ಕನ್ನಡ ಮನಸುಗಳಿಗೆ ಮಂಗಲಾ ಮೆಟಗುಡ್ಡ ಮನವಿ ; ಸಾಹಿತ್ಯ ಸೇವೆಗೆ ಅವಕಾಶ ಕೊಡಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸಹೃದಯ ಕನ್ನಡಿಗರೇ, 

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಿಗರ ಪ್ರಾತಿನಿಧಿಕ ಹಾಗೂ ಮಾತೃ ಸಂಸ್ಥೆ ಇದಕ್ಕೆ 105 ವಸಂತಗಳ ಇತಿಹಾಸ ಇದೆ. ಇದು ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ, ಉದ್ಯೋಗ, ಗಡಿ, ಜಲ ಸಮಸ್ಯೆ ಕುರಿತಾಗಿ ನಿರಂತರ ದನಿ ಎತ್ತುತ್ತ ಬಂದಿದೆ. ನಮ್ಮ ನಾಡಿನ ಶ್ರೀಮಂತಿಕೆಯ ಕುರುಹು ಆಗಿರುವ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುತ್ತಾ ಬಂದಿದೆ.

ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಅಧ್ಯಕ್ಷೆಯಾಗಿ, ಸಾಹಿತ್ಯ ಪರಿಷತ್ತಿನ ಸಕಲ ಕಾರ್ಯಯೋಜನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಕಾರ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮೆಲ್ಲರ ಕೃಪಾಶೀರ್ವಾದದಿಂದ ಯಶಸ್ವಿಯಾಗಿ ನಿರ್ವಹಿಸಿದ್ದೇನೆ.

- Advertisement -

ಸಾಹಿತ್ಯ ಪರಿಷತ್ತಿನ ಸಮರ್ಥ ನಾಯಕತ್ವವನ್ನು ಹೆಗಲಿಗೇರಿಸಿಕೊಂಡು ಅಖಂಡ ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ ಸುಮಾರು 44 ತಾಲೂಕಾ ಸಮ್ಮೇಳನ, 4 ಜಿಲ್ಲಾ ಸಮ್ಮೇಳನ ಯಶಸ್ವಿ ರೀತಿಯಲ್ಲಿ ಜರುಗಿ ಅಪಾರ ಜನ ಮನ್ನಣೆಗೆ ಸಾಕ್ಷಿಯಾಗಿದ್ದು, ಎಲ್ಲ ಕನ್ನಡ ಅಭಿಮಾನಿಗಳ, ಸಾಹಿತ್ಯಾಸಕ್ತರ, ಹಿರಿಯ ಸಾಹಿತಿಗಳ ಜಿಲ್ಲಾ ಹಾಗೂ ತಾಲೂಕಾ ಅಧ್ಯಕ್ಷ, ಪದಾಧಿಕಾರಿಗಳ ನಿರಂತರ ಸಂಪರ್ಕ ಮಾರ್ಗದರ್ಶನವೇ ಕಾರಣವಾಗಿದೆ ಎಂಬುವುದು ಸತ್ಯ.

ಹಿರಿಯ, ಕಿರಿಯ, ಮಹಿಳಾ ಸಾಹಿತಿಗಳ, ಕ.ಸಾ.ಪ. ವಿವಿಧ ತಾಲೂಕಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ, ಜಿಲ್ಲಾ ಘಟಕದ ಪದಾಧಿಕಾರಿಗಳ, ಚಿಂತಕರ, ಬರಹಗಾರರ, ಸಂಘ ಸಂಸ್ಥೆಗಳ ನಾಡಿನ ಹರ-ಗುರು ಚರಮೂರ್ತಿಗಳ ಒತ್ತಾಯ ಹಾಗೂ ಅಭಿಲಾಷೆಯಂತೆ ನಾನು ಮತ್ತೊಮ್ಮೆ ಜಿಲ್ಲಾ ಅಧ್ಯಕ್ಷೆ ಸ್ಥಾನಕ್ಕೆ ಸೇವಾಕಾಂಕ್ಷೆಯಾಗಿ ತಮ್ಮೆಲ್ಲರ ಆಶೀರ್ವಾದ ಬಯಸಿ ಸ್ಪರ್ಧೆಗೆ ನಿಂತಿರುವೆ.

