ಆಯ್ದಕ್ಕಿ ಮಾರಯ್ಯ ಆಯ್ದು ತಂದರೆ ಹೆಚ್ಚು
ಈಸಕ್ಕಿಯಾಸೆ ನಿಮಗೇಕೆಯೆಂದು
ಆಯ್ದಕ್ಕಿ ಲಕ್ಕಮ್ಮ ಪತಿಯನೆಚ್ಚರಿಸಿದಳು
ಅತಿಯಾಸೆ ತರವಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಆಯ್ದು = ಆರಿಸಿ
ತಾತ್ಪರ್ಯ
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ
ಅಮರೇಶ್ವರ ಎಂಬ ಗ್ರಾಮದ ಮಾರಯ್ಯ ಮತ್ತು ಲಕ್ಕಮ್ಮ
ದಂಪತಿಗಳಿದ್ದರು. ಇವರು ಬಸವಣ್ಣನ ಕಾಯಕನಿಷ್ಢೆಗೆ
ಮಾರುಹೋಗಿ ಕಲ್ಯಾಣಕ್ಕೆ ತೆರಳುತ್ತಾರೆ. ಅಲ್ಲಿ ಮಾರಯ್ಯ
ಕಲ್ಯಾಣದ ವ್ಯಾಪಾರ ಕೇಂದ್ರದಲ್ಲಿ ಕೆಳೆಗೆ ಚೆಲ್ಲಿದ ಅಕ್ಕಿಯನ್ನು
ಆಯ್ದು ತರುವ ಕಾಯಕ ಮಾಡುತ್ತಿದ್ದನು.ಆಯ್ದು ತಂದ ಅಕ್ಕಿ ದಾಸೋಹ ಮಾಡಿ ನಾಲ್ಕು ಮಂದಿಗೆ ಉಣಿಸಿ ದಂಪತಿಗಳು
ಉಣ್ಣುತ್ತಿದ್ದರು. ಈ ಕಾಯಕದ ದೆಸೆಯಿಂದ ಆಯ್ದಕ್ಕಿ ಮಾರಯ್ಯ ಆಯ್ದಕ್ಕಿ ಲಕ್ಕಮ್ಮ ಎಂಬ ಹೆಸರು ಬಿತ್ತು. ಒಮ್ಮೆ ಮಾರಯ್ಯ ಅತಿಯಾಸೆಯಿಂದ ಅವಶ್ಯಕತೆಗಿಂತ ಹೆಚ್ಚು ಅಕ್ಕಿ
ಆರಿಸಿ ತರುತ್ತಾನೆ. ಆಗ ಕಾಯಕನಿಷ್ಠೆಯ ಲಕ್ಕಮ್ಮ ಹೀಗೆ
ಹೇಳುತ್ತಾಳೆ.ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ ,ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ, ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ. ಹೆಚ್ಚಾದ ಅಕ್ಕಿಯನ್ನು ಹಿಂದಕ್ಕೆ ಕಳಿಸಿ ಅಲ್ಲಿಯೆ
ಸುರಿದುಬರಲು ಹೇಳುತ್ತಾಳೆ. ಅತಿಯಾಸೆ ಮಾಡದೆ ಅವಶ್ಯಕತೆ ಇದ್ದಷ್ಟು ಮಾತ್ರ ಬಯಸಬೇಕೆ ಹೊರತು ಅತಿಯಾಸೆ ತರವಲ್ಲ ಎಂಬುದು ಶರಣರ ನಿಲುವು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990