ಬೆಳಗಾವಿ – ನಗರದ ಕೋನವಾಳ ಗಲ್ಲಿಯಲಿರುವ ಲೋಕಮಾನ್ಯ ಟಿಳಕ ಚಿತ್ರಮಂದಿರದಲ್ಲಿ “ದಯವಿಟ್ಟು ಕ್ಷಮಿಸು” ಎಂಬ ಚಲನಚಿತ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ “ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿ”ನ ಅಧ್ಯಕ್ಷರಾದ ಶ್ರೀಮತಿ ಮಂಗಲಾ.ಶ್ರೀ. ಮೆಟಗುಡ್ಡ ಇವರು, ಸ್ಥಳೀಯ ಕಲಾವಿದರಿಂದ ಕೂಡಿದ ಈ ಚಲನಚಿತ್ರ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಚಲನಚಿತ್ರಗಳನ್ನು ಕನ್ನಡ ನಾಡಿಗೆ ನೀಡುವುದರ ಮೂಲಕ ಜನರಲ್ಲಿ ಕನ್ನಡ ಭಾಷಾಭಿಮಾನವನ್ನು ದ್ವಿಗುಣಗೊಳಿಸಲಿ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂತಾಗಬೇಕು. ಚಲನಚಿತ್ರ ನಿರ್ಮಾಣಕ್ಕೆ ಅವಶ್ಯವಿರುವ ಫಿಲಂ ಸ್ಟುಡಿಯೋ ಬೆಳಗಾವಿಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿಯೂ ತಿಳಿಸಿದರು.
ಇದರಿಂದ ಸ್ಥಳೀಯ ಪ್ರತಿಭೆಗಳು ಬೆಳೆಯಲು ಅನುಕೂಲವಾಗುವುದು. “ದಯವಿಟ್ಟು ಕ್ಷಮಿಸು” ಚಲನಚಿತ್ರ ಚೆನ್ನಾಗಿದೆ.ಇಂದಿನ ಯುವಜನರಿಗೆ ಉತ್ತಮ ಸಂದೇಶವನ್ನು ಕೊಡುತ್ತದೆ.ಚಿತ್ರತಂಡದ ಎಲ್ಲ ನಟರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.
ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಮ.ಯ. ಮೆಣಸಿನಕಾಯಿಯವರು ಮಾತನಾಡಿ, ಉತ್ತರ ಕರ್ನಾಟಕದ ಯುವಕಲಾವಿದರಿಂದ ಒಳ್ಳೆಯ ಚಲನಚಿತ್ರ ನಿರ್ಮಾಣವಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಇನ್ನೂ ಹೆಚ್ಚು ಚಿತ್ರಗಳು ಈ ಸಂಸ್ಥೆಯಿಂದ ಮೂಡಿಬರಲಿ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರದ ನಿರ್ದೇಶಕ ಡಿ.ಮಂಜುನಾಥ ಮತ್ತು ನಿರ್ಮಾಪಕರನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ವೀ.ಮ. ಅಂಗಡಿಯವರು ವಂದನೆಗಳನ್ನು ಸಲ್ಲಿಸಿದರು.ಶಿವಾನಂದ ತಲ್ಲೂರ ಸರ್ ಹಾಗೂ ಶ್ರೀಮತಿ ಪ್ರತಿಭಾ ಕಳ್ಳಿಮಠ, ರಾಜೇಶ್ವರಿ ಹಿರೇಮಠ,ಭಾರತಿ ಮಠದ ಉಪಸ್ಥಿತರಿದ್ದರು.