ಬೀದರ – ಕುಡಿದು ಪತ್ನಿ ಜೊತೆ ಜಗಳ ಮಾಡುತ್ತಿದ್ದ ಎಂದು ಪತ್ನಿ ಕುಟುಂಬಸ್ಥರು ವ್ಯಕ್ತಿಗೆ ಕಿರುಕುಳ ನೀಡಿ ಕಣ್ಣಿಗೆ ಕೆಮಿಕಲ್ ಹಾಕಿದ್ದರಿಂದ ವ್ಯಕ್ತಿಯು ಕಣ್ಣೇ ಕಳೆದುಕೊಂಡ ಘಟನೆ ವರದಿಯಾಗಿದೆ.
ಭಾಲ್ಕಿ ತಾಲೂಕಿನ ನಿಟ್ಟೂರು(ಬಿ) ಗ್ರಾಮದ ಸೋಪಾನ ಮೇತ್ರೆ ಎಂಬ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಕಣ್ಣು ಕಳೆದುಕೊಳ್ಳುವಂತೆ ಮಾಡಲಾಗಿದೆ.
ಎಷ್ಟು ಹೇಳಿದರೂ ಕೇಳದ ಸೋಪಾನನಿಗೆ ಬುದ್ದಿ ಕಲಿಸಿದ ಪತ್ನಿ ಹಾಗೂ ಕುಟುಂಬಸ್ಥರು 8 ತಿಂಗಳ ಕಾಲ ಆತನನ್ನು ಹೈದ್ರಾಬಾದ್‌ನ ರೂಮ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆಂದು ಪತ್ನಿ ಕುಟುಂಬಸ್ಥರ ವಿರುದ್ದ ಸೋಪಾನ್ ಆರೋಪ ಮಾಡಿದ್ದು ಕಣ್ಣಿಗೆ ಕೆಮಿಕಲ್ ಹಾಕಿ ಹಲ್ಲೆ ಮಾಡಿದ್ದಾರೆ. ವ್ಯಕ್ತಿ ಕಣ್ಣನ್ನೇ ಕಳೆದುಕೊಂಡಿದ್ದಾನೆನ್ನಲಾಗಿದೆ.ನಿಟ್ಟೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ
ಪತ್ನಿ ಹಾಗು ಪತ್ನಿ ಕುಟುಂಬಸ್ಥರ ವಿರುದ್ದ ಪ್ರಕರಣ ದಾಖಲಿಸಲು ಮುಂದಾದ ಸೋಪಾನ್ ಕುಟುಂಬಸ್ಥರು.
ವರದಿ : ನಂದಕುಮಾರ ಕರಂಜೆ, ಬೀದರ

