ರೇಣುಕರ ಶಂಕರರ ಮಧ್ವರಾಮಾನುಜರ
ತತ್ತ್ವಗಳನಾಚರಿಸಿ ತಿಳಿದುನೋಡು
ಅಡಿಗೆ ಭಟ್ಟರ ಬಗ್ಗೆ ಚರ್ಚೆಮಾಡುವುದೇಕೆ ?
ಮಾಡಿದಡಿಗೆಯನುಣ್ಣು – ಎಮ್ಮೆತಮ್ಮ
ಶಬ್ಧಾರ್ಥ
ತತ್ತ್ವ = ಸಿದ್ಧಾಂತ
ತಾತ್ಪರ್ಯ
ಜೀವ ಜಗತ್ತು ಮತ್ತು ಈಶ್ವರನ ಕುರಿತಾಗಿ ತಿಳಿಸುವುದು ವೇದಾಂತ. ಪ್ರಪಂಚದಲ್ಲಿ ರೇಣುಕಾಚಾರ್ಯರ ಶಕ್ತಿವಿಶಿಷ್ಟಾದ್ವೈತ , ಶಂಕರಾಚಾರ್ಯರ ಅದ್ವೈತ , ಮಧ್ವಾಚಾರ್ಯರ ದ್ವೈತ ಮತ್ತು ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಹೀಗೆ ಒಟ್ಟು ವೇದಾಂತ ದರ್ಶನಗಳು ನಾಲ್ಕಿವೆ. ಪರಮಾತ್ಮ ಮತ್ತು ಜೀವಾತ್ಮ ಎರಡು ಬೇರೆ ಬೇರೆ ಎಂಬುದು ದ್ವೈತ. ಜೀವಾತ್ಮನೂ, ಪರಮಾತ್ಮನು ಒಂದೇ ಎಂಬುದು ಅದ್ವೈತ. ಎರಡಿಲ್ಲದೆ ಒಂದೇ ಆಗಿರುವುದು ಬ್ರಹ್ಮ.’ಚಿತ್’ ಮತ್ತು ‘ಅಚಿತ್ ‘ಎಂಬ ವಿಶೇಷಣಗಳಿಂದ ಕೂಡಿ ಏಕಮೇವಾದ್ವಿತೀಯವಾಗಿದೆ ಎಂಬುದು ವಿಶಿಷ್ಟಾದ್ವೈತ. ಶಕ್ತಿವಿಶಿಷ್ಬನಾದ ಪರಮಾತ್ಮನೇ ಶಕ್ತಿ ವಿಶಿಷ್ಟನಾದ ಜೀವನೆಂಬುದು ಶಕ್ತಿವಿಶಿಷ್ಠಾದ್ವೈತ.
ಅಡಿಗೆ ಮಾಡಿ ಇಟ್ಟದ್ದನ್ನು ಉಂಡು ಸಂತೋಷಪಡಬೇಕೆ ಹೊರತು ಅಡಿಗೆ ಮಾಡಿದ ಭಟ್ಟರ ಬಗ್ಗೆ ಚರ್ಚಿಸುವುದು ಸಮಂಜಸವಲ್ಲ. ಹಾಗೆ ವೇದಾಂತ ದರ್ಶನವನ್ನು ಆಚರಿಸಬೇಕೆ ಹೊರತು ವೇದಾಂತಿಗಳ ಕುರಿತಾಗಿ ವೈಭವೀಕರಿಸಿ ತರ್ಕ ಮಾಡುವುದು ಸರಿಯಲ್ಲ. ಇಲ್ಲಿ ಅವರು ಬೋಧಿಸಿದ ತತ್ತ್ವ ಮುಖ್ಯ. ಉಣ್ಣುವಾಗ ಅಡಿಗೆಭಟ್ಟರನ್ನು ಹೇಗೆ ಗಮನಿಸುವುದಿಲ್ಲವೋ ಹಾಗೆ ವೇದಾಂತಿಗಳು ಅಮುಖ್ಯ. ಅವರು ಶ್ರೇಷ್ಢ ಇವರು
ಶ್ರೇಷ್ಠ ಎಂದು ವಾದ ಮಾಡಬಾರದು. ಎಲ್ಲರು ಶ್ರೇಷ್ಠರು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990