ದಿನಪತ್ರಿಕೆ ಹಂಚಿಕೆದಾರರಿಗೆ ಮಾಸ್ಕ್ ವಿತರಣೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಬೈಲಹೊಂಗಲ – ಕರೊನಾ ಸಂಕಷ್ಟ ಕಾಲದಲ್ಲೂ ಜನತೆಗೆ ದೇಶದ,ಜಗತ್ತಿನ ಆಗುಹೋಗುಗಳ ತಿಳಿವಳಿಕೆ ನೀಡುವ ಪತ್ರಿಕಾ ಸೇವೆ ಒದಗಿಸುತ್ತಿರುವ ಪತ್ರಕರ್ತರ ಹಾಗೂ ಹಂಚಿಕೆದಾರರ ಸೇವೆ ಅಮೋಘವಾಗಿದೆ ಎಂದು ಪುರಸಭೆ ಸದಸ್ಯ ವಿಜಯ ಬೋಳನ್ನವರ ಹೇಳಿದರು.

ಅವರು ಬುಧವಾರ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಚಳಿ, ಗಾಳಿ, ಮಳೆ ಲೆಕ್ಕಿಸದೆ ಮನೆ,ಮನೆಗೆ ಪತ್ರಿಕೆ ಹಂಚಿಕೆ ಹಂಚುವ ಸೇವೆ ಸಲ್ಲಿಸುತ್ತಿರುವ ಹಂಚಿಕೆದಾರರಿಗೆ, ಸೋಂಕಿನಿಂದ ರಕ್ಷಣೆಗಾಗಿ ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಜರ್ ಸೇರಿ ಇನ್ನಿತರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಕರೊನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತರಂತೆ ಪತ್ರಿಕಾ ಸೇವೆಯನ್ನು ಮಾಡುವ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳುವುದು ಅವಶ್ಯವಾಗಿದೆ.

ಪತ್ರಿಕೆಯ ಸುದ್ದಿಗಾಗಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಾಗೂ ಹಂಚಿಕೆಯಲ್ಲಿ ತೊಡಗುವ ಬಡ ಮಕ್ಕಳ ಶ್ರಮದಾನ ಅಮೋಘವಾಗಿದ್ದು, ಸರಕಾರ ಅವರಿಗೆ ಸಹಾಯ ಸವಲತ್ತು ಘೋಷಿಸಬೇಕೆಂದು ಆಗ್ರಹಿಸಿದರು.

- Advertisement -

ಜನತೆಯ ಜೀವನವನ್ನೆ ಬುಡ ಮೇಲು ಮಾಡುತ್ತಿರುವ ಕರೋನಾ ಮಹಾಮಾರಿಯ ಕೊಂಡಿಯನ್ನು ಕಡಿತಗೊಳಿಸಲು ಸಾಮಾಜಿಕ ಅಂತರ, ಮಾಸ್ಕ್, ಸ್ನಾನಿಟೈಜರ್ ಬಳಕೆ ಅತ್ಯವಶ್ಯವಾಗಿದೆ. ಸೋಂಕಿನ ಲಕ್ಷಣಗಳು ಕಂಡಲ್ಲಿ ಕೂಡಲೇ ವೈದ್ಯರ ಸಂಪರ್ಕ ಪಡೆದು ಸಲಹೆ,ಸೂಚನೆ ಪಾಲಿಸಲು ಕರೆ ನೀಡಿದರು.

ಪುರಸಭೆ ಸದಸ್ಯ ಶಿವಾನಂದ ಕೋಲಕಾರ, ಪತ್ರಕರ್ತರಾದ ಬಸವರಾಜ ಕಲಾದಗಿ, ಕುಮಾರ ರೇಶ್ಮಿ, ಶರೀಫ ನದಾಫ, ರವಿಕಿರಣ ಯಾತಗೇರಿ, ಪ್ರಕಾಶ ಕಲಾದಗಿ, ರವಿ ಹೊಸಮನಿ (ಕಲಾದಗಿ), ಅಮಿತ ರೇಶ್ಮಿ, ಶಶಿಧರ ಆನಿಗೋಳ, ಆಶ್ವಿನ ಇಂಗಳಗಿ, ಶಿವನಾಗ ಶಿಂಗನ್ನವರ, ಪಿಂಟು ಕುದರಿ, ಆನಂದ ಭಜಂತ್ರಿ, ಶಿವಣ್ಣ ದೊಡಮನಿ ಇತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!