ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಯಾರು ಹೋಗುವರು ವೈಕುಂಠಕ್ಕೆ ಹೇಳೆಂದು
ವ್ಯಾಸರಾಯರು ಕೇಳೆ ಕನಕನಂದು
ನಾನು ಹೋದರೆ ಮಾತ್ರ ಹೋದೇನು ಎಂದ‌ನುಡಿ
ಸ್ಮೃತಿಪಟಲದಲ್ಲಿರಲಿ – ಎಮ್ಮೆತಮ್ಮ

ಶಬ್ಧಾರ್ಥ
ಸ್ಮೃತಿಪಟಲ – ನೆನಪಿನ ಪರದೆ

ತಾತ್ಪರ್ಯ
ದಾಸಕೂಟವನ್ನು ನಡೆಸುತಿದ್ದ ವ್ಯಾಸರಾಯ ಗುರುಗಳಲ್ಲಿದ್ದ
ಕನಕದಾಸರನ್ನು ಶಿಷ್ಯರೆಲ್ಲರು ಆತನ‌ ಸಾಧನೆಯನ್ನು ಕುರಿತು
ಮತ್ಸರದಿಂದ ಟೀಕಿಸುತ್ತಿದ್ದರು. ಇದನ್ನರಿತ ಗುರುಗಳು
ಪರೀಕ್ಷೆಮಾಡಿ ಕನಕದಾಸರನ್ನು ಪ್ರಶ್ನೆ‌ ಮಾಡಿದರು. ನಮ್ಮಲ್ಲಿ
ಯಾರು ವೈಕುಂಠಕ್ಕೆ ಹೋಗುವರು ಎಂದು ಕೇಳಿದರು. ಆಗ
ಕನಕದಾಸರು ಯಾರು ಹೋಗುವುದಿಲ್ಲ ಎಂದರು. ಹಾಗಾದರೆ ಗುರುಗಳು ನಾನು ಹೋಗುವೆನೇನು ಎಂದು ಕೇಳಿದರು. ಅದಕ್ಕೆ ನೀವು ಹೋಗುವುದಿಲ್ಲ ನಾನು ಹೋದರೆ ಹೋದೇನು ಎಂದು ಉತ್ತರಿಸಿದ.ಶಿಷ್ಯರೆಲ್ಲರು ಇವನೆಂಥ ಗರ್ವಿಷ್ಠ ಗುರುಗಳು ಹೋಗುವುದಿಲ್ಲ ಇವನೊಬ್ಬನೆ ಹೋಗುವನಂತೆ ಎಂದರು. ಆಗ ಗುರುಗಳು ಅವರಿಗೆಲ್ಲ ಕನಕ ಹೇಳಿದ‌ ಮಾತು‌‌ ನಿಜವಿದೆ. ನಾನು ಎಂಬುವ ಅಹಂಕಾರ‌ ಹೋದರೆ ವೈಕುಂಠಕ್ಕೆ ಸುಲಭವಾಗಿ ಹೋಗಬಹುದು ಎಂದು ನಿಜಾರ್ಥ ತಿಳಿಸಿದರು. ಅಹಂಕಾರ ನಿರಸನವಾದರೆ ಆಧ್ಯಾತ್ಮದಲ್ಲಿ ಉನ್ನತಿ ಸಾಧಿಸಬಹುದು. ಅಹಂಕಾರ ನಿರಸನಕ್ಕೆ ಗುರುಹಿರಿಯರು ಮತ್ತು ಸಂತರಲ್ಲಿ ಸದ್ವಿನಯವಿರಬೇಕು.ಅದನ್ನೆ ಶರಣರ ಭೃತ್ಯಾಚಾರವೆಂದರು. ಕನಕನ ಮಾತು ಸಾಧಕನಿಗೆ ದಿಕ್ಸೂಚಿ. ಅದು ಸದಾ ನಮ್ಮ ನೆನಪಿನಲ್ಲಿರಬೇಕು. ಅಹಂಕಾರ‌ ತೊರೆದು ಕಿಂಕರನಾದರೆ ಶಂಕರ ತಾನಾಗುವನು

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group