ಜನರ ಕಷ್ಟವ ಕಂಡು ಕರಗುವಂಥೆದೆಯಿಲ್ಲ
ಮೌನದಿಂದೆಲ್ಲವನು ನೋಡುತಿಹುದು
ಇಂಥ ಕಲ್ಲಿಗೆ ದೇವರೆಂದೇಕೆ ಕರೆಯುವುದು ?
ಶಿಲೆಯಲ್ಲಿ ಶಿವನಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಶಿಲೆ = ಕಲ್ಲು
ತಾತ್ಪರ್ಯ
ಜಡವಾಗಿರುವ ಕಲ್ಲಿನಿಂದ ಮೂರ್ತಿ ಕೆತ್ತಿ ಗುಡಿಯಲ್ಲಿ
ಪ್ರತಿಷ್ಟಾಪಿದ ಮೂರ್ತಿ ದೇವರಲ್ಲ. ಏಕೆಂದರೆ ದೇವನ
ನೆನಪಿಗಾಗಿ ನಾವು ರೂಪಿಸಿಕೊಂಡ ಕುರುಹು ಮಾತ್ರ.
ನಾವು ಆ ಮೂರ್ತಿಯಲ್ಲಿ ಇಟ್ಟ ನಂಬಿಕೆಯೆ ದೇವರು.
ಆದಕಾರಣ ನಮ್ಮ ಭಾವದಲ್ಲಿ ದೇವರಿರುತ್ತಾನೆ.ಅಂಥ
ದೇವರ ಮೂರ್ತಿಗೆ ಜನಗಳ ಕಷ್ಟಕಾರ್ಪಣ್ಯಗಳನ್ನು.ಕಂಡು
ಕನಿಕರದಿಂದ ಸ್ಪಂದಿಸುವ ಹೃದಯವಿರುವುದಿಲ್ಲ. ಮತ್ತೆ
ಸಾಂತ್ವನದ ಎರಡು ಮಾತಾಡುವ ಬಾಯಿಯಿಲ್ಲ. ಇಂಥಹ
ನಿರ್ಜವ ಕಲ್ಲು ದೇವರಲ್ಲ. ದೇವರು ಎನ್ನುವುದು ಒಂದು
ಅದ್ಭುತ ಶಕ್ತಿ. ಆತ ನಿರಾಕಾರ. ಆತನಿಗೆ ಯಾವುದೆ ರೂಪ
ಬಣ್ಣ ಆಕಾರವಿಲ್ಲ. ಆತನು ಅಮೂರ್ತ.ಅಮೂರ್ತವಾದ
ದೇವರನ್ನು ಮೂರ್ತಿಮಾಡಿ ಸುಗುಣೋಪಾಸನೆಗಾಗಿ
ಮಾಡಿಕೊಂಡ ಒಂದು ವಿಧಾನ ಅಷ್ಟೆ. ಧ್ಯಾನಮೌನಕ್ಕೆ
ದೇವರು ಕಾಣಿಸುವುದಿಲ್ಲ ಆದರೆ ಅನುಭವಕ್ಕೆ ಬರುತ್ತಾನೆ.
ನಾವು ಮಲಗಿದ್ದಾಗಲು ಹೃದಯ ಬಡಿಯುವುದು ಮತ್ತು
ಉಸಿರಾಟ ನಡೆಯುವುದು ಅವನ ಕರುಣಿಯಿಂದಲೆ.
ಅವನು ಬಹಳ ಕರುಣಾಮಯಿ. ನಾವು ನಂಬಿಗೆಯಿಂದ
ಅವನಿಗೆ ಮನಸ್ಸಿನಲ್ಲಿ ಬೇಡಿಕೊಂಡರೆ ಈಡೇರಿಸುವನು.
ಆತ ನಮ್ಮೊಳಗು ಇದ್ದಾನೆ ಹೊರಗು ಇದ್ದಾನೆ. ದೇವರು
ಜಗದಗಲ ಮುಗಿಲಗಲ ಅಗೋಚರ ಅಪ್ರಮಾಣ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990