ನಾಡು-ನುಡಿಯ ಸೇವೆಯೇ ನನ್ನ ಪರಮ ಗುರಿ: ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಿದ್ದರೂ, ಗಡಿ, ಜಲ, ಭಾಷೆ ವಿವಾದಗಳಿಂದ ಬೆಳಗಾವಿ ನೆಲ ಹೊರತಾಗಿಲ್ಲ. ಇಂತಹ ಸಂದಿಗ್ಧತೆಯನ್ನು ನಾಡು ನಮ್ಮ ಹೆಮ್ಮೆಯ ಬೆಳಗಾವಿ ಜಿಲ್ಲೆ, ಈ ಜಿಲ್ಲೆಯಲ್ಲಿ ಅನೇಕ ಹಿರಿಯ ಸಾಹಿತಿಗಳು, ವಿದ್ವಾಂಸರು, ಕಾದಂಬರಿಕಾರರು, ಕವಿಗಳು, ಕವಿಯತ್ರಿಯರು, ಸಂಗೀತ ವಿದ್ವಾಂಸರು, ಕಲೆ ನೈಪುಣ್ಯ ಹೊಂದಿದ ಮಹನೀಯರು ತಮ್ಮ ಮೊಣಚಾದ ಲೇಖನ ಸಾಹಿತ್ಯ ಕವಿತೆಗಳ ಮೂಲಕ ಸಕ್ಕರೆ ಜಿಲ್ಲೆ ಬೆಳಗಾವಿಯನ್ನು ಸಮೃದ್ಧಗೊಳಿಸಿದ್ದಾರೆ.

ಅವರೆಲ್ಲರ ದೂರದೃಷ್ಟಿಯ ಫಲ, ನೆಲ-ಜಲ, ಗಡಿ ರಕ್ಷಣೆಯ ಹೊಣೆಗಾರಿಕೆಯು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿದ್ದು ಇದಕ್ಕೆ ಸ್ವಲ್ಪವೂ ಕಳಂಕ ಬರದ ರೀತಿಯಲ್ಲಿ ನಾನು ಮಹಿಳೆಯಾಗಿ ಕಳೆದ ಐದು ವರ್ಷದ ಸಾಹಿತ್ಯ ಸೇವೆ ನನಗೆ ಹಲವಾರು ಸಿಹಿ-ಕಹಿ ಅನುಭವ ನೀಡಿದ್ದಂತು ನಿಜ.

ಇವೆಲ್ಲವನ್ನು ಮೆಚ್ಚಿ ಎಲ್ಲ ಸಂಘಟನೆಗಳನ್ನು ಹಾಗೂ ವಿದ್ವಾಂಸರನ್ನು ಹಿರಿಯ ಕಿರಿಯ ಸಾಹಿತಿ ಸಾಹಿತ್ಯಾಸಕ್ತರು, ಮಹಿಳಾ ಲೇಖಕಿ ಕವಿಯತ್ರಿಯರನ್ನು ಒಡಗೂಡಿಸಿಕೊಂಡು ಕನ್ನಡ ಭಾಷೆ ನಾಡು-ನುಡಿಯ ರಕ್ಷಣೆ ಅದರ ಜೊತೆಯಲ್ಲಿ ಅಭಿವೃದ್ಧಿ ಪಡಿಸುವ ಗುರುತರ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಲು ಸಿದ್ಧಳಾಗಿದ್ದು ತಮ್ಮೆಲ್ಲರ ಕೃಪೆ ಮಾರ್ಗದರ್ಶನ ನನಗೆ ಶ್ರೀರಕ್ಷೆಯಾಗಲಿದೆ ಎಂಬ ಮಹಾದಾಸೆ ಹೊಂದಿದವಳಾಗಿರುವೆನು.

ನನ್ನ ಮುಂದಿನ ಸವಾಲುಗಳು:

ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ತಮ್ಮೆಲ್ಲರ ಆಶೀರ್ವಾದದಿಂದ ಜಯಶಾಲಿಯಾಗಿ ಬರುವ ಭರವಸೆ ಹೊಂದಿದ್ದು, ಮುಂದಿನ 5 ವರ್ಷದ ಅವಧಿಯಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಗಳು.

