spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

- Advertisement -

 

ಹಿಂದಾದ ಘಟನೆಗಳ ನೆನೆದು ದುಃಖಿಸಬೇಡ
ಮುಂದೇನು ಗತಿಯೆಂದು ಚಿಂತೆಬೇಡ
ತಂದೆಯನು ನೆನೆಯುತ್ತ ಬಂದುದನು ತಿಂದುಂಡು
ಚಂದದಲಿ ಬಾಳಿಂದು – ಎಮ್ಮೆತಮ್ಮ

ತಾತ್ಪರ್ಯ
ಜೀವನದಲ್ಲಿ ಎಷ್ಟೋ ಅಹಿತಕರ ಘಟನೆಗಳು ನಡೆದುಹೋಗಿರಬಹುದು.‌ಅವುಗಳನ್ನು‌ ನೆನಪುಮಾಡುತ್ತ
ದುಃಖಿಸುವುದು ತರವಲ್ಲ. ಆದದ್ದು ಆಗಿಹೋಗಿರುತ್ತದೆ.
ಅದನ್ನು‌ ಬದಲಾಯಿಸುವುದು ಆಗುವುದಿಲ್ಲ. ಆದಕಾರಣ
ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಮುನ್ನಡೆಯಬೇಕು.
ಹೀಗಾದರೆ ಮುಂದಿನ‌‌ ಜೀವನ ಹೇಗೆಂದು‌ ಆತಂಕಪಡುವುದುಸರಿಯಲ್ಲ. ಮುಂದು ಆಗುವುದನ್ನು ಊಹಿಸಿಕೊಂಡುಚಿಂತೆ ಮಾಡುವುದು ಒಳ್ಳೆಯದಲ್ಲ. ಮುಂದೆ ಘಟಿಸದಿರಬಹುದು ಅಥವಾ ಘಟಿಸಬಹುದು. ಬರುವುದಕ್ಕೆ ಸಿದ್ಧನಾಗಿದ್ದು ಅದನ್ನು ಎದುರಿಸಲುಸನ್ನದ್ಧನಾಗಬೇಕು.ಹೀಗೆ ಹಿಂದು ಮುಂದಿನದನ್ನು‌ ಯೋಚಿಸುತ್ತ ಕುಳಿತರೆ ಸದ್ಯದ ಸಂತೋಷದ ಸಮಯ ಕಳೆದುಕೊಳ್ಳಬೇಕಾಗುತ್ತದೆ.
ಆದಕಾರಣ ಹಿಂದಿನದನ್ನು‌ ಮರೆಯುವುದು ಮುಂದಿನದನ್ನು
ಊಹಿಸದಿರುವುದು ಒಳಿತು. ಅವನ್ನೆ ಪದೆಪದೆ‌ ನೆನೆಯುತ್ತ
ಇದ್ದರೆ ಅದೇ ತೆರ ನಡೆಯುತ್ತದೆ. ಆದಕಾರಣ ಸಕಾರಾತ್ಮಕ
ಚಿಂತೆಯನ್ನು ಮಾಡುತ್ತ ಭಗವಂತನಿಗೆ ಒಪ್ಪಿಸಿ ಬರುವುದೆಲ್ಲ
ಅನುಭವಿಸಬೇಕು.ಈಗ ಈ ಕ್ಷಣ ಈ ದಿನ ಸಮಯವನ್ನು
ಸಂತೋಷದಿಂದ ಕಳೆಯುವವನೆ ಜಾಣ. ಸದಾ ಲವಲವಕೆಯಿಂದ ಉತ್ಸಾಹದಿಂದ ಸದ್ಯದ ಕಾಲವನ್ನು
ಕಳೆದರೆ ಆರೋಗ್ಯ ಚೆನ್ನಾಗಿರುತ್ತದೆ. ಇಲ್ಲದಿದ್ದರೆ
ಅನಾರೋಗ್ಯ ಉಂಟಾಗುತ್ತದೆ. ಸಂತೋಷವೆ ಯೌವನ
ಚಿಂತೆಯೇ ಮುಪ್ಪು ಎಂಬುವ ನುಡಿಮುತ್ತು‌ ಸದಾ
ನೆನಪಿನಲ್ಲಿರಬೇಕು.

- Advertisement -

ರಚನೆ ಮತ್ತುವಿವರಣೆ
ಎನ್.ಶರಣಪ್ಪ‌ ಮೆಟ್ರಿ

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group