spot_img
spot_img

ಅಂಜುಮನ್ ಎ ಇಸ್ಲಾಮ್ ಸಂಸ್ಥೆಯಿಂದ ಅನೇಕ ಜನಪರ ಕಾರ್ಯಗಳು

Must Read

spot_img

ಮೂಡಲಗಿ: ಜನ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು ನಮ್ಮ ಅಂಜುಮನ್ ಕಮಿಟಿಯು ಜನಪರ ಸೇವೆಯಲ್ಲಿ ತೊಡಗಿ ಕಷ್ಟದಲ್ಲಿರುವ ಅನೇಕ ಬಡ ಕುಟುಂಗಳಿಗೆ ಮಾನವೀಯತೆ ದೃಷ್ಟಿಯಿಂದ ನೆರವು ನೀಡಿ ಅಳಿಲು ಸೇವೆ ಮಾಡುತ್ತಿದೆ ಎಂದು ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು.

ಅವರು ಅಂಜುಮನ್ ಕಮಿಟಿಯ ಕಚೇರಿಯಲ್ಲಿ ಕಮಿಟಿ ವತಿಯಿಂದ ಹಮ್ಮಿಕೊಂಡ ಸರ್ಕಾರದ ವಿವಿಧ ಸೌಲಭ್ಯಗಳ ಮಾಸಾಶನ, ಜಾತಿ ಆದಾಯ ಆದೇಶ ಪ್ರತಿಗಳ ವಿತರಣಾ ಕಾರ್ಯಕ್ರಮದಲ್ಲಿ ಹಲವಾರು ವೃದ್ಧರಿಗೆ, ಬಡವರಿಗೆ ಉಚಿತವಾಗಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ತಂಡದ ಯುವಕರು ಕೊರೋನಾ ಸಂದರ್ಭದಲ್ಲಿ ಕೊರೋನಾ ಸೋಂಕು ತಗುಲಿ ಮೃತಪಟ್ಟ ಅನೇಕ ಶವಗಳಿಗೆ ಶವ ಸಂಸ್ಕಾರ ಮಾಡುವುದರ ಜೊತೆಗೆ ಬಡ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಹಣಕಾಸಿನ ನೆರವು,ರಕ್ತ ದಾನ ಶಿಬಿರ, ಬಡ ರೋಗಿಗಳಿಗೆ ವೈದ್ಯಕೀಯ ಔಷಧೋಪಚಾರ, ಲಾಕ್ ಡೌನ ಸಂದರ್ಭದಲ್ಲಿ ನಿರ್ಗತಿಕರಿಗೆ ಅಹಾರ ಕಿಟ್ ಹಾಗೂ ಆರ್ಥಿಕ ಸಹಾಯ ಹಿಗೆ ಹತ್ತು ಹಲವಾರು ಕಾರ್ಯಗಳನ್ನು ಮಾಡಲಾಗಿದೆ.

ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತಿರುವುದಾಗಿ ಹೇಳಿ ಇದಕ್ಕೆಲ್ಲ ಎಲ್ಲರ ಸಹಕಾರದ ಅವಶ್ಯಕತೆ ಇದೆ ಎಂದರು.

ಕಮಿಟಿ ಸದಸ್ಯ ಲಾಲಸಾಬ ಸಿದ್ದಾಪೂರ, ಹಿರಿಯ ಪತ್ರಕರ್ತ ಬಿ ಪಿ ಬಂದಿ, ಗ್ರೇಡ್ 2 ತಹಸೀಲ್ದಾರ ಎಸ್ ಎ ಬಬಲಿ, ಮಾತನಾಡಿದರು.

ಈ ವೇಳೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಶಿಕ್ಷಣ ಸಾರಥಿ ಪ್ರಶಸ್ತಿ ಪುರುಸ್ಕೃತ ಸಮೀರ ದಬಾಡಿ ಹಾಗೂ ಗ್ರೇಡ್ 2 ತಹಸೀಲ್ದಾರ ಅವರನ್ನು ಕಮಿಟಿ ವತಿಯಿಂದ ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ ಎ ಎಸ್ ಬಾಗವಾನ, ಕಂದಾಯ ನಿರಿಕ್ಷಕ ಎಸ್ ಬಿ ಹೊಸಮನಿ, ಕಮಿಟಿಯ ಉಪಾಧ್ಯಕ್ಷ ಮೌಲಾಸಾಬ ಮೊಗಲ್, ಕಾರ್ಯದರ್ಶಿ ಶಕೀಲ ಬೇಪಾರಿ, ಖಜಾಂಚಿ ಅಕ್ಬರ ಪಾಶ್ಛಾಪೂರ, ಸಹ ಕಾರ್ಯದರ್ಶಿ ನೂರ ಪೀರಜಾದೆ ಸದಸ್ಯರಾದ ಇಸಾಕ ನದಾಫ್, ಲಾಲಸಾಬ ಸೈಯ್ಯದ, ಮುಬಾರಕ ನಿರ್ಲೇಕರ, ಗಜಬರ ಗೋಕಾಕ, ಸಾಹೇಬಲಾಲ ಗದ್ಯಾಳ, ಇಸ್ಮಾಯಿಲ ಇನಾಮದಾರ, ಅಶ್ಫಾಕ ಕಲಾರಕೊಪ್ಪ, ನನ್ನುಸಾಬ ಶೇಖ, ಹಾಗೂ ಅನೇಕ ಸದಸ್ಯರು ಮುಖಂಡರು ಇದ್ದರು.

ಶಿಕ್ಷಕ ಶಾಹನವಾಜ ದಬಾಡಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!