ಮಂಗಳಾ ಸುರೇಶ ಅಂಗಡಿಯವರ ಚುನಾವಣಾ ಪ್ರಚಾರಾರ್ಥ ಸಭೆ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸವದತ್ತಿ – “ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಮಹಿಳೆಯರ ಅಭಿವೃದ್ದಿಗೆ ಹತ್ತು ಹಲವಾರು ಯೋಜನೆಗಳನ್ನು ತಂದು ಅವುಗಳನ್ನು ಸಂಪೂರ್ಣವಾಗಿ ಗ್ರಾಮದ ಕಟ್ಟ ಕಡೆಯ ಜನರಿಗೂ ತಲುಪಿಸಿ ಬಡ ಜನರ ಸೇವೆ ಮಾಡುವ ಸರಕಾರ ಭಾರತೀಯ ಜನತಾ ಪಕ್ಷದ ಸರಕಾರ ಈಗ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಮಂಗಳಾ ಸುರೇಶ ಅಂಗಡಿಯವರಿಗೆ ಮತ ಹಾಕುವುದರ ಮೂಲಕ ಬೆಂಬಲಿಸಬೇಕಾಗಿದೆ. ದಿವಂಗತ ಸುರೇಶ ಅಂಗಡಿಯವರ ಕನಸನ್ನು ನನಸಾಗಿಸಬೇಕಾದರೆ ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿ ಮಂಗಳಾ ಸುರೇಶ ಅಂಗಡಿಯವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವುದೇ ನಮ್ಮೆಲ್ಲರ ಉದ್ದೇಶವಾಗಿದೆ”.ಎಂದು ಶಾಸಕ ಹಾಗೂ ಉಪ ಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು.

ಅವರು ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜನತಾಪಕ್ಷದ ಮಹಿಳಾ ಸಮಾವೇಶ ಮತ್ತು ಮಂಗಳಾ ಸುರೇಶ ಅಂಗಡಿಯವರ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಉದ್ಘಾಟಕರಾಗಿ ಜ್ಯೋತಿ ಬೆಳಗಿಸಿ ಮಾತನಾಡಿದರು.

- Advertisement -

“ದಿವಂಗತ ಸುರೇಶ ಅಂಗಡಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲಾ ದೇಶದ ಉದ್ದಗಲಕ್ಕೂ ತಮ್ಮ ಸೇವೆಯನ್ನು ಸಲ್ಲಿಸಿದವರು ರೈಲ್ವೇ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಂತಹ ಅನೇಕ ಕೆಲಸಗಳನ್ನು ಮಾಡಿದವರು ಅಂತಹ ಮಹಾನ ನಾಯಕರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಎಲ್ಲರೂ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು” ಎಂದರು.

ಅದೇ ರೀತಿಯಾಗಿ ಬಾಜಪ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಗೀತಾ ವಿವೇಕಾನಂದ ರವರು ಮಾತನಾಡಿ “ಪ್ರಧಾನಿ ಮೋದಿಯವರು ಹಾಗೂ ಬಾಜಪ ಸರಕಾರದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಕೊಟ್ಟು ಗೌರವಿಸುವ ಜೊತೆಗೆ ಹುಟ್ಟಿದ ಹೆಣ್ಣು ಮಗುವು ಯಾರಿಗೂ ಹೊರೆಯಾಗಬಾರದು ಎಂದು ಬೇಟಿ ಬಚಾವ ಬೇಟಿ ಪಡಾವೋನಂತಹ ಯೋಜನೆ ಬಹಳಷ್ಟು ಬಡ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.

ನಂತರ ರತ್ನಾ ಆನಂದ ಮಾಮನಿ ಮಾತನಾಡಿ “ಜಿಲ್ಲೆಯಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಕಮಲದ ಗುರ್ತಿಗೆ ಮತಹಾಕಿ ಮಹಿಳೆಯರಾದ ನಾವು ಮಹಿಳೆಗೆ ಉನ್ನತ ಸ್ಥಾನದಲ್ಲಿ ಹೋಗಿ ತಮ್ಮ ಅಮೋಘವಾದ ಸೇವೆಯನ್ನು ಮಾಡಲು ಬಂದ ಮಂಗಲಾ ಸುರೇಶ ಅಂಗಡಿಯವರನ್ನು ಅಮೂಲ್ಯವಾದ ಮತವನ್ನ ಕೊಟ್ಟು ಗೆಲ್ಲಿಸಬೇಕಾಗಿದೆ ಎಂದು ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಡಾಕ್ಟರ ನಯನಾ ಭಸ್ಮೇ ಪ್ರಾಸ್ಥಾವಿಕವಾಗಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಭಾರತೀಯ ಜನತಾ ಪಕ್ಷ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುವ ಜೊತೆಗೆ ಮಹಿಳಾ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಟ್ಟಿದ್ದು.ಈ ದಿಸೆಯಲ್ಲಿ ಮಹಿಳಾ ಮತದಾರರು ಭಾರತೀಯ ಜನತಾಪಕ್ಷ ಬೆಂಬಲಿಸುವ ಜೊತೆಗೆ ಮಂಗಲಾ ಅಂಗಡಿಯವರಿಗೆ ಮತ ನೀಡುವ ಮೂಲಕ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ವೇದಿಕೆ ಮೇಲೆ ಶಿಲ್ಪಾ ಶೆಟ್ಟರ. ಈರಣ್ಣಾ ಚಂದರಗಿ ಪ್ರೇಮಾ ಭಂಢಾರಿ ರೇಖಾ ಚಿನ್ನಾಕಟ್ಟಿ.ಶಿಲ್ಪಾ ಸುವರ್ಣ .ವಿದ್ಯಾರಾಣಿ ಸೊನ್ನದ. ಪುರಸಭೆ ಉಪಾದ್ಯಕ್ಷ ದೀಪಕ ಜಾನ್ವೇಕರ. ಸೇರಿದಂತೆ ಪುರಸಭೆ ಸದಸ್ಯರು ಉಪಸ್ಥಿತರಿದ್ದರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!