spot_img
spot_img

ಮೊಹರಂ ನಿಮಿತ್ತ ಇರಾನಿಗಳ ಮಾತಂ ಆಚರಣೆ

Must Read

ಬೀದರ: ಮೊಹರಂ ಹಬ್ಬದ ನಿಮಿತ್ತ ಗಡಿ ಜಿಲ್ಲೆ ಬೀದರ್ ನಲ್ಲಿಂದು ಇರಾನಿಗಳು ಮಾತಂ ಹಬ್ಬವನ್ನು ಆಚರಿಸಿದರು.

ನಗರದ ವಿವಿಧೆಡೆ ಮೆರವಣಿಗೆಯಲ್ಲಿ ಬಂದ ಇರಾನಿಗಳು ಕರಬಾಲಾದಲ್ಲಿ ಅಂದು ನಡೆದ ತಮ್ಮ ಧರ್ಮದ ಗುರುಗಳಾದ ಹಸನ್ ಹುಸೇನ್ ಹತ್ಯೆಯ ಖಂಡಿಸಿ ತಮ್ಮ ಶರೀರಕ್ಕೆ ಮಾರಕಾಸ್ತ್ರಗಳಿಂದ ಹೊಡೆದುಕೊಂಡು ರಕ್ತದೋಕುಳಿ ಹರಿಸಿದರು. ಮಕ್ಕಳು, ವಯಸ್ಕರು,ವಯೋವೃದ್ದರು ಎನ್ನದೆ ಎಲ್ಲರೂ ತಮ್ಮ ಶರೀರವನ್ನು ದಂಡಿಸಿದರು.

ದೂರದ ಕಲಬಲಾದಲ್ಲಿ ನಡೆದ ಧರ್ಮಯುದ್ದವನ್ನು ಪ್ರತಿ ವರ್ಷ ಇರಾನಿಗಳು ತಮ್ಮ ದೇಹ ದಂಡಿಸುವ ಮೂಲಕ ಆಚರಣೆ ಮಾಡುತ್ತಾ ಬಂದಿದ್ದಾರೆ.

ಮೊಹರಂ ಹಬ್ಬ ಬಂದ್ರೆ ಸಾಕು ಐದು ದಿನಗಳ ಕಾಲ ಉಪವಾಸ ಇದ್ದು ನಂತರ ತಮ್ಮ ಧರ್ಮಗುರುಗಳಾದ ಹಸನ್ ಹುಸೇನ್ ಅವರನ್ನ ಕರಬಲಾದಲ್ಲಿ ಹತ್ಯೆ ಮಾಡಿದ ದಿನದಂದು ಇವರು ಮಾತಂ (ಶೋಕಾಚರಣೆ) ಆಚರಣೆ ಮಾಡುತ್ತಾರೆ.

ಅಂದು ನಡೆದ ಹತ್ಯೆಯ ನೆನಪಿಗಾಗಿ ತಮ್ಮ ಧರ್ಮಗಳ ಹೆಸರಲ್ಲಿ ರಕ್ತದೋಕುಳಿ ಹರಿಸಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾರೆ. ಇಂಥ ವಿಶಿಷ್ಟ ಆಚರಣೆ ಬೀದರನಲ್ಲಿ ಪ್ರಸಿದ್ದವಾಗಿದ್ದು ಬೇರೆಡೆಯಲ್ಲಿ ಸಿಗುವುದು ಅಪರೂಪ ಎನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!