ಸಿಂದಗಿ: ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಲಿಂ.ಸಂಗಯ್ಯ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ವಿಜಯಪುರ ಶಾಖಾ ಮಠದಲ್ಲಿ ಆಗಷ್ಟ 10 ರಂದು ಹಮ್ಮಿಕೊಳ್ಳಲಾಗಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.
ಸರತಿ ಮಠದ ವೇ.ಗಂಗಾಧರ ಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಮಾಡಿಕೊಳ್ಳಲು ಇಚ್ಚಿಸುವ ವಧು ವರರು ವಯಸ್ಸಿನ ಪ್ರಮಾಣ ಪತ್ರ, ಆಧಾರಕಾರ್ಡ ಮತ್ತಿತರ ದಾಖಲೆಗಳು ಒದಗಿಸಬೇಕು. ಅವರಿಗೆ ಮಠದ ವತಿಯಿಂದ ತಾಳಿ, ಕಾಲುಂಗುರ, ಬಟ್ಟೆಯನ್ನು ಉಚಿತವಾಗಿ ಒದಗಿಸಲಾಗುವುದು. ಅಲ್ಲದೇ ಗ್ರಾಮದಲ್ಲಿ ಯಾರಾದರೂ ವಿವಾಹವಾಗುವ ಜೋಡಿಗಳಿದ್ದರೆ ಅಂತಹ ಮಾಹಿತಿ ಗ್ರಾಮದ ಹಿರಿಯರು ಒದಗಿಸಬೇಕು ಅಲ್ಲದೇ ಮದುವೆಯ ಸಿದ್ದತೆಯಿಂದ ಎಲ್ಲ ಕಾರ್ಯಗಳಿಗೆ ಸ್ವ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ಶ್ರೀಮಂತಗೌಡ ನಾಗೂರ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪೂರ, ಉಪಾಧ್ಯಕ್ಷೆ ರೂಪಾ ನಂದಿ, ಸಿದ್ದಾರಾಮ ಹಂಗರಗಿ, ವಿನೋದ ಇಂಚಗೇರಿ, ದವಲಪ್ಪ ಬಡದಾಳ, ಮುತ್ತುರಾಜ ಕಲಶೆಟ್ಟಿ, ಸಿದ್ದು ಹೀರಾಪೂರ, ಶಿವಾನಂದ ಹಾಳಕಿ, ಸುರೇಶ ಗಂಗನಳ್ಳಿ, ಸಿದ್ದಾರ್ಥ ಮೇಲಿನಕೇರಿ, ಮುನೀರ ಮುಜಾವರ, ಶಿವಮೂರ್ತಿ ಕಾಟಕರ ಇದ್ದರು.