  • ಹಿರಿಯ ಸಾಹಿತಿಗಳಿಗೆ ಗೌರವ ಸನ್ಮಾನ.
  • ಅಪೂರ್ಣಗೊಂಡಿರುವ “ತಾಲೂಕಾ ಕನ್ನಡ ಭವನ” ಪೂರ್ಣಗೊಳಿಸುವುದು.
  • ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವ ಸಾಹಿತಿಗಳಿಗೆ ಸಾಹಿತ್ಯಿಕ ಚಟುವಟಿಕೆ ಪ್ರೇರಣೆ ನೀಡುವುದು.
  • ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸುವುದು.
  • ಹಿರಿಯ ಸಾಹಿತಿ-ವಿದ್ವಾಂಸರ, ಕಾದಂಬರಿಕಾರರ ಕುರಿತು(ಡಾಕ್ಯುಮೆಂಟರಿ) ಜೀವನ ಚರಿತ್ರೆ ದಾಖಲಿಕರಣ ಮಾಡುವುದು.
  • ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ ಮಕ್ಕಳ ಮಹಿಳಾ ಗೋಷ್ಠಿಗಳನ್ನು ಏರ್ಪಡಿಸುವುದು.
  • ದತ್ತಿ ಉಪನ್ಯಾಸ, ಕಲಾಪ್ರದರ್ಶನ, ಜನಪದ ಮೇಳಗಳನ್ನು ಸಂಘಟಿಸುವುದು.
  • ಕೃಷಿ ಸಾಹಿತ್ಯ, ಕಾನೂನು ಸಾಹಿತ್ಯ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಘಟಕಗಳನ್ನು ಸ್ಥಾಪಿಸಿ ಕಾರ್ಯ ರೂಪಕ್ಕೆ ತರುವುದು.
  • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಆಯೋಜಿಸುವುದು.
  • ಇನ್ನೂ ಹಲವು ಹತ್ತು ಯೋಜನೆಗಳನ್ನು ತಮ್ಮ ಮಾರ್ಗದರ್ಶನದಂತೆ ಜಾರಿಗೆ ತರುವ ಮನಸ್ಸು ನನ್ನದಾಗಿದೆ.

ನನ್ನ ಪರಿಚಯ:

ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ತಂದೆ ರೇವಣಸಿದ್ದಯ್ಯ ಲಂಬಿ, ತಾಯಿ ಮೀನಾಕ್ಷಿ ಲಂಬಿ ಇವರ ಮಗಳಾಗಿ ಜನಿಸಿ, ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸೊಲ್ಲಾಪೂರದಲ್ಲಿ ಮುಗಿಸಿರುವೆ. ನನಗೆ ಒಬ್ಬ ಸಹೋದರ, ಇಬ್ಬರು ಸಹೋದರಿಯರಿಂದ ಕೂಡಿದ ಆಧ್ಯಾತ್ಮ ಸಂಪ್ರದಾಯದ ಸಿರಿತನ ಹಾಗೂ ಸಹಾಯಕ್ಕೆ ಹೆಸರಾದ ಕುಟುಂಬದಿಂದ ಬಂದಿರುವೆ.

ಬೈಲಹೊಂಗಲದ ಪ್ರಸಿದ್ಧ ಮೆಟಗುಡ್ಡ ಮನೆತನದ ಶ್ರೀಶೈಲ ಚನ್ನಪ್ಪ ಮೆಟಗುಡ್ಡ ಪ್ರತಿಷ್ಠಿತ ಕೆ.ಎಲ್.ಇ.ಸಂಸ್ಥೆಯ ನಿರ್ದೇಶಕರು ಇವರ ಪತ್ನಿಯಾಗಿ, ಸಾಮಾಜಿಕ, ಸಾಂಸ್ಕೃತಿಕ ಸೇವೆ ನನ್ನದು, ಮೂವರು ಮಕ್ಕಳು ವಿದ್ಯಾವಂತರು ಶ್ರೀ ವಿಜಯ ಶ್ರೀ ಮೆಟಗುಡ್ಡ ಬಿ.ಕಾಂ. ಪದವಿದರರು ಹಾಗೂ ಖ್ಯಾತ ಉದ್ಯಮಿ, ಎರಡನೇಯ ಮಗ ಶ್ರೀ ಜಯರಾಜ ಶ್ರೀ ಮೆಟಗುಡ್ಡ ಎಂ.ಸಿ.ಎ. ಪದವಿದರ ಉದ್ದಿಮೆದಾರರು, ಮಗಳು ಡಾ.ತನ್ಮಯಿ ಶ್ರೀ ಮೆಟಗುಡ್ಡ ಎಂ.ಡಿ. ಚಿಕ್ಕ ಮಕ್ಕಳ ತಜ್ಞರು, ಇವರೊಂದಿಗೆ ಬೈಲಹೊಂಗಲದಲ್ಲಿ ನೆಲೆಸಿ ಕನ್ನಡ ಸಾಹಿತ್ಯ ಲೋಕಕ್ಕೆ ನನ್ನದೇ ಆದ ಕೊಡುಗೆ ನೀಡುವ ಮೂಲಕ ಅನೇಕ ಅಸಹಾಯಿಕರ ಬದುಕಿಗೆ ಆಶ್ರಯ ನೀಡಿದ ಹೆಮ್ಮೆ ನನ್ನದಾಗಿದೆ.

