spot_img
spot_img

ಗುರ್ಲಾಪೂರದಲ್ಲಿ ಮಂಗಳ ಗೌರಿ ಪೂಜೆ

Must Read

spot_img

ಗುರ್ಲಾಪೂರ : ಸ್ಥಳೀಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಭಜನಾ ಕಾರ್ಯಕ್ರಮ ಹಾಗೂ ಪ್ರವಚನ ಕಾರ್ಯಕ್ರಮದ ಪ್ರಯುಕ್ತವಾಗಿ ಮಂಗಳ ಗೌರಿ ಪೂಜಾ ಸಮಾರಂಭವು ಇಟನಾಳದ ಮೈಲಾರಲಿಂಗೇಶ್ವರ ದೇವಸ್ಥಾನದ ಶ್ರೀ ಸಿದ್ದೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು. ಆರಂಭದಲ್ಲಿ ಗಜಾನನನಿಗೆ ಹಾಗು ಮಂಗಳಗೌರಿಗೆ ವಿಷೇಷ ಪೂಜೆ ಮಾಡಿ ಮಾತನಾಡುತ್ತಾ, ಮಹಾ ಮಂಗಳ ಗೌರಿ ವ್ರತದ ಮಹತ್ವ ಹಾಗು ಆ ವ್ರತ ಮಾಡುವದರಿಂದ ಮನೆಗಳಲ್ಲಿ ಯಾವ ರೀತಿ ಅವಿನಾಭಾವ ಸಂಬಂಧವಿರುತ್ತದೆ, ಅತ್ತೆ ಸೂಸೆ ತಾಯಿ ಮಗಳ ಹಾಗು ತಾಯಿ ತನ್ನ ಕುಂಕುಮ ಸೌಭಾಗ್ಯ ಸ್ಥಿರವಾಗಿ ಇರುವಂತೆ ಕುಟುಂಬದ ಸ್ನೇಹದ ಸಂಬಂಧ ಗಟ್ಟಿಯಾಗಿ ನಿಲ್ಲುವಂತೆ ತಾಯಿ ಮಂಗಳ ಗೌರಿ ತಮ್ಮಗೆಲ್ಲರಿಗು ಆರ್ಶಿವಾದ ಕರುಣಿಸಲಿ ಎಂದರು.

ಮಹಾ ಗೌರಿಗೆ ಪ್ರತಿ ಹೆಣ್ಣು ಮಕ್ಕಳು ಮನೆಯಿಂದ ತಂದಿರುವ ಅರಿಷಣ ಮತ್ತು ಕುಂಕುಮವನ್ನು ತಾಯಿಯ ಹಣೆಗೆ ಹಚ್ಚಿ ತಾವು ಹಚ್ಚಿಕೊಂಡು ನೂರು ವರ್ಷ ನಮ್ಮ ಮುತೈದೆತನವಿರುವಂತೆ ತಾಯಿಯಲ್ಲಿ ಬೇಡಿಕೊಂಡರು.ನಂತರ ಮುತೈದೆಯರು ಬಂದ ಎಲ್ಲ ಹೆಣ್ಣು ಮಕ್ಕಳಿಗೆ ಉಡಿತುಂಬಿ ಕೂಂಡು ಗೌರಿ ಪೂಜೆಯನ್ನು ಆಚರಿಸಿ ಪ್ರಸಾದವನ್ನು ಪಡೆದು ಮಹಾಸ್ವಾಮಿಗಳ ಆರ್ಶಿವಾದ ಪಡೆದುಕೊಂಡರು ಪುಟ್ಟಮಕ್ಕಳು ಗ್ರಾಮದ ಗುರು-ಹಿರಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!