ಬೆಳಗಾವಿ – ತಾಲೂಕಿನ ಮಾಸ್ತ ಮರಡಿಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ0ದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ವಾಗಿ ವಿವಿಧ ಸರಳ ವಾದ ಯೋಗಾಸನ ಗಳನ್ನು ಮಾಡಿ ಗಮನ ಸೆಳೆದರು.
ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಯೋಗಾಸನದ ಮಹತ್ವ ವಿವರಿಸಿ, ಯೋಗ ವಿಶ್ವಕ್ಕೆ ಭಾರತ ದೇಶ ನೀಡಿದ ಕೊಡುಗೆ ಯಾಗಿದೆ, ಪುರಾತನ ಕಾಲದ ಪರಂಪರೆಯನ್ನು ಹೊಂದಿದೆ ಯೋಗಾಸನ ನಿರಂತರ ಮಾಡಿದರೆ ಮನುಷ್ಯ ನಿರೋಗಿಯಾಗುವನು, ಯೋಗದ ಪ್ರಯೋಜನ ಬಹಳವಿದೆ, ಸತತವಾಗಿ ವಿದ್ಯಾರ್ಥಿಗಳು ಯೋಗದ ಸರಳ ಆಸನಗಳನ್ನು ಮಾಡಿ ಆರೋಗ್ಯದ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ ಸಾವಕಾರ ರವರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ವಿವಿಧ ಬಗೆಯ ಆಸನಗಳನ್ನು ಮಾಡಿದರು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಹ ಶಿಕ್ಷಕರಾದ ಬಿ ಆರ್ ಪಾಟೀಲ ರವರು ಯೋಗ ಪ್ರಾರ್ಥನೆ ಹೇಳಿದರು, ಯೋಗದ ಮಹತ್ವ ಸಾರುವ ಗೀತೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರು, ಸಹ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.