ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

 

ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ
ಅವ ಕ್ರೈಸ್ತ ಅವ ಮಹಮದೀಯನೆಂದು
ದಯಮಾಡಿ ಕರೆಯದಿರು ಬೇರೆಯವರೆನ್ನದಿರು
ಅವರು ನಮ್ಮವರೆನ್ನು – ಎಮ್ಮೆತಮ್ಮ

ಶಬ್ಧಾರ್ಥ
ಮಹಮದೀಯ‌ = ಮುಸಲ್ಮಾನ

ತಾತ್ಪರ್ಯ
ಜಗತ್ತಿನಲ್ಲಿ‌ ಹಿಂದು‌, ಜೈನ, ಬೌದ್ಧ, ಸಿಖ್ಖ, ಕ್ರೈಸ್ತ, ಇಸ್ಲಾಂ‌,
ಮುಂತಾದ ಧರ್ಮಗಳಿವೆ. ವೇದೋಪನಿಷತ್ತುಗಳನ್ನು
ಓದುವವರು ಹಿಂದುಗಳು, ಜಿನಾಗಮ ಓದುವವರು ಜೈನರು,
ತ್ರಿಪಿಟಿಕಾ ಓದುವವರು ಬೌದ್ಧರು, ಗುರುಗ್ರಂಥ ಸಾಹೇಬ ಓದುವವರು‌ ಸಿಖ್ಖರು, ಬೈಬಲ್ ಓದುವವರು ಕ್ರೈಸ್ತರು, ಕುರಾನ್ ಓದುವವರು‌ ಮುಸಲ್ಮಾನರು ಹೀಗೆ ತಮ್ಮತಮ್ಮ ಧರ್ಮಗ್ರಂಥಗಳನ್ನು ಓದಿ ಧರ್ಮಾಚರಣೆ ಮಾಡುತ್ತಾರೆ.
ಧರ್ಮಗ್ರಂಥಗಳಲ್ಲಿ ಆಧ್ಯಾತ್ಮದ ಜ್ಞಾನ ಮಾತ್ರ ತುಂಬಿರುತ್ತದೆ.
ಎಲ್ಲಾ ಧರ್ಮಗಳು‌ ಅನುಯಾಯಿಗಳಿಗೆ ದಯೆ, ಕರುಣೆ, ಪ್ರೀತಿ, ಅನುಕಂಪ, ದಾಕ್ಷಿಣ್ಯ, ಸೌಹಾರ್ದ, ಸಹಕಾರ, ಸಹಬಾಳ್ವೆ
ಮುಂತಾದ ಉತ್ತಮ‌ಗುಣಗಳನ್ನು‌ ಅಳವಡಿಸಿಕೊಳ್ಳಲು
ಹೇಳುತ್ತವೆ. ಯಾವ ಧರ್ಮದವನಾದರು‌ ಕೂಡ‌ ಇಂಥ
ಗುಣಗಳನ್ನು ಅಳವಡಿಸಿಕೊಂಡು ಇತರರನ್ನು ಹಿಂದು,
ಜೈನ, ಬೌದ್ಧ, ಸಿಖ್ಖ, ಕ್ರೈಸ್ತ, ಮುಸಲ್ಮಾನ ಎಂದು ತಾರತಮ್ಯ
ಮಾಡದೆ ಅವರೆಲ್ಲ ನಮ್ಮವರು ಎಂದು ಭಾವಿಸಬೇಕು.
ಧರ್ಮಗಳು ಶಾಂತಿಯನ್ನು ಪ್ರತಿಪಾದಿಸುತ್ತವೆ. ಆದಕಾರಣ
ಇತರರನ್ನು ದೂರದೆ ಅವರನ್ನು ಗೌರವದಿಂದ‌ ಕಾಣಬೇಕು.
ಹಾಗಾದರೆ ಮಾತ್ರ ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ಶಾಂತಿ
ನೆಲೆಸುತ್ತದೆ. ಭಾವೈಕ್ಯದಿಂದ ಯುದ್ಧ ಹೋರಾಟಗಳು ತಪ್ಪಿ
ಹಿಂಸೆ ರಕ್ತಪಾತ ನಡೆಯದೆ ಜನ‌ ಶಾಂತಿಯಿಂದ ಬದುಕುವರು.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 9449030990

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group