ಸವದತ್ತಿ:13 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ.ನೌಕರರ ಸಂಘ (659) ಬೆಂಗಳೂರು ಇದರ 12ನೇ ತ್ರೈವಾರ್ಷಿಕ ಮಹಾಧಿವೇಶನದಲ್ಲಿ ಮಾರುತಿ ಚಂದ್ರಪ್ಪ ನಾಯ್ಕರ ಮುರಗೋಡ ಶಾಖೆ ಇವರು ಬೈಲಹೊಂಗಲ ವಿಭಾಗದ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಕಾರಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ.ನೌಕರರ ಸಂಘದ ಸದಸ್ಯರು ಸಹಕರಿಸಿದ ಶಾಸಕ ಹಾಗು ಉಪಸಭಾಧ್ಯಕ್ಷರಾದ ಆನಂದ ಮಾಮನಿಯವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಿವಾನಂದ ಹುದಲಿ. ವಿದ್ಯುತ್ ಪ್ರಾಥಮಿಕ ಸದಸ್ಯರು, ಬೈಲಹೊಂಗಲದ ಜಗದೀಶ ಶಿರವಂತಿ. ರವಿ ಬಾರಿಮರದ,ಕಿತ್ತೂರದ ಅಣ್ಣೋಜಿರಾವ್ ಜಾಧವ, ಸವದತ್ತಿಯ ಲಖನ ಬಾಡಿಗೇರ. ನವಿನ ಗುಗ್ಗರಿ. ಯರಗಟ್ಟಿಯ ಬಸವರಾಜ ಗಾಣಿಗೇರ ಹಾಗು ನೌಕರರ ಸಂಘ ಸ್ಥಳೀಯ ಸಮಿತಿ ಬೈಲಹೊಂಗಲ. ಪದಾಧಿಕಾರಿಗಳು. ಸದಸ್ಯರು ಪ್ರಾಥಮಿಕ ಸಮಿತಿ ಬೈಲಹೊಂಗಲ. ಕಿತ್ತೂರ.ಸವದತ್ತಿ. ಮುರಗೋಡ.ಯರಗಟ್ಟಿ.ಮುನವಳ್ಳಿ ಪ್ರಾಥಮಿಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.