spot_img
spot_img

ನಡು ನೀರಿನಲ್ಲಿ ಮರಖಲ್ ಗ್ರಾಮ: ನೀರಲ್ಲಿ ಮುಳುಗಿದ ಕೇಂದ್ರದ ಸ್ವಚ್ಛ ಗ್ರಾಮ ಯೋಜನೆ

Must Read

spot_img

ಬೀದರ – ಕೇಂದ್ರ ಸರ್ಕಾರವು ಗ್ರಾಮ ಸ್ವಚ್ಚತಾ ಯೋಜನೆ ಅಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸ್ವಚ್ಛ, ಸುಂದರ, ಮಾದರಿ ಗ್ರಾಮಗಳ ಕನಸು ಕಂಡಿದ್ದು ಅದಕ್ಕೆ ತಕ್ಕ ಅನುದಾನವು ನೀಡುತ್ತಲಿದ್ದರೂ ನಮ್ಮ ದೇಶದ ಘನ ಪ್ರಧಾನಿ ನರೇಂದ್ರ ಮೋದಿಯವರ ಈ ಕನಸು ಮರಖಲ್ ಗ್ರಾಮದ ರಸ್ತೆಗಳ ಸ್ಥಿತಿ ನೋಡಿದ್ರೆ ನುಚ್ಚು ನೂರಾದಂತೆ ಎದ್ದು ಕಾಣುತ್ತಿದೆ.

ಬೀದರ ಜಿಲ್ಲೆಯಾದ್ಯಾಂತ ಸತತವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಕೆರೆಗಳಾಗಿ ಪರಿವರ್ತನೆ ಗೊಂಡು ಜನರ ಸುಗಮ ಓಡಾಟಕ್ಕೆ ಅಡ್ಡಿಯಾಗಿದೆ ಅಂತಹ ಭಾಗಗಳಲ್ಲಿ ಮರಖಲ್ ಗ್ರಾಮದ ವಾರ್ಡ್ ಸಂಖ್ಯೆ 3 ಕೂಡಾ ಒಂದು, ಇಲ್ಲಿನ ರಸ್ತೆ ದಾಟಲು ಅಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ಜೊತೆಗೆ ಡೆಂಗು, ಮಲೇರಿಯಾ ಗಳಂತಹ ಮಾರಕ ರೋಗಗಳ ಭಯದಲ್ಲಿ ಬದುಕುವಂತಾಗಿದೆ.

ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಮರಖಲ್ ಗ್ರಾಮದ ವ್ಯವಸ್ಥೆ ಬಗ್ಗೆ ಹೇಳಬೇಕೆಂದರೆ.. ಸ್ಥಳೀಯ ಶಾಸಕ ರಹೀಮ ಖಾನ್‌ ಅಕ್ಷರಶಃ ಕಣ್ಣು ಮುಚ್ಚಿದ್ದು ಇವರು ನಮ್ಮ ಶಾಸಕರು ಎಂದು ಹೇಳಲು ನಾಚಿಕೆ ಆಗುತ್ತದೆ ಎನ್ನುತ್ತಿದ್ದಾರೆ ಇಲ್ಲಿನ ಜನ. ಯಾಕೆಂದರೆ ಇಲ್ಲಿ ಕೇಂದ್ರ ಸರ್ಕಾರದ ಆಶಯದಂತೆ ಗ್ರಾಮಗಳು ಅಭಿವೃದ್ಧಿಗೊಳ್ಳಬೇಕು ಹಾಗೂ ಸ್ವಚ್ಚತೆಯಿಂದ ಕೂಡಿರಬೇಕು ಅನ್ನುವ ಕನಸು ಈಡೇರಿಸಲು ಜಿಲ್ಲಾ ಆಡಳಿತ 90 ಕಿಲೋ ಮೀಟರ ದೂರದಲ್ಲಿರುವ ಬಸವಕಲ್ಯಾಣ ಕೋಟೆ ಸ್ವಚ್ಛ ಮಾಡುತ್ತಾರೆ.. ಆದರೆ ಜಿಲ್ಲಾ ಆಡಳಿತದ ಕಣ್ಣಿಗೆ ಪಕ್ಕದ 6 ಕಿಲೋ ಮೀಟರ್ ಹತ್ತಿರವಿರುವ ಮರಖಲ್ ಗ್ರಾಮ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಇ ಹಿನ್ನೆಲೆಯಲ್ಲಿ ಒಬ್ಬ ಗ್ರಾಮ ಪಂಚಾಯತ ಸದಸ್ಯರನ್ನು ಪ್ರಶ್ನೆ ಮಾಡಿದರೆ ಅವರು ‌ಹೇಳುವುದೇನೆಂದರೆ,ಗ್ರಾಮ ಪಂಚಾಯತ ನಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ ಆಡಿದ್ದೇ ಆಟ, ಮಾಡಿದ್ದೇ ಕಾರೋಬಾರು ಎನ್ನುವಂತಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ರಾಮದ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇವರು ಗಮನಹರಿಸುತ್ತಿಲ್ಲ ಎನ್ನುತ್ತಾರೆ.

ಗ್ರಾಮದ ಒಂದು ವಾರ್ಡ್ ನಲ್ಲಿ ಎಲ್ಲಿ ನೋಡಿದರೂ ನೀರೇ ನೀರು. ಗ್ರಾಮಸ್ಥರು ಹೊರಗೆ ಬರಲು ಆಗದ ಪರಿಸ್ಥಿತಿ ಇದೆ. ಮಕ್ಕಳನ್ನು ಕೂಡ ಹೊರಗೆ ಕಳಿಸಲು ಭಯಪಡುವಂತಾಗಿದೆ. ನೀರಿನಲ್ಲಿ ಹಾವು ಮೊಸಳೆಗಳು ಇರಬಹುದೆಂಬ ಭೀತಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಂದರೆ 22 ಶತಮಾನದಲ್ಲಿ ಮರಖಲ್ ಗ್ರಾಮದಲ್ಲಿ ನಡೆದಾಡಲು ಜನರು ಕಷ್ಟ ಪಡುವುದನ್ನು ನೋಡಿದರೆ.. ದೇಶ ಸ್ವತಂತ್ರಗೊಂಡಿದೆಯೋ ಅಥವಾ ಇನ್ನು ಬ್ರಿಟಿಷರ ದಬ್ಬಾಳಿಕೆಯ ಆಳ್ವಿಕೆ ಇದೆಯೋ ತಿಳಿಯದಂತಾಗಿದೆ.

ಮರ್ಕೆಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಾರದ ಹಿಂದಷ್ಟೇ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಉಸ್ತುವಾರಿಯವರು ಭ್ರಷ್ಟಾಚಾರ ಮಾಡುವ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಸಾಥ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.ಮರ್ಕೆಲ್ ಗ್ರಾಮದ ಜನರ ಸಂಕಷ್ಟ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗಮನ ಹರಿಸುವ ಅಗತ್ಯವಿದೆ.

ಬೀದರ್ ಜಿಲ್ಲಾ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಸಚಿವ ಪ್ರಭು ಚವ್ಹಾಣ ದೇಶದ ಪ್ರಧಾನಿ ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಗ್ರಾಮದ ಜನರ ಕಷ್ಟ ಬಗೆಹರಿಸಿ ಮೂಲ ಸೌಕರ್ಯ ಕಲ್ಪಿಸುತ್ತಾರೋ ಅಥವಾ ಒಬ್ಬ ಭ್ರಷ್ಟ ಅಧಿಕಾರಿಗೆ ಸಾಥ್ ನೀಡುತ್ತಾರೋ ಎಂಬುದು ಕಾದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!