ಕಲಬುರಗಿ: “ಫುಲೆಯವರ ಹೋರಾಟದ ಹೆಜ್ಜೆಯಿಂದ ಇಂದು ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ, ಸರ್ವ ಕ್ಷೇತ್ರದಲ್ಲೂ ಸಮಾನತೆಯ ಅವಕಾಶಗಳ ಮೂಲಕ ಸಮಾನತೆಯ ಸ್ಥಾನಮಾನ ಸಿಕ್ಕಿದೆ.ಫುಲೆಯವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ದೇಶದ ಪ್ರಗತಿಯಲ್ಲಿ ತನ್ನ ಕೊಡುಗೆ ನೀಡಬೇಕು” ಎನ್ನುವ ಮಾತುಗಳನ್ನು ನಂದಿನಿ ಸನಬಾಳ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಕಲಬುರಗಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘ (ರಿ ) ಬೆಂಗಳೂರು, ಜಿಲ್ಲಾ ಘಟಕ ಕಲಬುರಗಿ. ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಬುರಗಿ ಯ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಜರುಗಿದ “ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ” ಅವರ ಜನ್ಮೋತ್ಸವದ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆ ಲಲಿತಾ ಪಾಟೀಲ ನಡೆಸಿಕೊಟ್ಟರು. ಕಲಬುರಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ ಕಾರ್ಯ ಕ್ರಮವನ್ನು ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ವಿಜಯಕುಮಾರ್.ಡಿ.ಬೆಳಮಗಿ ವಹಿಸಿದ್ದರು. ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾದ ಬಸವರಾಜ್ ಬಳುoಡಗಿ, ಡಾ. ರವಿಕಾಂತಿ ಖ್ಯಾತನಾಳ ,ಸವಿತಾ ನಾಸಿ. ಡಾ.ಗೀತಾ ಪಾಟೀಲ್, ಶಶಿಕಲಾ ನರೋಣಕರ್, ಸುಮಂಗಲಾ ಬಿ ಸಂಗಾವಿ, ರೇಣುಕಾ ಡಾಂಗೆ, ಮಾಲಾ ಕಣ್ಣಿ, ಸುರೇಶ ಬಡಿಗೇರ, ಗೀತಾ ಪಾಟೀಲ,ಗುರು ಲಿಂಗಯ್ಯ ಹಿರೇಮಠ್.ಮೊದಲಾದವರು ಉಪಸ್ಥಿತರಿದ್ದರು.