ಸಾಹಿತ್ಯದ ಒಲುಮೆ:

ಓದಿನ ಹವ್ಯಾಸದಿಂದ ಬರವಣಿಗೆಗೆ ಹೊಂದಿಕೊಂಡು ಸಾಹಿತ್ಯಿಕ ಕೃಷಿ ಮಾಡುವ ಮೂಲಕ “ಪ್ರತಿಬಿಂಬ” ಕವನ ಸಂಕಲನ “ಶಿವಶರಣೆ ಕ್ರಾಂತಿಯೋಗಿಣಿ ಗಂಗಾಂಭಿಕಾ” ಸಂಶೋಧನಾತ್ಮಕ ಲೇಖನ “ಸ್ವಾದ ಮತ್ತು ಹಳೇ ಬೇರು ಹೊಸ ಚಿಗುರು” ಕಿರುಹೊತ್ತಿಗೆ ಮಕ್ಕಳ ಕಥಾ ಕಮ್ಮಟ ಕವನಗಳು, ಕ್ರಾಂತಿಯೋಗಿ ಬಸವಣ್ಣ, ರೂಪಿಣಿ ಸಂಪಾದಿತ ಕೃತಿಗಳಾಗಿವೆ. ಶಿಕ್ಷಣದಲ್ಲಿನ ಆಸಕ್ತಿ, ಗುಡಿಸಲು ಶಾಲೆ, ಅಂಗವಿಕಲ ಮಕ್ಕಳಿಗಾಗಿ ಗೃಹ ಆಧಾರಿತ ಶಿಕ್ಷಣ ಕೇಂದ್ರ ಸ್ಥಾಪಿಸಿ ಮಾಡಿದ ಸೇವೆ ಅನನ್ಯ.

ಕನ್ನಡ ಸಾಹಿತ್ಯ ಸೇವೆಗೆ ವಿಶೇಷ ಪರಂಪರೆ ಇದ್ದು ನಾನು ಕನ್ನಡಿಗಳು ಎನ್ನುವ ಹೆಮ್ಮೆ ನನ್ನದು. ಪಂಪ, ರನ್ನ, ಪೊನ್ನ ಜನ್ನರಿಂದ ಬಸವಾದಿ ಶರಣರ ಆಧ್ಯಾತ್ಮಿಕ ಹಿನ್ನಲೆಯ ವಚನ ಸಾಹಿತ್ಯ ನವೋದಯ ಪ್ರಗತಿಶೀಲ ಭಂಡಾಯ, ನವೋತ್ತರ ಹೀಗೆ ಸಾಹಿತ್ಯ ಬೆಳೆದು ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ನಮ್ಮದು ಇಂತಹ ನೆಲದಲ್ಲಿ ಹುಟ್ಟಿದ ನಾವುಗಳು ಕನ್ನಡಮ್ಮನ ಸೇವೆ ಮಾಡುವುದು ನಮ್ಮ ಧರ್ಮ.

ಇದರೊಂದಿಗೆ ಇಂತಹ ಮಹಾನ್ ಕಾರ್ಯದ ಚುಕ್ಕಾಣಿ ಹಿಡಿದು ಇನ್ನೂ ಹೆಚ್ಚಿನ ಕನ್ನಡದ ಸೇವೆ ಮಾಡುವ ಹೆಬ್ಬಯಕೆ ನನ್ನದು.
ತಮ್ಮೆಲ್ಲರ ಕೃಪೆ ಆಶೀರ್ವಾದ ಪ್ರೀತಿ ವಿಶ್ವಾಸವನ್ನಿಟ್ಟು ಕನ್ನಡಾಂಬೆಯ ಸೇವೆ ಗೈಯುವ ಅವಕಾಶವನ್ನು ಕಲ್ಪಿಸುವರೆಂಬ, ವಿಶ್ವಾಸದೊಂದಿಗೆ ತಮ್ಮ ಅಮೂಲ್ಯ ಮತ ನೀಡಿ ಜಯಶೀಲಗೊಳಿಸಲು ವಿನಮ್ರವಾಗಿ ಬೇಡಿಕೊಳ್ಳುವೆ.

ತಮ್ಮ ಸೇವಾಕಾಂಕ್ಷಿ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ
ಬೈಲಹೊಂಗಲ.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!