spot_img
spot_img

ಮಠ ಮಂದಿರಗಳು ಧಾರ್ಮಿಕರ ಶ್ರದ್ಧಾ ಕೇಂದ್ರಗಳು – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ದಿವಂಗತ ಸಂಗಣ್ಣನಬಸವ ಸ್ವಾಮೀಜಿಗಳ ಸತತ ಪ್ರಯತ್ನದ ಫಲವಾಗಿ ಬಳೋಬಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಶ್ರದ್ದಾ ಕೇಂದ್ರವಾಗಿ ಬಸವ ಯೋಗ ಮಂಟಪ ಇಂದು ಅತ್ಯುತ್ತಮವಾಗಿ ಬೆಳೆಯುತ್ತಿದೆ. ಇದು ಬರುವ ದಿನಗಳಲ್ಲಿ ಬಸವ ತತ್ವ ಅನುಷ್ಠಾನದ ಮಹಾನ್ ಕೇಂದ್ರವಾಗಿ ಬೆಳೆಯಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶುಭ ಹಾರೈಸಿದರು.

ಮಂಗಳವಾರ ನ-19 ರಂದು ಅರಭಾವಿ ಮತಕ್ಷೇತ್ರದ ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನದ ಉದ್ಘಾಟನೆ ನೇರವೇರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಠ ಮಂದಿರಗಳು ಜನರ ಧಾರ್ಮಿಕತೆಯ ಶ್ರದ್ದಾ ಕೇಂದ್ರಗಳು ಜೊತೆಗೆ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವನ್ನು ಮಾಡುತ್ತಿವೆ. ಹೀಗಾಗಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಬಸವ ಯೋಗ ಮಂಟಪದಂತಹ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿಸಿದರು.

- Advertisement -

ಸದ್ಗುರು ಮಾತಾ ನೀಲಾಂಬಿಕಾದೇವಿ, ಸದ್ಗುರು ಮಾತಾ ನೀಲಲೋಚನ ತಾಯಿ ಸಾನಿಧ್ಯ ವಹಿಸಿದ್ದರು.
ಪ್ರಮುಖರಾದ ಭಗವಂತ ಪಾಟೀಲ, ಸುನೀಲ ಈರೇಶನವರ, ಅಶೋಕ ಚಿಮ್ಮಡ, ಯಲ್ಲಪ್ಪ ಪಾಟೀಲ, ಗುರುಸಿದ್ದ ಮುರಾರಿ, ರಾಮಲಿಂಗ ಬೆಳವಿ, ಲಕ್ಕಪ್ಪ ಕಳಸನ್ನವರ, ನಿರುಪಾದ ರೆಡ್ಡಿ, ವಿಠ್ಠಲ ಸುಣಧೋಳಿ, ರೂಪೇಶ ಮಾಲದಿನ್ನಿ, ಗುರುಸಿದ್ದ ಮಲ್ಲಾಪೂರ, ಗುರುಸಿದ್ದ ದುರ್ಗಿ, ಮಾರುತಿ ಕಾಡಗಿ, ರಾಮಗೊಂಡ ಪಾಟೀಲ, ಶಿವಪುತ್ರ ಚಿಮ್ಮಡ, ಅಡಿವೆಪ್ಪ ಕುರಬೇಟ ಸೇರಿದಂತೆ ಸ್ಥಳೀಯ ಮುಖಂಡರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group