ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

Must Read

 

ಇಂಗ್ಲೆಂಡಮೇರಿಕದಿ‌ ಗೀತೆಯನ್ನೋದುವರು
ಬೈಬಲ್ಲನೋದುವರು ಭಾರತದಲಿ
ದೇಶಮತಭಾಷೆಗಳು ಯಾವುದಾಗಿರಲೇನು‌?
ಸದ್ಗ್ರಂಥ ಸರ್ವರಿಗೆ – ಎಮ್ಮೆತಮ್ಮ

ಶಬ್ಧಾರ್ಥ
ಗೀತೆ = ಭಗವದ್ಗೀತೆ. ಸದ್ಗ್ರಂಥ‌ = ಒಳ್ಳೆಯ‌ ಧಾರ್ಮಿಕ‌ ಪುಸ್ತಕ.

ತಾತ್ಪರ್ಯ
ಇಂಗ್ಲೆಂಡು‌ ಅಮೇರಿಕಾ‌ ಮುಂತಾದ ಪ್ರಪಂಚದ ಇತರ ದೇಶಗಳಲ್ಲಿ ಭಾರತದ ಭಗವದ್ಗೀತೆಯನ್ನು‌ ಓದುತ್ತಾರೆ.
ಮತ್ತು ಭಾರತ ದೇಶದಲ್ಲಿ‌ ಬೈಬಲ್ಲು‌ ಓದುತ್ತಾರೆ. ಹೌದು
ಜ್ಞಾನಿಗಳಾದವರು ಎಲ್ಲ‌ ಧರ್ಮಗಳ‌ ಗ್ರಂಥಗಳನ್ನು ಓದಿ
ಜ್ಞಾನವನ್ನು‌ ವಿಸ್ತರಿಸಿಕೊಳ್ಳುತ್ತಾರೆ. ಸದ್ಗ್ರಂಥಗಳು‌ ಯಾವ
ದೇಶದ್ದಾಗಿರಲಿ‌ ಯಾವ ಮತಕ್ಕೆ ಸೇರಿದ್ದಾಗಲಿ ಮತ್ತು‌ ಯಾವ
ಭಾಷೆಯಲ್ಲಿರಲಿ‌ ಅವು ಜಗತ್ತಿನ‌ ಎಲ್ಲ ಜನರಿಗೆ ಸೇರಿದ್ದಾವೆ.
ಅಂಥ ಗ್ರಂಥಗಳು ಎಲ್ಲ‌ ಭಾಷೆಗಳಿಗೆ ಭಾಷಾಂತರವಾಗುತ್ತಿವೆ. ಅವು ಭಾಷಾಂತರವಾಗಲೇಬೇಕು. ಎಲ್ಲ‌ ಧರ್ಮಗಳ ಧಾರ್ಮಿಕ ಗ್ರಂಥಗಳಲ್ಲಿ ಮಾನವೀಯ ಮೌಲ್ಯಗಳು‌ ಮತ್ತು ಅಧ್ಯಾತ್ಮದ ಚಿಂತನೆಗಳಿರುತ್ತವೆ. ಜಗತ್ತಿನ ಜನರಿಗೆ ಕ್ಷಮೆ‌, ದಮೆ, ಅಹಿಂಸೆ, ಅಸ್ತೇಯ,ಶಾಂತಿ ದಾಂತಿ, ಸಹನೆ‌, ಸಮಾಧಾನ, ಸೌಹಾರ್ದ ಸಹಕಾರ ಗುಣಗಳನ್ನು ಬೋಧಿಸುತ್ತಿವೆ. ಇವು ಜಗತ್ತಿನ ಜನ‌‌ರಿಗೆ ಹಿತವನ್ನು ಸುಖವನ್ನು ಕೊಡುತ್ತವೆ. ಆದಕಾರಣ ಅಂಥ ಸದ್ಗ್ರಂಥಗಳನ್ನು‌ ಓದಬೇಕು‌ ಮತ್ತು‌ ಗೌರವಿಸಬೇಕು. ಆ ಸದ್ಗ್ರಂಥಗಳಿಂದ ಜ್ಞಾನವನ್ನು‌ ವಿನಿಮಯ‌ ಮಾಡಿಕೊಂಡರೆ ಮಾನವನು ವಿಶಾಲ ಮನೋಭಾವದವನಾಗಿ ವಿಶ್ವಪ್ರಜ್ಞೆ ಪಡೆದುಕೊಂಡು ವಿಶ್ವ ಮಾನವನಾಗಿ ಬೆಳೆಯುತ್ತಾನೆ. ಯುದ್ಧ ಕದನ ಜಗಳ ಬಡಿದಾಟ ನಿಂತು ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group