬೆನಕನಕೊಪ್ಪದ ಶ್ರೀ ಗುರುದೇವ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಸಾನ್ನಿಧ್ಯವನ್ನು ಮಲ್ಲಾಪುರ(ಚುಳಕಿ) ಗಾಳೇಶ್ವರಮಠದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹನುಮನಹಳ್ಳಿ(ದಡೇರಕೊಪ್ಪ)ಶ್ರೀಶಿವಾನಂದ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಬಸವ ಮಹಾಸ್ವಾಮಿಗಳು, ಅಬ್ಬೀಗೇರಿಯ ಶ್ರೀಯಲ್ಲಾಲಿಂಗೇಶ್ವರಮಠದ ಬಸವರಾಜ ಮಹಾಸ್ವಾಮಿಗಳು, ಹಾರೋಗೊಪ್ಪದ ಶ್ರೀ ಚನ್ನವೃಷಬೇಂದ್ರ, ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ, ಮೊರಬ ಶ್ರೀ ಸಿದ್ದಾರೂಢ ಮಠದ ಮಾತೋಶ್ರೀ ಬ್ರಹ್ಮಗಾಯತ್ರಿದೇವಿ, ಅಥರ್ಗಾದ ಅಕ್ಕಮಹಾದೇವಿ ಮಠದ ಮಾತೋಶ್ರೀ ವಚನಶ್ರೀ, ಅತಿಥಿಗಳಾಗಿ ನೇರಲಗಿಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹಿರೇಮಠ, ಬಾವಿಹಾಳದ ಶ್ರೀ ಚನ್ನಪ್ಪ ಶರಣರು ಉಪಸ್ಥಿತರಿದ್ದರು.

ಶರೀರದಲ್ಲಿ ಕಾಮಕ್ರೋಧಗಳ ಮಲೀನತೆ ತೊಡೆಯಬೇಕು. ಮನಸ್ಸು ಪರಿಶುದ್ಧವಾದಾಗ ಭಗವಂತನ ಧ್ಯಾನ ಸ್ಮರಣೆಗೆ ಅವಕಾಶ ದೊರೆಯುತ್ತದೆ. ನಮ್ಮ ಪೂರ್ವಜನ್ಮದ ಪ್ರಾರಬ್ಧ ಕರ್ಮಗಳನುಸಾರ ಬದುಕಿನಲ್ಲಿ ಘಟನೆಗಳು ಜರಗುತ್ತವೆ. ಅಹಂಕಾರ ಮತ್ತು ಬೋಗಲಾಲಸೆಯ ದುರಾಲೋಚನೆಯಿಂದ ಅಧಃಪತನವನ್ನು ಹೊಂದುತ್ತೇವೆ. ಗುರುವಿನ ಸಮನಾಗಿ ಶಿಷ್ಯರಾದವರು ಯಾವತ್ತೂ ಕುಳಿತುಕೊಳ್ಳಬಾರದು.ಎಳ್ಳಷ್ಟೂ ದುರಿತ ಕರ್ಮಗಳನ್ನು ಮಾಡದೇ ಸತ್ಕರ್ಮವನ್ನು ಮಾಡುವ ಮೂಲಕ ನಮ್ಮ ದಿನನಿತ್ಯದ ಬದುಕನ್ನು ಕಳೆಯಬೇಕು.ಇರುವಷ್ಟು ದಿನ ದಾನಧರ್ಮ ಉತ್ತಮ ಸಂಸ್ಕಾರ ಮತ್ತು ನಮ್ಮ ಸಂಸ್ಕೃತಿ ಪರಂಪರೆಯನ್ನು ಆರಾಧಿಸುತ್ತ ಬದುಕನ್ನು ನಡೆಸಬೇಕು ಎಂಬ ಸಂಗತಿಗಳನ್ನು ಎಲ್ಲ ಪರಮಪೂಜ್ಯರು ಈ ಸಂದರ್ಭದಲ್ಲಿ ದೃಷ್ಟಾಂತಗಳ ರೂಪದಲ್ಲಿ ದುರಿತವೆಚ್ಚನಿತನಾದರು ಎಂಬ ವಿಷಯ ಕುರಿತಂತೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರಿಗೆ ಗುರುರಕ್ಷೆ ನೀಡಲಾಯಿತು. ಗುರುರಕ್ಷೆ ಸ್ವೀಕರಿಸಿ ಮಾತನಾಡಿದ ವೈ.ಬಿ.ಕಡಕೋಳ, ನಾವು ನಮ್ಮ ದೈನಂದಿನ ಬದುಕಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು. ನಾಗಲಿಂಗ ಸ್ವಾಮಿಯವರ ಚರಿತ್ರೆ ಅವರು ಪಾದವಿಟ್ಟ ಈ ನೆಲ ಪವಿತ್ರವಾದುದು.ಪ್ರತಿ ವರ್ಷವೂ ಪರಮಪೂಜ್ಯ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಚಿಕ್ಕುಂಬಿಯಲ್ಲಿ ಅಜಾತ ನಾಗಲಿಂಗ ಮಹಾಸ್ವಾಮಿಗಳವರ ಪುಣ್ಯಾರಾಧನೆಯನ್ನು ನಡೆಸುತ್ತ ನಾಡಿನ ವಿವಿಧ ರಂಗಗಳ ಸಾಧಕರನ್ನು ಗುರುತಿಸಿ ಅವರಿಗೆ ಗುರುರಕ್ಷೆ ನೀಡುವ ಮೂಲಕ ನಮಗೂ ತಮ್ಮ ಆಶೀರ್ವಾದವನ್ನು ಈ ದಿನ ಕರುಣಿಸಿರುವರು.ಪೂಜ್ಯರ ಈ ಸತ್ಕರ್ಮ ಕಾರ್ಯ ನಿಜಕ್ಕೂ ಅಭಿನಂದನಾರ್ಹಎಂದು ಸನ್ಮಾನಿತರ ಪರವಾಗಿ ಮಾತನಾಡಿದರು.

ಬಳ್ಳೂರಿನ ಕುಮಾರಿ ಐಶ್ವರ್ಯ ಈ ಸಂದರ್ಭದಲ್ಲಿ ಭಕ್ತಿ ಗೀತೆಯನ್ನು ಹಾಡಿದಳು. ನಂತರ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀಮದ್ ಅಭಿನವ ನಾಗಲಿಂಗಮಹಾಸ್ವಾಮಿಗಳ ಕಿರೀಟ ಪೂಜೆ ಮತ್ತು ಮಾದಾರ (ಮಾದಲಿ) ಪೂಜೆ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಗೀತಸೇವೆಯನ್ನು ನೀಡುತ್ತಿರುವ ಎಂ.ಎಂ.ಬಡಿಗೇರ ಸಂಗೀತ ಕಲಾವಿದರು ಸವದತ್ತಿ ಇವರಿಂದ ಪ್ರಾರ್ಥನೆ ಜರುಗಿತು. ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕ ಸಿ.ವ್ಹಿ.ಬಾರ್ಕಿಯವರು ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಿಕ್ಷಕ ಎಂ.ಪಿ.ಪಾಟೀಲ ನಿರ್ವಹಿಸಿದರು. ಕೊನೆಗೆ ಮಹಾಮಂಗಲ ಜರುಗುವ ಮೂಲಕ ಪ್ರಸಾದವಿನಿಯೋಗದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ವರದಿ: ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!