ಸಿಂದಗಿ: 2018ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಸಿಂದಗಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ದಯಪಾಲಿಸಿದ್ದು ಅವುಗಳೇ ಇಲ್ಲಿಯವರೆಗೆ ಜಾರಿಯಲ್ಲಿವೆ ಈ ಜೆಡಿಎಸ್ ಸಿದ್ದಾಂತವನ್ನು ಮೆಚ್ಚಿ ದಿ.ಶಿವಾನಂದ ಪಾಟೀಲರು ಈ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ತಮ್ಮ ಜೀವನದ ಹಂಗು ತೊರೆದು ಕೆಲಸ ಮಾಡಿದ್ದಾರೆ ಆ ಕೆಲಸಗಳೆ ನನ್ನ ಆಯ್ಕೆಗೆ ಶ್ರೀರಕ್ಷೆಯಾಗಲಿವೆ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮಲಘಾಣ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿ, ಶಿವಾನಂದ ಪಾಟೀಲ ಕನಸನ್ನು ನನಸು ಮಾಡಲು ಈ ಬಾರಿ ನನಗೆ ಮತನೀಡಿ, ಪಕ್ಷ ಅಧಿಕಾರಕ್ಕೆ ಬಂದರೆ ಮಾಜಿ ಸಿಎಂ ಕುಮಾರಸ್ವಾಮಿಯವರು ದತ್ತು ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ವಕ್ತಾರ ಇಮಾಮ್‍ಸಾಬ ನಧಾಫ್, ಶೈಲಜಾ ಸ್ಥಾವರಮಠ ಮಾತನಾಡಿ, ಇಂದೊಮ್ಮೆ ದಿನಗಳಲ್ಲಿ ಸಿಂದಗಿ ಪಟ್ಟಣಕ್ಕೆ ಹೆಣ್ಣು ಕೊಡಲು ಹಿಂಜರಿಯುವ ಕಾಲದಲ್ಲಿ ಈ ಭಾಗದಲ್ಲಿ ಜಲಕ್ರಾಂತಿಯನ್ನೆ ಹರಿಸಿ ಆ ಕಳಂಕದಿಂದ ದೂರು ಮಾಡಿದ ಶ್ರೇಯಸ್ಸು ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಸಲ್ಲುತ್ತದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಬಂದಾಗೊಮ್ಮೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಸಾಮಾನ್ಯ ಜನರಿಗೂ ಸೌಲಭ್ಯಗಳು ಮುಟ್ಟುವಂತೆ ಮಾಡಿದ್ದಾರೆ. ಕಳೆದ ಸಮ್ಮಿಶ್ರ ಸರಕಾರದಲ್ಲಿ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ನಮ್ಮ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಮತ್ತೆ ಇವರ ಕೈಯಲ್ಲಿ ಸಂಪೂರ್ಣ ಅಧಿಕಾರ ಕೊಟ್ಟರೇ ರೈತರ ಕಷ್ಟಗಳು ದೂರವಾಗಲಿವೆ. ಪಂಚರತ್ನ ಯೋಜನೆಗಳು ಜಾರಿಗೆ ಬರಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲಮೇಲ ತಾಲೂಕು ಅಧ್ಯಕ್ಷ ಎಮ್.ಎನ್.ಉಸ್ತಾದ, ಮಹಾಂತೇಶ ಪರಗೊಂಡ, ಗುಂಡುಗೌಡ ಪಾಟೀಲ, ಎಸ್.ಜಿ.ಹಿರೇಮಠ, ಭೀಮನಗೌಡ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.