ಮೂಡಲಗಿ:- ಜೀವವಿಮೆ ಹಣಕ್ಕಾಗಿ ಅಣ್ಣನ ಕೊಲೆ ಮಾಡಿದ ತಮ್ಮ. ರೂ. 50 ಲಕ್ಷ ಜೀವವಿಮೆ ಹಣಕ್ಕಾಗಿ ಅಣ್ಣನಾದ ಹನುಮಂತ ಗೋಪಾಲ ತಳವಾರ (35) ಎಂಬುವವನನ್ನು, ತಮ್ಮನಾದ ಬಸವರಾಜ ತಳವಾರ ತನ್ನ ಸಹಚರರಾದ ಬಾಪು ಶೇಖ, ಈರಪ್ಪ ಹಡಿಗಿನಾಳ ಹಾಗೂ ಸಚಿನ ಕಂಟೆನ್ನವರ ಕೊಲೆ ಮಾಡಿದ್ದಾರೆಂದು ಘಟಪ್ರಭಾ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿರುವ ಘಟನೆ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಜರುಗಿದೆ.
ನವೆಂಬರ್,07ರಂದು ಕಲ್ಲೋಳಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಮೊದಲು ಸಹಜ ಸಾವು ಎಂದು ತಿಳಿದಿದ್ದರು, ಇದು ಸಹಜ ಸಾವು ಅಲ್ಲ ಎಂದು ವೈದ್ಯರು ಹೇಳಿದಾಗ ತನಿಖೆ ನಡೆಸಿದಾಗ ಕೊಲೆ ಬಯಲಿಗೆ ಬಂತು.
ತಮ್ಮ ಬಸವರಾಜ ರೂ. 50 ಲಕ್ಷ ಮೊತ್ತದ ಜೀವವಿಮೆ ಪಾಲಿಸಿಯನ್ನು ಒಂದು ವರ್ಷದ ಹಿಂದೆ ಅಣ್ಣನಾದ ಹನುಮಂತ ಹೆಸರಿನಲ್ಲಿ ಮಾಡಿದ್ದನು. ಆ ಹಣಕ್ಕಾಗಿ ಸಹಚರರೊಂದಿಗೆ ಸೇರಿ ಹನುಮಂತನಿಗೆ ಮದ್ಯ ಕುಡಿಸಿ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಸುಳಿವು ಸಿಕ್ಕ ಕೂಡಲೇ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಅವರ ಮೊಬೈಲ್ ಆದರಿಸಿ ಬಂಧಿಸಿದ್ದಾರೆ.