ಬೈಲಹೊಂಗಲ: ಕೋವಿಡ್-19 ಎರಡನೇ ಅಲೆಯ ಜಾಗೃತಿ ಅಭಿಯಾನದ ನಿಮಿತ್ತ ತಾಲೂಕಿನಲ್ಲಿರುವ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ 360 ಶಿಕ್ಷಕರಿಗೆ ಇಂಡಿ ತಾಲೂಕಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಕಮಸಗಿ ಅವರು ಗುಣಮಟ್ಟದ ಎನ್-95 ಮಾಸ್ಕಗಳನ್ನು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಹಸ್ತಾಂತರಿಸಿದರು.
ನಂತರ ಮಾಧ್ಯಮದವರ ಜತೆ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಕಮಸಗಿ, ಕೆಚ್ಚೆದೆಯ ಗೂಡಿನಲ್ಲಿ ಧೀಮಂತ ನಾಯಕರನ್ನು ನಿರ್ಮಿಸುವ ಶಿಕ್ಷಕರಿಗೆ ಸೇವಾಮನೋಭಾವದೊಂದಿಗೆ ಅತ್ಯುತ್ತಮ ಗುಣಮಟ್ಟದ ಎನ್-95 ಮಾಸ್ಕ್ ಗಳನ್ನು ವಿತರಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದ್ದು, ಅನುದಾನ ರಹಿತ ಪ್ರೌಢ ಶಾಲಾ ಶಿಕ್ಷಕರ ಸಮರ್ಪಕ ಮಾಹಿತಿ ದೊರೆಯದ ಕಾರಣ, ಎರಡನೇ ಹಂತದಲ್ಲಿ ಮಾಸ್ಕ್ ಗಳನ್ನು ವಿತರಿಸಲಾಗುವುದು ಎಂದರು.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ, ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ಹಾಗೂ ಪ್ರೌಢ ಶಾಲೆಗಳಿಗೆ ಮತ್ತು ವಸತಿ ನಿಲಯದ ಎಲ್ಲಾ ವಿದ್ಯಾ ಸಂಸ್ಥೆಗಳ ಶಿಕ್ಷಕರ ಶ್ರೇಯೋಭಿವೃದ್ಧಿಯೇ ನನ್ನ ಧ್ಯೇಯ ಎಂಬ ಸ್ವಚ್ಛಂದ ಸೇವಾಮನೋಭಾವದಿಂದ ಮಾಸ್ಕಗಳನ್ನು ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾಸ್ಕ್ ಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೃತ್ಯುಂಜಯ ಪಾಟೀಲ, ಪ್ರಭಾರಿ ಬಿಇಓ ಬಿ.ಎನ್.ಕಸಾಳೆ, ಮಹೇಶ ಯರಗಟ್ಟಿ, ಸಿಆರ್‍ಪಿಗಳಾದ ರಾಜು ಹಕ್ಕಿ, ಪಿ.ಪಿ.ಸೊಂಟಕ್ಕಿ, ಶ್ರೀಶೈಲಗೌಡ ಪಾಟೀಲ, ರಾಯಗೊಂಡ ಬಿರಾದಾರ ಉಪಸ್ಥಿತರಿದ್ದರು.